Home
ಸುದ್ದಿಜಾಲ

ಸ್ವಿಗ್ಗಿ ಅಕೌಂಟ್‌ ಮೂಲಕ ಮಹಿಳೆಗೆ ಪಂಗನಾಮ ಹಾಕಿದ ವಂಚಕರು!

ಹೆಚ್ಚುತ್ತಿರುವ ಆನ್‌ಲೈನ್‌ ಸ್ಕ್ಯಾಮ್‌ಗೆ ಇದೀಗ ಹೊಸ ಪ್ರಕರಣವೊಂದು ಸೇರ್ಪಡೆ ಆಗಿದೆ. ಸ್ವಿಗ್ಗಿ ಅಕೌಂಟ್‌ ಮೂಲಕ ಮಹಿಳೆಯೊಬ್ಬರಿಗೆ 97,000ರೂ ಮೌಲ್ಯದ ಆರ್ಡರ್‌ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸ್ವಿಗ್ಗಿ ಖಾತೆಯನ್ನು ಹ್ಯಾಕ್‌ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ವಿಚಾರವಾಗಿ ಇಬ್ಬರು ಸೈಬರ್ ಕ್ರಿಮಿನಲ್‌ಗಳನ್ನು ಇದೀಗ ಬಂಧಿಸಲಾಗಿದೆ.

ಹೌದು, ಹೊಸ ಆನ್‌ಲೈನ್ ಹಗರಣದಲ್ಲಿ, ಮಹಿಳೆಯ ಸ್ವಿಗ್ಗಿ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ವಂಚಕರು ಮಹಿಳೆಯ ಸ್ವಿಗ್ಗಿ ಖಾತೆಗೆ ಹ್ಯಾಕ್‌ ಮಾಡಿದ್ದು ಹೇಗೆ ಅನ್ನೋದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಮಹಿಳೆಯ ಸ್ವಿಗ್ಗಿ ಖಾತೆಯನ್ನು ಹ್ಯಾಕ್‌ ಮಾಡಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸ್ವಿಗ್ಗಿ ಅಕೌಂಟ್‌ ಮೂಲಕ ಮಹಿಳೆಗೆ ಪಂಗನಾಮ ಹಾಕಿದ ವಂಚಕರು!

ಆನ್‌ಲೈನ್‌ ವoಚನೆ ಪ್ರಕರಣಗಳಲ್ಲಿ ಇದು ವಿಶೇಷ ಪ್ರಕರಣವಾಗಿದೆ. ಸ್ವಿಗ್ಗಿ ಖಾತೆಯನ್ನು ಹ್ಯಾಕ್‌ ಮಾಡಿ ಅದರ ಮೂಲಕವೇ 97,000 ರೂ ಮೌಲ್ಯದ ಆರ್ಡರ್ ಅನ್ನು ಅವರ ವಿಳಾಸಕ್ಕೆ ಮಾಡಿದ್ದಾರೆ. ಹಿಗೆ ಮಾಡಿದ ಇಬ್ಬರು ಸೈಬರ್ ಕ್ರಿಮಿನಲ್‌ಗಳನ್ನು ಇದೀಗ ಬಂಧಿಸಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 25 ವರ್ಷ ವಯಸ್ಸಿನ ಅನಿಕೇತ್ ಕಲ್ರಾ ಮತ್ತು 23 ವರ್ಷ ವಯಸ್ಸಿನ ಹಿಮಾಂಶು ಕುಮಾರ್ ಎನ್ನುವ ವಂಚಕರು 26 ವರ್ಷದ ಮಹಿಳೆಯೊಬ್ಬರಿಗೆ ಈ ರೀತಿಯ ವಂಚನೆ ಮಾಡಿದ್ದಾರೆ.

ಮೊದಲಿಗೆ ಮಹಿಳೆಯ ಸ್ವಿಗ್ಗಿ ಖಾತೆಯ ಮೂಲಕ ಸುಮಾರು 1 ಲಕ್ಷ ರೂಪಾಯಿಗಳನ್ನು ನೀಡುವಂತೆ ಹೇಳಿದ್ದಾರೆ. ನಂತರ ಸ್ವಿಗ್ಗಿಯೊಂದಿಗೆ ಸಂಪರ್ಕ ಹೊಂದಿದ್ದ ತನ್ನ ಲೇಜಿ ಪೇ ಖಾತೆಯಿಂದ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗೆ ವಂಚಕರು ಮಹಿಳೆಯ ಖಾತೆಯಿಂದ ಬರೋಬ್ಬರಿ 97,197 ರೂಪಾಯಿಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ವಿಗ್ಗಿ ಖಾತೆ ಮೂಲಕ ವಂಚಿಸಿದ್ದು ಹೇಗೆ?
ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಎಂಬ ವಿಶೇಷ ಫೋನ್ ವ್ಯವಸ್ಥೆಯನ್ನು ಬಳಸಿಕೊಂಡು ಹ್ಯಾಕರ್‌ಗಳು ಮಹಿಳೆಯನ್ನು ವಂಚಿಸಿದ್ದಾರೆ. ಮೊದಲಿಗೆ ತಡರಾತ್ರಿ ಸಮಯದಲ್ಲಿ ಮಹಿಳೆಗೆ ಹುಸಿ ಕರೆ ಮಾಡಿದ್ದಾರೆ. ಈ ಕರೆಯನ್ನು ಸ್ವಿಗ್ಗಿಯ ಅಧಿಕೃತ ವ್ಯವಸ್ಥೆಯಿಂದ ಬಂದ ಕರೆಯೆಂದು ಆಕೆಗೆ ತಿಳಿಸಿದ್ದಾರೆ. ನಂತರ ಆಕೆಯ ಸ್ವಿಗ್ಗಿ ಖಾತೆಯನ್ನು ಯಾರೋ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅದು ಹೇಳಿದೆ. ಆದರೆ ಇದು ವಂಚಕರು ಮಾಡಿದ ದೊಡ್ಡ ನಾಟಕವಾಗಿದೆ.

ವಂಚಕರು ನಿಮ್ಮ ಸ್ವಿಗ್ಗಿ ಅಕೌಂಟ್‌ ಅಪಾಯದಲ್ಲಿದೆ ಎಂದು ಭಾವಿಸುವಂತೆ ನಕಲಿ ಕರೆಯನ್ನು ಮಾಡಿದ್ದಾರೆ. ಇದರಿಂದ ನಿಮ್ಮನ್ನು ರಕ್ಷಿಸಲು, ಕೆಲವು ಮಾಹಿತಿಯನ್ನು ನೀಡುವಂತೆ ಕೇಳಿದೆ. ವಂಚಕರು ಜಾಡನ್ನು ಅರಿಯದ ಮಹಿಳೆ ತನ್ನ ಬಳಕೆದಾರಹೆಸರು, ಪಾಸ್‌ವರ್ಡ್ ಅಥವಾ ಬಹುಶಃ ತನ್ನ ಬ್ಯಾಂಕ್ ಮಾಹಿತಿಯಂತಹ ಖಾಸಗಿ ವಿವರಗಳನ್ನು ನೀಡಿದ್ದಾಳೆ. ಈ ಮಾಹಿತಿಯನ್ನು ಪಡೆದುಕೊಂಡ ಹ್ಯಾಕರ್‌ಗಳು ಮಹಿಳೆಯ ಸ್ವಿಗ್ಗಿ ಖಾತೆಗೆ ಸುಲಭವಾಗಿ ಲಾಗ್ ಇನ್ ಆಗಿದ್ದಾರೆ. ಅಲ್ಲದೆ ಸಾಕಷ್ಟು ಹಣದ ಮೌಲ್ಯದ ಆನ್‌ಲೈನ್ ಆರ್ಡರ್‌ಗಳನ್ನು ಮಾಡಿದ್ದಾರೆ. ಸ್ವಿಗ್ಗಿಗೆ ಲಿಂಕ್ ಆಗಿದ್ದ ಆಕೆಯ ಲೇಜಿ ಪೇ ಖಾತೆಯಿಂದ ಸುಮಾರು 1 ಲಕ್ಷ ರೂಪಾಯಿ ಕದಿಯಲು ಅವರು ಯಶಸ್ವಿಯಾಗಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬರಾದ ಕಲ್ರಾ ಅವರು ಝೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಈತ ಆನ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವುದು, ನಂತರ ಲಾಭಕ್ಕಾಗಿ ಅವುಗಳನ್ನು ಮರುಮಾರಾಟ ಮಾಡುವ ಕೆಲಸ ಮಾಡುವುದು. ಈ ಮೂಲಕ ಸುಮಾರು 5-10% ಅನ್ನು ಸೇವ್‌ ಮಾಡುವುದು ಇವರ ಕಾಯಕವಾಗಿದೆ.

ಈ ಮೂಲಕ ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಹೊಂದಿರುವ ಸ್ವಿಗ್ಗಿ ಖಾತೆಗಳನ್ನು ಟಾರ್ಗೆಟ್‌ ಮಾಡಿ ಅವರಿಗೆ ವಂಚಿಸುವ ಕಾಯಕ ಮಾಡಿದ್ದಾರೆ. ಕ್ರೆಡಿಟ್‌ ಕಾರ್ಡ್‌ ಲಿಂಕ್ ಮಾಡಿದ ಜನರ ಡೇಟಾಗೆ ಅನ್ಶ್ ಪ್ರವೇಶವನ್ನು ಹೊಂದುವ ಮೂಲಕ ನಕಲಿ ಫೋನ್ ಕರೆಗಳನ್ನು ಮಾಡುವುದು ಮುಂದುವರೆಸಿದ್ದಾರೆ. ಈ ಕರೆಗಳು ಸ್ವಿಗ್ಗಿಯ ಅಧಿಕೃತ ವ್ಯವಸ್ಥೆಯಿಂದ ಬಂದವು ಎಂದು ಜನರಿಗೆ ಹೇಳುವ ಮೂಲಕ ಅವರ ಖಾತೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ.

Best Mobiles in India

English summary
Woman's Swiggy account hacked Rs 97,000 spent by hackers on order
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+