ಸರ್ವರಿಗೂ ಹ್ಯಾಪಿ 'ಎಮೊಜಿ' ಡೇ ಪ್ರಯುಕ್ತ ಹೆಚ್ಚು ಬಳಕೆಯಾದ ಎಮೊಜಿಗಳನ್ನು ನೋಡೋಣ!!

Written By:

    ಹತ್ತು ಮಾತಿನಲ್ಲಿ ಹೇಳುವ ವಿಷಯವನ್ನು ಒಂದು ಭಾವನೆಯಲ್ಲಿ ಹೇಳುವಂತೆ ಮಾಡಿದ ಎಮೊಜಿಗಳನ್ನು ಯಾರು ತಾನೆ ಬಳಸುವುದಿಲ್ಲ ಹೇಳಿ.? ತಮ್ಮ ಪ್ರೀತಿಪಾತ್ರದ ಜೊತೆ ಮೊಬೈಲ್‌ ಟೆಕ್ಸ್ಟ್ ರೂಪದಲ್ಲಿ ಸಂವಹನ ನಡೆಸುವುದಕ್ಕೆ ಹೊಸದೊಂದು ಆಯಾಮವನ್ನೇ ನೀಡಿದ ಈ ಎಮೊಜಿಗಳು ಈಗ ಎಲ್ಲರ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಸಂವಹನ ಭಾಷೆಯಾಗಿ ಬದಲಾಗಿದೆ.

    ನಗು ಬಂದಾಗಲೂ, ಅಳು ಬಂದಾಗಲೂ, ಕೊನೆಗೆ ಸಿಟ್ಟು ಮಾಡಿಕೊಂಡರೂ ಸಹ ಎಲ್ಲರೂ ಎಮೊಜಿಗಳ ಮೂಲಕವೇ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಲ್ಲಂತೂ ಈ ಎಮೊಜಿಗಳದ್ದೇ ಕಾರುಬಾರು. ಹಾಗಾಗಿ, ಈ ಎಮೊಜಿಗಳು ಕೂಡ ನಮ್ಮ ಜೀವನದ ಒಂದು ಭಾಗವಾಗಿ ಬೆರೆತುಹೋಗಿವೆ ಎಂದರೆ ತಪ್ಪಾಗುವುದಿಲ್ಲ ಅಲ್ಲವೇ.

    ಸರ್ವರಿಗೂ ಹ್ಯಾಪಿ 'ಎಮೊಜಿ' ಡೇ ಪ್ರಯುಕ್ತ ಹೆಚ್ಚು ಬಳಕೆಯಾದ ಎಮೊಜಿಗಳನ್ನು ನೋಡೋಣ!!

    ಅಷ್ಟಕ್ಕೂ ಈ ಎಮೊಜಿಗಳ ಬಗ್ಗೆ ಇಂದೇಕೆ ಹೇಳುತ್ತಿದ್ದೀವಿ ಅಂದುಕೊಂಡಿರಾ?. ಅದಕ್ಕೆ ಕಾರಣ ಇಂದು ಎಮೊಜಿಗಳ ದಿನ.! ಎಮಿಜಿಗಳಿಗಾಗಿಯೇ ಅಂತರಾಷ್ಟ್ರೀಯ ಪ್ರಪಂಚ ಈ(ಜುಲೈ 17) ದಿನವನ್ನು ಅರ್ಪಿಸಿದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಪಂಚದಲ್ಲಿ ಯಾವ ಯಾವ ಎಮೊಜಿಗಳು ಹೆಚ್ಚು ಬಳಕೆಯಾಗುತ್ತವೆ ಎಂಬುದನ್ನು ನಾವು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯೋಣ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಟಾಪ್ 10 ಎಮೊಜಿ..ಬಾಯಿ ತೆರೆದು ನಗಾಡುವ ಎಮೊಜಿ.

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 10 ಎಮೊಜಿಯಾಗಿ 'ಬಾಯಿ ತೆರೆದು ನಗಾಡುವ ಮುಖ ಎಮೊಜಿ' ಬಳಕೆಯಾಗಿದೆ.! ಯಾವುದೇ ಖುಷಿಯ ವಿಚಾರಕ್ಕೆ ಇದನ್ನು ಶೇರ್ ಮಾಡಿಕೊಳ್ಳುವುದು ಕಾಮನ್!

    ಟಾಪ್ 9 ಎಮೊಜಿ..ಜೋರಾಜಿ ಅಳುವ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 10 ಎಮೊಜಿಯಾಗಿ ಜೋರಾಜಿ ಅಳುವ ಎಮೊಜಿ ಬಳಕೆಯಾಗಿದೆ. ವ್ಯಂಗ್ಯವಾಗಿ ಈ ಎಮೊಜಿಯನ್ನು ಬಳಸುವವರೆ ಹೆಚ್ಚು ಎನ್ನಬಹುದು.!!

    ಟಾಪ್ 8 ಎಮೊಜಿ!.ಸ್ಮೈಲಿಂಗ್ ಫೇಸ್ ಎಮೊಜಿ.!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 8 ಎಮಟನೇ ಸ್ಥಾನವನ್ನು ಸ್ಮೈಲಿಂಗ್ ಫೇಸ್ ಎಮೊಜಿ ಬಳಕೆಯಾಗಿದೆ.! ಸರಿ, ಆಯ್ತು, ಎಂಬ ಭಾವಕ್ಕೆ ಈ ಎಮೊಜಿ ಬಳಕೆ ಹೆಚ್ಚು.!

    ಟಾಪ್ 7 ಎಮೊಜಿ!..ವಿಂಕಿಂಗ್ ಫೇಸ್ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 7 ನೇ ಸ್ಥಾನಕ್ಕೆ ವಿಂಕಿಂಗ್ ಫೇಸ್ ಎಮೊಜಿ ಬಳಕೆಯಾಗಿದೆ.! ಯಾವುದಾದರೂ ಸಂದರ್ಭಕ್ಕೆ ಸ್ವಲ್ಪಮಟ್ಟಿನ ವ್ಯಂಗ್ಯ ಮತ್ತು ಹೌದಾ? ಎನ್ನುವ ರೀತಿ ಈ ಎಮೊಜಿ ಬಳಕೆಯಾಗುತ್ತದೆ.

    ಟಾಪ್ 6 ಎಮೊಜಿ!..ಲವ್ ಸಿಂಬಲ್ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 6 ನೇ ಸ್ಥಾನದಲ್ಲಿ ಲವ್ ಸಿಂಬಲ್ ಎಮೊಜಿ ಬಳಕೆಯಾಗಿದೆ. ಪ್ರೀತಿಯ ಸಂಕೇತನ್ನು ಹೀಗೆ ಹಂಚಿಕೊಳ್ಳುತ್ತಾರೆ.!!

    ಟಾಪ್ 5 ಎಮೊಜಿ!..ವ್ಯಂಗ ನಗುವಿನ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 5 ನೇ ಸ್ಥಾನದಲ್ಲಿ ವ್ಯಂಗ ನಗುವಿನ ಎಮೊಜಿ. ಎರಡು ಕಣ್ಣು ಮತ್ತು ಬಾಯಿ ತೆರೆದು ನಗುವ ಈ ಎಮೊಜಿ ವ್ಯಂಗ ಸಂದರ್ಭದಲ್ಲಿ ಹೆಚ್ಚು ಬಳಕೆಯಾಗುತ್ತದೆ.!

    ಟಾಪ್ 4 ಎಮೊಜಿ! ಕಣ್ಣುಮುಚ್ಚಿ ನಗುವ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 4 ನೇ ಸ್ಥಾನದಲ್ಲಿ ಕಣ್ಣುಮುಚ್ಚಿ ನಗುವ ಎಮೊಜಿ ಬಳಕೆಯಾಗಿದೆ.! ಇದನ್ನು ಸಹ ವ್ಯಂಗ್ಯವಾಗಿಯೇ ಹೆಚ್ಚು ಬಳಸಿರುವುದು ಸಾಧ್ಯ.!

    ಟಾಪ್ 3 ಎಮೊಜಿ. ಮುತ್ತು ನೀಡುವ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 3 ನೇ ಸ್ಥಾನದಲ್ಲಿ ಮುತ್ತು ನೀಡುವ ಎಮೊಜಿ ಬಳಕೆಯಾಗಿದೆ.! ಪಪ್ರೀತಿಪಾತ್ರರಿಗೆ ಹೆಚ್ಚು ಬಳಕೆಯಾಗಿದೆ ಎನ್ನುವುದು ಡೌಟ್ ಇದೆ.!

    ಟಾಪ್ 2 ಎಮೊಜಿ. ಕಣ್ಣುಗಳಲ್ಲಿ ಪ್ರೀತಿ ತೋರಿಸುವ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 2 ನೇ ಸ್ಥಾನದಲ್ಲಿ ಕಣ್ಣುಗಳಲ್ಲಿ ಪ್ರೀತಿ ತೋರಿಸುವ ಎಮೊಜಿ ಬಳಕೆಯಾಗಿದೆ. ಸಾಮಾನ್ಯವಾಗಿ ಪ್ರೀತಿ ಪಾತ್ರರ ಬಳಿಯೆ ಈ ಎಮೊಜಿ ಬಳಕೆಯಾಗುತ್ತದೆ.!

    ಟಾಪ್ 1 ಎಮೊಜಿ. ಬಿದ್ದು ಬಿದ್ದು ನಗಾಡುವ ಎಮೊಜಿ!

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 1 ನೇ ಸ್ಥಾನದಲ್ಲಿ ಬಿದ್ದು ಬಿದ್ದು ನಗಾಡುವ ಎಮೊಜಿ ಬಳಕೆಯಾಗಿದೆ. ಈ ಎಮೊಜಿಯನ್ನು ಬಳಸುವುದು ನಿಮಗೆ ಹೇಳಬೇಕೆ?

    ಎಷ್ಟು ಪ್ರಮಾಣದಲ್ಲಿ ಯಾವ, ಯಾವ ಎಮೊಜಿ ಬಳಕೆಯಾಗಿದೆ?

    ಪ್ರಪಂಚದಲ್ಲಿ ಹೆಚ್ಚು ಬಳಕೆಯಾದ, ಮೇಲೆ ನೀಡಿರುವ ಟಾಪ್ 10 ಎಮೊಜಿಗಳಲ್ಲಿ ಯಾವ ಎಮೊಜಿ ಯಾವ ಪ್ರಮಾಣದಲ್ಲಿ ಬಳಕೆಯಾಗಿದೆ ಎಂದು ಮೇಲಿನ ಚಿತ್ರದಲ್ಲಿ ನೋಡಿ.!!

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    Emojis have become so much a part of our lives that they now even have a day dedicated to them -- and it’s today. to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more