ವರ್ಕ್‌ ಫ್ರಮ್‌ ಹೋಂ: ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಅನುಸರಿಸಬೇಕಾದ ಕ್ರಮಗಳು!

|

ಇಂದು ಜಗತ್ತು ಕೊರೊನಾ ವೈರಸ್‌ ನಿಂದ ತತ್ತರಿಸಿ ಹೋಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಕೊರೊನಾ ಸಂಕೋಲೆಯಿಂದ ಹೊರಬರಲು ಹವಣಿಸುತ್ತಿವೆ. ಚೀನಾ, ಅಮೆರಿಕಾ,ಇಟಲಿ, ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲು ಲಾಕ್‌ಡೌನ್‌ ಆದೇಶ ಘೋಷಿಸಲಾಗಿದೆ. ಅಲ್ಲದೆ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಂ ನಿಡಿ ಕಳುಹಿಸಿವೆ. ಇದೇ ಕಾರಣಕ್ಕೆ ಐಟಿ ಬಿಟಿ ಉಧ್ಯೋಗಿಗಳೆಲ್ಲಾ ತಮ್ಮ ಮನೆಗಳಲ್ಲಿಯೇ ಕುಳಿತು ತಮ್ಮ ಕಾರ್ಯ ಕೆಲಸವನ್ನ ನಿರ್ವಹಿಸುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಹ್ಯಾಕರ್ಸ್‌ಗಳ ಭೀತಿ ಕೂಡ ತಪ್ಪಿಲ್ಲ ಎನ್ನಲಾಗ್ತಿದೆ.

ಕೋವಿಡ್‌

ಹೌದು, ಕೋವಿಡ್‌-19 ವ್ಯಾಪಕವಾಗಿ ಕಾಡುತ್ತಿರುವುದರಿಂದ ಎಲ್ಲಾ ಕಂಪೆನಿಗಳು ತ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಂ ನಿಡಿವೆ. ಆದರೆ ಇದೇ ಸಮಯವನ್ನ ಕಾದಿರುವ ಹ್ಯಾಕರ್ಸ್‌ಗಳು ಸುಲಭವಾಗಿ ಕೆಲ ಸೈಟ್‌ಗಳಿಗೆ ಕನ್ನಹಾಕಲು ಯತ್ಸನಿಸುತ್ತಿದ್ದಾರೆ ಅನ್ನುವ ಮಾಹಿತಿ ಕೂಡ ಬಹಿರಂಗವಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿಯೇ ಕುಳಿತು ಕಾರ್ಯನಿರ್ವಹಿಸುವ ಉದ್ಯೋಗಿಗಳು ಕೆಲ ಸುರಕ್ಷಿತ ಕ್ರಮಗಳನ್ನ ಅನುಸರಿಸಬೇಕಾಗಿದೆ. ಅಷ್ಟಕ್ಕೂ ಮನೆಯಲ್ಲಿ ಕುಳಿತು ಕಾರ್ಯನಿರ್ವಹಿಸುವವರು ಆನ್‌ಲೈನ್‌ನಲ್ಲಿರುವಾಗ ಅನುಸರಿಸಬೆಕಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಸಾಂಕ್ರಾಮಿಕ

ಸದ್ಯ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಕ್ಷಾಂತರ ಜನರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ, ಆನ್‌ಲೈನ್ ಗೌಪ್ಯತೆಯ ಮೂಲಭೂತ ತಿಳುವಳಿಕೆ ಎಂದಿಗಿಂತಲೂ ಈಗ ಹೆಚ್ಚು ಮಹತ್ವದ್ದಾಗಿದೆ. ನೀವು ಲ್ಯಾಪ್‌ಟಾಪ್ / ಮೊಬೈಲ್ ಡಿವೈಸ್‌ಗಳನ್ನ ಬಳಸುತ್ತಿದ್ದರೆ, ನಿಮ್ಮ ಇಂಟರ್ನೆಟ್ ಗೌಪ್ಯತೆ ತಿಳಿದುಕೊಳ್ಳುವುದರಿಂದ ನಿಮ್ಮ ಡೇಟಾವನ್ನು ಮಾತ್ರವಲ್ಲದೆ ನಿಮ್ಮ ಸಂಸ್ಥೆಯನ್ನೂ ಸಹ ಸುರಕ್ಷಿತವಾಗಿರಿಸಿಕೊಳ್ಳಬಹುದಾಗಿದೆ.
ಇದೀಗ ನಡೆದಿರುವ ಹೊಸ ಚೆಕ್ ಪಾಯಿಂಟ್ ಸಮೀಕ್ಷೆಯ ಪ್ರಕಾರ, ಕೊರೊನಾ ವೈರಸ್‌ ಭೀತಿಯ ನಂತರ ಸುಮಾರು 71% ಭದ್ರತಾ ವೃತ್ತಿಪರರು ಹ್ಯಾಕರ್ಸ್‌ಗಳಿಂದ ಬೆದರಿಕೆ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ವೈರಸ್‌

ಇದೀಗ ಕೊರೊನಾ ವೈರಸ್‌ ಭೀತಿಯ ನಂತರ ಎಲ್ಲಾ ವಿಚಾರಗಳು ವೆಬ್‌ನಲ್ಲಿ ವೈರಲ್ ಆಗುತ್ತದೆ. ಅಲ್ಲದೆ ಕಂಪೆನಿಯ ವರ್ಚುವಲ್ ಸಭೆಗಳನ್ನು ಆಯೋಜಿಸಲು ಜೂಮ್‌ ಅಪ್ಲಿಕೇಶನ್‌ ಅನ್ನು ಬಳಸುತ್ತಿದ್ದಾರೆ. ಲಕ್ಷಾಂತರ ಬಳಕೆದಾರರು ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ಮೂಲಕ ಒಂದೆ ಕಡೆ ಸೇರಬಹುದಾಗಿದೆ. ಅಲ್ಲದೆ ಜೂಮ್‌ ಅಪ್ಲಿಕೇಶನ್‌ 15 ನಿಮಿಷಗಳ ಕಾಲ ಮೀಟಿಂಗ್ ನಡೆಸಬಹುದಾದ ಸಾಮರ್ಥ್ಯವನ್ನ ಹೊಂದಿದೆ. ಆದರೆ ಇದರಲ್ಲಿ ಒಂದು ಪರಿಶೀಲನೆ ನಡೆಸಿದಾಗ, ಅಪ್ಲಿಕೇಶನ್ ಕೆಲವು ನಿರ್ಣಾಯಕ ಭದ್ರತೆ ಮತ್ತು ಗೌಪ್ಯತೆ ಲೋಪದೋಷಗಳನ್ನು ಹೊಂದಿರುವುದು ಕಂಡುಬಂದಿದೆ. ಈ ಕಾರಣಕ್ಕಾಗಿ ನೀವು ಮೀಟಿಂಗ್‌ ನಡೆಸುವಾಗ ಎಚ್ಚರಿಕೆ ಇಂದಿರುವುದು ತುಂಬಾ ಅವಶ್ಯಕವಾಗಿದೆ.

ಕೋವಿಡ್

ಇನ್ನು ಕೋವಿಡ್ -19 ಏಕಾಏಕಿ ಏರಿಕೆಯಾದ ನಂತರ ಸ್ಪ್ಯಾಮ್ ಮತ್ತು ಫಿಶಿಂಗ್ ಅಟ್ಯಾಕ್‌ನಲ್ಲಿ ಬೆಳವಣಿಗೆ ಕಂಡುಬಂದಿದೆ. ಇವುಗಳಲ್ಲಿ ಪ್ರಮುಖವಾಗಿ ಕಂಪೆನಿಗೆ ಸೇರಿದ ಕೆಲಸದ ಪ್ರಮುಖ ಇಮೇಲ್ ಖಾತೆಗಳು ಸಹ ಸ್ಪ್ಯಾಮ್‌ನ ಪ್ರಮುಖ ಗುರಿಯಾಗಿದೆ. ಸಾಂಕ್ರಾಮಿಕ ರೋಗದ ಮಾಹಿತಿಯನ್ನ ನಿಡುವಂತೆ ಕಂಡುಬರುವ ಮೂಲಕ ಸ್ಕ್ಯಾಮ್‌ಸ್ಟರ್‌ಗಳು ಬಳಕೆದಾರರನ್ನು ಅಟ್ಯಾಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್ -19 ಗೆ ಸಂಬಂಧಿಸಿದ ಭಯವನ್ನು ಹ್ಯಾಕರ್‌ಗಳು ಬೇಟೆಯಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ಇದರಿಂದಾಗಿ ಎಂದಿಗೂ ನಿಮ್ಮ ಖಾಸಗಿ ಮಾಹಿತಿಯನ್ನು ನೀಡಬೇಡಿ - ಇಮೇಲ್ ವಿಳಾಸ ಅಥವಾ ಇಮೇಲ್‌ನ ಯಾವುದೇ ಲಿಂಕ್ ಅನ್ನು ಪರಿಶೀಲಿಸಿ - ತಕ್ಷಣ ಪ್ರತಿಕ್ರಿಯಿಸಲು ಅಥವಾ ಏನನ್ನಾದರೂ ಮಾಡಲು ನಿಮ್ಮನ್ನು ಕೇಳುವ ಇಮೇಲ್‌ಗಳೊಂದಿಗೆ ತೊಡಗಿಸಿಕೊಳ್ಳಬೇಡಿ-ಎಚ್ಚರಿಕೆಯಿಂದ ಡೌನ್‌ಲೋಡ್ ಮಾಡಿ

ಮೊದಲೇ

ಇನ್ನು ಮೊದಲೇ ಹೇಳಿದಂತೆ, ನಿಮ್ಮ ಸಂಸ್ಥೆ ಒದಗಿಸಿದ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅನ್ನು ನೀವು ಬಳಸುತ್ತಿದ್ದರೆ, ನೀವು ನಿಮ್ಮ ಡಿವೈಸ್‌ನಲ್ಲಿ ಏನು ಡೌನ್‌ಲೋಡ್ ಮಾಡುತ್ತಿದ್ದೀರಿ ಎಂಬುದರ ಕುರಿತು ನೀವು ಹೆಚ್ಚು ಜಾಗರೂಕರಾಗಿರಬೇಕು. ತಮ್ಮ ವೈಯಕ್ತಿಕ ಸಾಧನಗಳಲ್ಲಿ ಕಚೇರಿ ಇಮೇಲ್ ಅಥವಾ ಸಾಫ್ಟ್‌ವೇರ್ ಪ್ರವೇಶಿಸುವವರಿಗೂ ಇದು ಅನ್ವಯಿಸುತ್ತದೆ. ಅನುಮಾನಾಸ್ಪದವೆಂದು ತೋರುವ ಯಾವುದನ್ನೂ ಡೌನ್‌ಲೋಡ್ ಮಾಡಬೇಡಿ. ಪೈರೇಟೆಡ್ ಚಲನಚಿತ್ರಗಳು ಅಥವಾ ಸಂಗೀತವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ ಏಕೆಂದರೆ ಅವುಗಳು ಗುಪ್ತ ಮಾಲ್‌ವೇರ್ ಅನ್ನು ಹೊಂದಿರಬಹುದು. ಇನ್ನೂ ಪರೀಕ್ಷಿಸದ ಸಾಫ್ಟ್‌ವೇರ್, ಪರಿಕರಗಳು ಅಥವಾ ಸೇವೆಗಳಂತಹ ಐಟಿ ಪರಿಹಾರಗಳನ್ನು ನೀವು ಬಳಸುತ್ತಿದ್ದರೆ, ಅವುಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಲು ನಿಮ್ಮ ಸಂಸ್ಥೆಯನ್ನು ಸಹಾಯವನ್ನು ಪಡೆದುಕೊಳ್ಳಿರಿ.

Best Mobiles in India

English summary
Knowing basic internet privacy hygiene can keep not only your data secure but your organisation’s as well.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X