ಹೊಸ ಸೇಪ್ಟಿ ಫೀಚರ್ಸ್ ಪರಿಚಯಿಸಿದ ಡೇಟಿಂಗ್ ಸೈಟ್ ಬಂಬಲ್!
ಇತ್ತೀಚಿನ ದಿನಗಳಲ್ಲಿ ಚಾಟಿಂಗ್ ಆಪ್ಸ್ ಜೊತೆಗೆ ಡೇಟಿಂಗ್ ಅಪ್ಲಿಕೇಶನ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಬಳಕೆದಾರರು ತಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡಕಲು ಡೇಟಿಂಗ್ ಆಪ್‌ನತ್ತ ಒಲವು ತೋರುತ್ತಿದ್ದಾರೆ. ಸದ್ಯ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು. ಇವುಗಳಲ್ಲಿ ಬಂಬಲ್ ಅಪ್ಲಿಕೇಶನ್ ಕೂಡ ಒಂದಾಗಿದೆ. ಇದು ಮಹಿಳೆಯರ ಮೊದಲ ಡೇಟಿಂಗ್ ಅಪ್ಲಿಕೇಶನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದೀಗ ತನ್ನ ಬಳಕೆದಾರರಿಗಾಗಿ ಹೊಸ ಸೇಫ್ಟಿ ಫೀಚರ್ಸ್ ಅನ್ನು ಪರಿಚಯಿಸಿದೆ.

ಹೌದು, ಮಹಿಳೆಯರ ಮೊದಲ ಡೇಟಿಂಗ್ ಅಪ್ಲಿಕೇಶನ್ ಬಂಬಲ್ 'ಸ್ಟ್ಯಾಂಡ್ ಫಾರ್ ಸೇಫ್ಟಿ' ಎಂಬ ಹೊಸ ಸೇಫ್ಟಿ ಗೈಡ್ ಅನ್ನು ಪರಿಚಯಿಸಿದೆ. ಇದು ಪಬ್ಲಿಕ್ ಸೇಫ್ಟಿ ಪ್ಲಾಟ್‌ಫಾರ್ಮ್ ಸೇಫ್ಸಿಟಿ ಸಹಭಾಗಿತ್ವದಲ್ಲಿ, ರೆಡ್ ಡಾಟ್ ಫೌಂಡೇಶನ್ ಒಡೆತನದಲ್ಲಿದೆ. ಈ ಮೂಲಕ, ಡೇಟಿಂಗ್ ಸೈಟ್‌ನಲ್ಲಿ ಯಾವುದೇ ರೀತಿಯ ದ್ವೇಷ, ಇತರೆ ತೊಂದರೆಗಳಿಗೆ ಒಳಗಾಗದಂತೆ ತಡೆಯುವ ಹಾಗೂ ಶೂನ್ಯ-ಸಹಿಷ್ಣು ನೀತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಬಂಬಲ್ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಹೊಸ ಫಿಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡೇಟಿಂಗ್ ಅಪ್ಲಿಕೇಶನ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 83% ಮಹಿಳೆಯರು ಆನ್‌ಲೈನ್‌ನಲ್ಲಿ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮೂರು ಮಹಿಳೆಯರಲ್ಲಿ ಒಬ್ಬರು ವಾರಕ್ಕೊಮ್ಮೆ ಕಿರುಕುಳ ಅನುಭವಿಸುತ್ತಾರೆ ಎನ್ನಲಾಗಿದೆ. ಇದಲ್ಲದೆ, 2020 ರಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಸೈಬರ್ ಬೆದರಿಕೆ ಹೆಚ್ಚಾಗಿದೆ ಎಂದು 70% ಮಹಿಳೆಯರು ನಂಬಿದ್ದಾರೆ. ಸಮೀಕ್ಷೆಯ ಅರ್ಧದಷ್ಟು (59%) ಮಹಿಳೆಯರು ತಾವು ಅಸುರಕ್ಷಿತರೆಂದು ಭಾವಿಸಿದ್ದಾರೆ ಮತ್ತು ಅರ್ಧಕ್ಕಿಂತ ಕಡಿಮೆ (48%) ಜನರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಬಂಬಲ್ ಅಪ್ಲಿಕೇಶನ ಬಳಸುವವರಿಗೆ ಭೌಗೋಳಿಕ-ನಿರ್ದಿಷ್ಟ ವೈಶಿಷ್ಟ್ಯವಾಗಿ, ಮಹಿಳೆ ತನ್ನ ಪ್ರೊಫೈಲ್ ಅನ್ನು ಅಪ್ಲಿಕೇಶನ್‌ನಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಇದರಲ್ಲಿ ಯಾವುದೇ ಮಹಿಳೆ ಪ್ರೊಫೈಲ್ ಅನ್ನು ರಚಿಸಲು ತನ್ನ ಹೆಸರಿನ ಮೊದಲ ಆರಂಭಿಕ ಅಕ್ಷರವನ್ನನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಸೂಕ್ತವಲ್ಲದ ನಡವಳಿಕೆಯನ್ನು ಪ್ರದರ್ಶಿಸುವವರ ವಿರುದ್ಧ ಬ್ಲಾಕ್ ಮತ್ತು ವರದಿ ಮಾಡುವುದಕ್ಕೆ ಈ ಅಪ್ಲಿಕೇಶನ್ ಅನುಮತಿಸುತ್ತದೆ.

ಇನ್ನು "ಬಂಬಲ್ಸ್ ಸ್ಟ್ಯಾಂಡ್ಸ್ ಫಾರ್ ಸೇಫ್ಟಿ ಇನಿಶಿಯೇಟಿವ್ ಮೂಲಕ, ಡಿಜಿಟಲ್ ನಿಂದನೆಯನ್ನು ಅರ್ಥಮಾಡಿಕೊಳ್ಳಲು ಇದರಲ್ಲಿ ಸಾಧ್ಯವಾಗಲಿದೆ. ರೆಡ್ ಡಾಟ್ ಫೌಂಡೇಶನ್‌ನ ಸಂಸ್ಥಾಪಕ ಎಲ್ಸಾ ಮೇರಿ ಡಿ'ಸಿಲ್ವಾ, ಕಿರುಕುಳ ಮತ್ತು ಬೆದರಿಸುವಿಕೆಯಿಂದಾಗಿ ಆನ್‌ಲೈನ್ ಸ್ಥಳಗಳಲ್ಲಿ ಅನೇಕ ಮಹಿಳೆಯರು ಮೌನ ಮತ್ತು ಬೆದರಿಕೆಗೆ ಒಳಗಾಗುತ್ತಾರೆ. ರೆಡ್ ಡಾಟ್ ಫೌಂಡೇಶನ್ ಲಿಂಗ, ತಂತ್ರಜ್ಞಾನ, ಸಂವಹನ, ದತ್ತಾಂಶ ಮತ್ತು ನಗರ ಯೋಜನೆ ಸೆನ್ಸಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಸುರಕ್ಷತೆ ಇದರ ಪ್ರಮುಖ ಗುರಿಯಾಗಿದೆ. ಸದ್ಯ ಸ್ಟ್ಯಾಂಡ್ ಫಾರ್ ಸೇಫ್ಟಿ ಫೀಚರ್ಸ್ ಮೂಲಕ ಡೇಟಿಂಗ್ ಪ್ರಿಯರ ರಕ್ಷಣೆಗೆ ಮುಂದಾಗಿದೆ.


Click it and Unblock the Notifications