ಮಹಿಳೆಯರೇ ಐಪ್ಯಾಡ್ ಅತಿಯಾಗಿ ಬಳಸುತ್ತಿದ್ದಿರಾ?! ಹಾಗಾದ್ರೇ ಈ ಸ್ಟೋರಿ ನೋಡಿ!!!

By GizBot Bureau
|

ಈ ಹೆಡ್ ಲೈನ್ ಓದಿ ಶಾಕ್ ಆಗಿರಬೇಕಲ್ಲ.. ಎಸ್.. ನಿಜ. ಅಧ್ಯಯನವೊಂದು ಮಹಿಳೆಯರು ಐಪ್ಯಾಡ್ ಅತಿಯಾಗಿ ಬಳಸುವುದರಿಂದ ಏನಾಗುತ್ತದೆ ಎಂಬ ಬಗ್ಗೆ ಮಾಹಿತಿ ಹೊರಹಾಕಿದೆ ಮತ್ತು ಇದರಲ್ಲಿ ಭಯ ಹುಟ್ಟಿಸೋ ಸುದ್ದಿಯೊಂದು ಇದೆ. ಅದೇನು ಅಂತ ಕೇಳ್ತಿದ್ದೀರಾ.

ಐಪ್ಯಾಡ್ ಅತಿಯಾಗಿ ಮಹಿಳೆಯರು ಬಳಸುವುದರಿಂದಾಗಿ ಮಹಿಳೆಯರಿಗೆ ಭಯಾನಕ ಕಾಯಿಲೆಗಳು ಬರುತ್ತವೆಯಂತೆ.. ಐಪ್ಯಾಡ್ ಬಳಸುವಾಗ ಅವರು ಕುಳಿತುಕೊಳ್ಳುವ ತಪ್ಪು ಭಂಗಿಗಳಿಂದಾಗಿ ಅವರ ಕುತ್ತಿಗೆ ಮತ್ತು ತೋಳಿನ ಮೇಲ್ಭಾಗದಲ್ಲಿ ಅಸಾಧ್ಯ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇದನ್ನು ಐಪ್ಯಾಡ್ ನೆಕ್ ಎಂದು ಕರೆಯಲಾಗಿದೆ.

ಮಹಿಳೆಯರೇ ಐಪ್ಯಾಡ್ ಅತಿಯಾಗಿ ಬಳಸುತ್ತಿದ್ದಿರಾ?! ಹಾಗಾದ್ರೇ ಈ ಸ್ಟೋರಿ ನೋಡಿ!!!

ಜರ್ನಲ್ ಆಫ್ ಫಿಸಿಕಲ್ ಥೆರಪಿ ಸೈನ್ಸ್ ನಡೆಸಿದ ಅಧ್ಯಯನದ ಪ್ರಕಾರ ಅದು ಕೆಲವು ಮಾಹಿತಿಗಳನ್ನು ಪ್ರಕಟ ಪಡಿಸಿದ್ದು, ಐಪ್ಯಾಡ್ ನೆಕ್ ಅಂದರೆ, ಬೆನ್ನಿಗೆ ಸರಿಯಾದ ಬೆಂಬಲ ನೀಡಿ ಕುಳಿತುಕೊಳ್ಳದೇ ಐಪ್ಯಾಡ್ ನ್ನು ಬಳಕೆ ಮಾಡಿ ಬರಿಸಿಕೊಳ್ಳುವ ಕಾಯಿಲೆ., ಅಥವಾ ಮಲಗಿಯೋ ಇಲ್ಲ ಅಡ್ಡವಾಗಿ ಬೋರಲಾಗಿ ಐಪ್ಯಾಡ್ ಬಳಕೆ ಮಾಡುವುದರಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.

ನೇವಡಾ ವಿಶ್ವವಿದ್ಯಾಲಯ, ಲಾಸ್ ವೇಗಾಸ್(UNLV) ಅಮೇರಿಕಾದಲ್ಲಿ ನಡೆಸಿದ ಸಂಶೋಧನೆಯಲ್ಲಿ 412 ಮಂಡಿಯನ್ನು ಸರ್ವೇಗೆ ಬಳಸಲಾಗಿತ್ತು ಮತ್ತು ಅವರಲ್ಲಿ ಹೆಚ್ಚಿನವರು ಕುತ್ತಿಗೆ ಮತ್ತು ತೋಳಿನ ಸಮಸ್ಯೆಯ ದೂರನ್ನು ನೀಡಿದ್ದರು. ಬಹಳ ಸಾಮಾನ್ಯವಾಗಿ ಗೋಚರಿಸಿದ ಕಾಯಿಲೆಯ ಚಿನ್ಹೆಗಳೆಂದರೆ ಕುತ್ತಿಗೆ, ಹಿಂಭಾಗ, ಭುಜ, ತೋಳು, ಕೈ, ಅಥವಾ ತಲೆಯಲ್ಲಿ ನೋವು ನೋವು ಕಾಣಿಸಿಕೊಳ್ಳುವುದು.

ಬೆನ್ನಿಗೆ ಸರಿಯಾಗಿ ಬೆಂಬಲವಿಲ್ಲದೆ ಕೂರುವುದು, ತೊಡೆಯ ಮೇಲೆ ಡಿವೈಸ್ ಇಟ್ಟುಕೊಂಡು ಕೂರುವುದು, ಖುರ್ಚಿಯಲ್ಲಿ ಕುಳಿತು ಸಮತಟ್ಟಾದ ಪ್ರದೇಶದಲ್ಲಿ ಡಿವೈಸ್ ಇಟ್ಟುಕೊಳ್ಳುವುದು ಮುಂತಾದ ತಪ್ಪು ಭಂಗಿಗಳು ಈ ಸಮಸ್ಯೆಗೆ ಕಾರಣವಾಗಿದೆ.

ಮಹಿಳೆಯರೇ ಐಪ್ಯಾಡ್ ಅತಿಯಾಗಿ ಬಳಸುತ್ತಿದ್ದಿರಾ?! ಹಾಗಾದ್ರೇ ಈ ಸ್ಟೋರಿ ನೋಡಿ!!!

ಅತೀ ಹೆಚ್ಚು ಸಮಯ ಕುತ್ತಿಗೆಯನ್ನು ಸ್ಟ್ರೆಚ್ ಮಾಡಿಯೇ ಇರುವುದರಿಂದಾಗಿ ಕುತ್ತಿಗೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕುತ್ತಿಗೆ, ತೋಳುಗಳ ನೋವು ಪ್ರಾರಂಭವಾಗುತ್ತದೆ. ಇನ್ನು ಇದನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರು 2.059 ಬಾರಿ ಮಾಂಸಖಂಡಗಳು ಹಿಡಿದಂತಾದ ಸಮಸ್ಯೆಯನ್ನು ಅನುಭವಿಸುತ್ತಾರಂತೆ,

ಈ ಚಿಹ್ನೆಗಳನ್ನು ಸುಮಾರು 70 ಶೇಕಡಾ ಮಂದಿ ಮಹಿಳೆಯರು ಅನುಭವಿಸಿದ್ದಾರೆ. ಪುರುಷರಿಗೆ ಹೋಲಿಸಿದರೆ ಶೇಕಡಾ 30 ರಷ್ಟು ಮಂದಿ ಮಹಿಳೆಯರೇ ಹೆಚ್ಚಿದ್ದಾರೆ. ಅರ್ಥಾತ್ ಪುರುಷರು ಮಹಿಳೆಯರಿಗಿಂತ ಫ್ಲೋರ್ ನಲ್ಲಿ ಕುಳಿತು ಹೆಚ್ಚು ಡಿವೈಸ್ ನ್ನು ಬಳಸುತ್ತಿದ್ದಾರೆ.

“ ಸೈಧ್ದಾಂತಿಕವಾಗಿ ಹೇಳುವುದಾದರೆ. ಯಾರು ಹೆಚ್ಚು ಸಮಯ ಐಪ್ಯಾಡ್ ಬಳಸುತ್ತಾರೋ ಅಂತವರು ಕುತ್ತಿಗೆ ಮತ್ತು ತೋಳಿನ ನೋವಿನ ಸಮಸ್ಯೆಯ ಅನುಭವ ಪಡೆಯುತ್ತಾರೆ. ಆದರೆ ನಾವು ಏನನ್ನು ಗಮನಿಸಿದ್ದೇವೆ ಅಂದರೆ ರಿಸ್ಕ್ ಫ್ಯಾಕ್ಟರ್ ಉದ್ಭವವಾಗುವುದು ಕೇವಲ ಸಮಯದಿಂದ ಅಳತೆಯಿಂದ ಮಾತ್ರವಲ್ಲ ಬದಲಾಗಿ ಭಂಗಿ ಮತ್ತು ಲಿಂಗವೂ ಪ್ರಾಮುಖ್ಯತೆ ಪಡೆಯುತ್ತದೆ” ಎಂದು ತಿಳಿಸುತ್ತಾರೆ UNLV ಯ ಪ್ರೊಫೆಸರ್ ಆಗಿರುವ ಸೂ-ಪಿಂಗ್-ಲೀ.

ಅಧ್ಯಯನದ ಪ್ರಕಾರ ಮಹಿಳೆಯರಿಗೆ ಸ್ನಾಯುಗಳ ಬಲವು ಕಡಿಮೆ ಇರುತ್ತದೆ ಮತ್ತು ಸಣ್ಣ ಗಾತ್ರದಲ್ಲಿರುತ್ತದೆ ಅದು ಟೈಪಿಂಗ್ ಮಾಡುವಾಗ ತೀವ್ರ ಭಂಗಿಗಳಿಗೆ ಕಾರಣವಾಗುತ್ತದೆ.ಹಾಗಾಗಿ ಲಿಂಗದ ಪ್ರಾಮುಖ್ಯತೆ ಸಮಸ್ಯೆಯಲ್ಲಿ ಬಹಳವಾಗಿ ಕಾಣಿಸುತ್ತದೆ. ಪುರುಷರಿಗೆ ಹೋಲಿಸದರೆ ಮಹಿಳೆಯರೇ ಹೆಚ್ಚು ಸಮಸ್ಯೆಗೆ ಸಿಲುಕುತ್ತಾರೆ.

ಇನ್ನೊಂದು ಪ್ರಮುಖ ವಿಚಾರ ಅಂದರೆ, ವಿದ್ಯಾರ್ಥಿನಿಯರು ಹೆಚ್ಚು ಇಂತಹ ಸಮಸ್ಯೆಗೆ ಬಳಲುತ್ತಾರೆ. ಸಂಬಂಧಿಸಿದ ಕೆಲಸದ ಜಾಗದಲ್ಲಿ ಸರಿಯಾಗಿ ಕುಳಿತುಕೊಳ್ಳದೇ ಇರುವುದು ಅಥವಾ ಪ್ರಯಾಣದ ಜಾಗದಲ್ಲಿ ಆರಾಮಾಗಿ ಕುಳಿತುಕೊಳ್ಳದೆ ಡಿವೈಸ್ ಬಳಸುವುದು ಉದಾಹರಣೆಗೆ ಕ್ರಾಸ್ ಲೆಗ್ ನಲ್ಲಿ ಕುಳಿತು ಟ್ಯಾಬ್ಲೆಟ್ ಬಳಕೆ ಮಾಡುವುದು ಸಮಸ್ಯೆಗೆ ಕಾರಣವಾಗುತ್ತದೆಯಂತೆ..

ಆದರೆ , ಅಧ್ಯಯನದಲ್ಲಿ ಕೇವಲ ಶೇಕಡಾ 46 ರಷ್ಟು ಮಂದಿ ಡಿವೈಸ್ ನ್ನು ಇನ್ನು ಮುಂದೆ ಇಂತಹ ಅಸ್ವಸ್ಥತೆಯ ಅನುಭವವಾದಾಗ ಬಳಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಆದರೆ ಆಶ್ಚರ್ಯವೆಂದರೆ ಇಲ್ಲಿ ಮಹಿಳೆಯರೇ ಹೆಚ್ಚು ಸಮಸ್ಯೆಗೆ ಸಿಲುಕುತ್ತಾರೆ ಎಂಬ ವಿಷಯ... ಹಾಗಾಗಿ ಮಹಿಳೆಯರು ಡಿವೈಸ್ ಬಳಕೆ ಮಾಡುವ ಮುನ್ನ ಸ್ವಲ್ಪ ಯೋಚಿಸಿ..

Best Mobiles in India

English summary
Women, here's why too much time on iPad can be 'dangerous' for you. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X