ಫೆ.2022ರಲ್ಲಿ ಮಹಿಳೆಯರು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಯಾವುದಕ್ಕೆ ನೀಡಿದ್ದಾರೆ?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಇ-ಕಾಮರ್ಸ್‌ ಉದ್ಯಮ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಂತೆ ಮಹಿಳಾ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ. ಇನ್ನು ಮಹಿಳೆಯರು ಸ್ಮಾರ್ಟ್‌ಫೋನ್‌ ಬಳಸುವಾಗ ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಯಾವ ವಿಚಾರದಲ್ಲಿ ಕಳೆಯುತ್ತಾರೆ ಅನ್ನೊ ಕುತೂಹಲ ಇದೆ. ಈ ಕುತೂಹಲಕ್ಕೆ ಉತ್ತರವಾಗಿ ವರದಿಯೊಂದು ಬಹಿರಂಗವಾಗಿದೆ. ಅದರಂತೆ ಭಾರತೀಯ ಮಹಿಳೆಯರು ಆನ್‌ಲೈನ್‌ನಲ್ಲಿ ಶಿಕ್ಷಣ ಮತ್ತು ಹಣಕಾಸು ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಹೆಚ್ಚಿನ ಸಮಯ ಕಳೆಯುತ್ತಾರೆ ಎಂದು ಹೇಳಿದೆ.

ಸ್ಮಾರ್ಟ್‌ಫೋನ್‌

ಹೌದು, ಮಹಿಳಾ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್ಚಿನ ಮಹಿಳೆಯರು ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್‌ ಶಾಪಿಂಗ್‌ಗಾಗಿ ಬಳಸುವುದಕ್ಕೆ ಇಷ್ಟ ಪಡುತ್ತಾರೆ. ಆದರೆ ಸದ್ಯದ ವರದಿ ಪ್ರಕಾರ ಹೆಚ್ಚಿನ ಮಹಿಳೆಯರು ಆನ್‌ಲೈನ್‌ನಲ್ಲಿ ಶಿಕ್ಷಣ ಹಾಗೂ ಹಣಕಾಸು ಸಂಬಂಧಿತ ಅಪ್ಲಿಕೇಶನ್‌ಗಳಲ್ಲಿ ಕಳೆಯುತ್ತಾರೆ ಎಂದು ಹೇಳಲಾಗಿದೆ. ಜೊತೆಗೆ ಸಂವಾದ ಮಾಧ್ಯಮ ವೇದಿಕೆಗಳಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಸಮಯವನ್ನು ಕಳೆಯಲು ಉತ್ಸುಕರಾಗಿದ್ದಾರೆ ಎಂದು ಬಾಬಲ್ ಎಐ ವರದಿ ಮಾಡಿದೆ. ಹಾಗಾದ್ರೆ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಮಹಿಳಾ ಸ್ಮಾರ್ಟ್‌ಫೋನ್‌ ಬಳಕೆದಾರರು ಫೆಬ್ರವರಿ 2022ರಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಯಾವ ವಿಚಾರಕ್ಕೆ ನೀಡಿದ್ದಾರೆ ಎನ್ನುವ ವರದಿ ಬಹಿರಂಗವಾಗಿದೆ. ಈ ವರದಿ ಪ್ರಕಾರ ಭಾರತದಲ್ಲಿ ಆರು ಪ್ರಮುಖ ಕ್ಷೇತ್ರಗಳಿಗೆ ಅಂದರೆ ಇ-ಕಾಮರ್ಸ್, ಸೌಂದರ್ಯ, ಫ್ಯಾಷನ್ ಇ-ಕಾಮರ್ಸ್, ಹೆಲ್ತ್‌ ಆಂಡ್‌ ಫಿಟ್‌ನೆಸ್, ಹಣಕಾಸು, ಶಿಕ್ಷಣದ ಮೇಲೆ ಮಹಿಳಾ ಬಳಕೆದಾರರು ಹೆಚ್ಚಿನ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಅದರಂತೆ ಹೆಚ್ಚಿನ ಮಹಿಳೆಯರು ಹಣಕಾಸು ಮತ್ತು ಶಿಕ್ಷಣದ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂದಾಗಿರುವುದು ಅಶಾಧಾಯಕ ಬೆಳವಣಿಗೆಯಾಗಿದೆ. ಇದು ಭಾರತೀಯ ಸಮಾಜದಲ್ಲಿ ನೆಲಮಟ್ಟದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ.

ಮಹಿಳೆಯರು

ಇದರಲ್ಲಿ ಮಹಿಳೆಯರು ತಮ್ಮ ವ್ಯಕ್ತಿತ್ವ ಮತ್ತು ಜೀವನಶೈಲಿಯ ಆಯ್ಕೆಗಳ ಬಗ್ಗೆ ತಿಳಿದಿರುವುದಿಲ್ಲ. ಆದರೆ ಅವರು ತಮ್ಮ ಶಿಕ್ಷಣ, ವೃತ್ತಿ, ಬೆಳವಣಿಗೆ, ಆರ್ಥಿಕತೆಯ ಬಗ್ಗೆ ಸಮಾನವಾಗಿ ಕಾಳಜಿ ವಹಿಸುತ್ತಾರೆ ಎಂದು ವರದಿಯಾಗಿದೆ. ಯೋಜನೆ ಮತ್ತು ಆರ್ಥಿಕ ಸ್ವಾತಂತ್ರ್ಯ," ತಬ್ರೇಜ್ ಆಲಂ, ಮುಖ್ಯ ಡೇಟಾ ಮತ್ತು ಕಾರ್ಯತಂತ್ರ ಅಧಿಕಾರಿ ಡೇಟಾ ಸ್ಟ್ರಾಟಜೀಸ್, ಬಾಬಲ್ ಎಐ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದರಂತೆ ಇ-ಕಾಮರ್ಸ್ 66.28% ಮಾರುಕಟ್ಟೆ ಪಾಲನ್ನು ದಾಖಲಿಸಿದೆ. ಹಾಗೆಯೇ ವಿಶ್ಲೇಷಿಸಿದ ಇತರ ವರ್ಗಗಳಿಗೆ ಹೋಲಿಸಿದರೆ ಸುಮಾರು 71% ಸಕ್ರಿಯ ಬಳಕೆದಾರರು ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಮಾಸಿಕ ಆಧಾರದ ಮೇಲೆ ಬಳಕೆದಾರರು ಹಣಕಾಸು ಮತ್ತು ಶಿಕ್ಷಣ ಅಪ್ಲಿಕೇಶನ್‌ಗಳಲ್ಲಿ ಖರ್ಚು ಮಾಡುವ ಸರಾಸರಿ ಸಮಯದ ಹೆಚ್ಚಳವನ್ನು ಡೇಟಾ ಬಹಿರಂಗಪಡಿಸಿದೆ ಎಂದು ಕಂಪನಿ ಹೇಳಿದೆ.

ಮಹಿಳಾ

ಇನ್ನು ಫೆಬ್ರವರಿ 2022 ರಲ್ಲಿ, ಮಹಿಳಾ ಬಳಕೆದಾರರು ತಿಂಗಳಿಗೆ ಸರಾಸರಿ ಎರಡು ಗಂಟೆಗಳ ಕಾಲ ಹಣಕಾಸು ಆಪ್‌ಗಳಲ್ಲಿ ಕಳೆದಿದ್ದಾರೆ. ಇತರ ವರ್ಗಗಳಿಗೆ ಹೋಲಿಸಿದರೆ ಅವರ ಮಾರುಕಟ್ಟೆ ಪಾಲು ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಶಿಕ್ಷಣ ಅಪ್ಲಿಕೇಶನ್‌ಗಳಲ್ಲಿ ತಿಂಗಳಿಗೆ ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇದರೊಂದಿಗೆ ಇ-ಕಾಮರ್ಸ್‌ನಲ್ಲಿ ಸರಾಸರಿ ಸಮಯ 42 ನಿಮಿಷಗಳು, ಸೌಂದರ್ಯ (19 ನಿಮಿಷಗಳು), ಫ್ಯಾಷನ್ ಇ-ಕಾಮರ್ಸ್ (25 ನಿಮಿಷಗಳು) ಮತ್ತು ಆರೋಗ್ಯ ಮತ್ತು ಫಿಟ್‌ನೆಸ್ (20 ನಿಮಿಷಗಳು) ಸಮಯ ಮೀಸಲಿಡುತ್ತಾರೆ ಎಂದು ವರದಿಯಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್ 65.6% ಹೊಸ ಮಹಿಳಾ ಬಳಕೆದಾರರನ್ನು ಸೆಳೆದಿದೆ. ಆದರೆ ಇದೇ ಸಮಯದಲ್ಲಿ ಅಮೆಜಾನ್ 34.4% ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಯಾಗಿದೆ.

Best Mobiles in India

English summary
Women spend more time on finance, education apps, claims report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X