ಐಫೋನ್‌ ಆರ್ಡರ್‌ ಮಾಡಿದವಳಿಗೆ ಬಂದಿದ್ದು ಆಪಲ್‌ ಜ್ಯೂಸ್‌..!

By Gizbot Bureau
|

2020ರಲ್ಲಿ ಆಪಲ್ ಐಫೋನ್‌ 12 ಪ್ರೋ ಮ್ಯಾಕ್ಸ್‌ ಫ್ಲಾಗ್‌ಶಿಪ್‌ ಫೋನ್‌ಗಳಲ್ಲಿ ಅತಿ ದುಬಾರಿ ಎಂಬ ಖ್ಯಾತಿಗಳಿಸಿದೆ. ಆದರೆ, 1.1 ಲಕ್ಷ ರೂಪಾಯಿ ಮೌಲ್ಯದ ಈ ಫೋನ್‌ನ್ನು ಆರ್ಡರ್‌ ಮಾಡಿದರೆ ಬಂದಿದ್ದು ಮಾತ್ರ ಆಪಲ್‌ ಜ್ಯೂಸ್‌. ಹೌದು, ಚೀನಾದ ಲಿಯು ಎಂಬ ಮಹಿಳೆ ಈ ರೀತಿ ವಂಚನೆಗೆ ಒಳಗಾಗಿದ್ದಾರೆ. ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಫೋನ್‌ ಬುಕ್‌ ಮಾಡಿದರೂ ಮೋಸ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ

ವೈಬೊದ ವರದಿ ಪ್ರಕಾರ, ಚೀನಾದ ಲಿಯು ಎಂಬಾಕೆ ಐಫೋನ್ 12 ಪ್ರೊ ಮ್ಯಾಕ್ಸ್‌ ಖರೀದಿಗಾಗಿ ಭಾರೀ ಮೊತ್ತವನ್ನೇ ಪಾವತಿಸಿದ್ದಳು. ಆದರೆ, ಐಫೋನ್‌ ಬದಲಿಗೆ ಆಕೆಗೆ ಆಪಲ್‌ ಜ್ಯೂಸ್‌ ಬಂದಿರುವುದು ವಂಚನೆಯ ಪ್ರಮುಖ ಅಂಶ. ಹೊಸ ಐಫೋನ್ ಖರೀದಿಗೆ 1,500 ಡಾಲರ್‌ಗಿಂತ ಹೆಚ್ಚು ಹಣ ಖರ್ಚು ಮಾಡಿದ್ದೇನೆ ಎಂದು ಅವರು ವಿವರಿಸಿದ್ದಾರೆ.

ಆಪಲ್‌ ಕಂಪನಿ

ಆಶ್ಚರ್ಯಕರ ಸಂಗತಿಯೆಂದರೆ, ಅವರು ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಫೋನ್‌ ಆರ್ಡರ್‌ ಮಾಡಿದ್ದಾರೆಯೇ ಹೊರತು ಥರ್ಡ್‌ ಪಾರ್ಟಿ ರಿಸೆಲ್ಲರ್‌ಗಳಿಂದಲ್ಲ. ಆಪಲ್‌ ಫೋನ್‌ ಬರುವಿಕೆಗಾಗಿ ಕಾಯುತ್ತಿದ್ದ ಲಿಯು ಐಫೋನ್‌ ಬದಲಿಗೆ ಆಪಲ್‌ ಜ್ಯೂಸ್‌ ನೋಡಿ ಆಘಾತಕ್ಕೊಳಗಾಗಿದ್ದಾಳೆ. ಆದರೆ, ಮಹಿಳೆ ನೇರವಾಗಿ ಹೋಮ್‌ ಡೆಲಿವರಿ ಆಯ್ಕೆ ಮಾಡದೇ ತನ್ನ ಲಾಕರ್‌ಗೆ ಪಾರ್ಸಲ್‌ ಕಳುಹಿಸುವ ಆಯ್ಕೆ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಆಪಲ್‌ ಮತ್ತು ಕೊರಿಯರ್‌ ಕಂಪನಿ

ಆಪಲ್‌ ಕಂಪನಿ ಮತ್ತು ಆಪಲ್‌ನ ಅಧಿಕೃತ ಕೊರಿಯರ್‌ ಕಂಪನಿ ಎಕ್ಸ್‌ಪ್ರೆಸ್‌ ಮೇಲ್‌ ಐಫೋನ್‌ 12 ಪ್ರೋ ಮ್ಯಾಕ್ಸ್‌ ಅನ್ನು ಡೆಲಿವರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಕಳ್ಳತನ ಯಾವಾಗ ಸಂಭವಿಸಿದೆ ಎಂಬುದು ಯಾರಿಗೂ ತಿಳಿದಿಲ್ಲವಾದರೂ, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದ್ದಾರೆ.

ಐಫೋನ್ 12 ಪ್ರೊ ಮ್ಯಾಕ್ಸ್

ಇನ್ನು, ಆಪಲ್‌ ಮತ್ತು ಕೊರಿಯರ್‌ ಕಂಪನಿಯು ಕೂಡ ತನಿಖೆಯನ್ನು ಮುಂದುವರೆಸಿವೆ. ಈ ಬಗ್ಗೆ ಸಿಬ್ಬಂದಿಯನ್ನು ನೇಮಿಸಿದ್ದು, ಐಫೋನ್ 12 ಪ್ರೊ ಮ್ಯಾಕ್ಸ್ ಪ್ರಕರಣವನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಕಂಪನಿ ಹೇಳಿದೆ. ಈ ಮೂಲಕ ವಂಚನೆ ಪ್ರಕರಣಕ್ಕೆ ತನಿಖೆಯ ಲೇಪನ ಬಳಿದಿದೆ.

Best Mobiles in India

Read more about:
English summary
Woman Orders Apple iPhone 12 Pro Max; Gets Apple Yogurt Drink Instead

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X