ಸಮಯವನ್ನೇ ನಿಲ್ಲಿಸುತ್ತೇ ಈ ಕ್ಯಾಮೆರಾ..! ಬೆಳಕಿಗಿಂತ ವೇಗದ ಕ್ಯಾಪ್ಚರ್..!
ಅಬ್ಬಬ್ಬಾ ಎಂದರೆ ನಾವೇಷ್ಟು ಸಾಮರ್ಥ್ಯದ ಕ್ಯಾಮೆರಾ ನೋಡಿರಬಹುದು. ಅಬ್ಬಬ್ಬಾ ಎಂದರೂ ಸೆಕೆಂಡ್‌ಗೆ 1000 ಫ್ರೇಮ್ ಕ್ರೋಡಿಕರಿಸುವ ಕ್ಯಾಮೆರಾ ನೋಡಿರಬಹುದು. ಅಷ್ಟೇ, ಅದಕ್ಕಿಂತ ಮೇಲೂ ನೋಡಿರಬಹುದು. ಆದರೆ, ಇಂದು ನಾವೇಳುತ್ತಿರುವುದು ನಿಮಗೆ ಊಹೆಗೂ ನಿಲುಕದ ಕ್ಯಾಮೆರಾ ಕಥೆ. ಅಲ್ಲ ಅಲ್ಲ ಇದು ಕಥೆಯಲ್ಲ ನಿಜವೇ. ಹೌದು, ವಿಜ್ಞಾನಿಗಳು ಅಂತದ್ದೊಂದು ಕ್ಯಾಮೆರಾವನ್ನು ರೂಪಿಸಿದ್ದಾರೆ.

ಹೌದು, ಈಗ ನಾವೇಳಲು ಹೊರಟಿರುವ ಕ್ಯಾಮೆರಾ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಇದು ಸಮಯವನ್ನೇ ಒಂದು ಕ್ಷಣ ನಿಲ್ಲಿಸುವ ಕ್ಯಾಮೆರಾವಾಗಿದ್ದು, ಬೆಳಕಿನಷ್ಟೇ ವೇಗದಲ್ಲಿ ಫೋಟೋವನ್ನು ಸೆರೆಹಿಡಿಯುವ ತಾಕತ್ತು ಹೊಂದಿದೆ. ಅಂದಹಾಗೇ ಬೆಳಕು ಮತ್ತು ವಸ್ತುವಿನ ನಡುವೆ ನಡೆಯುವ ಸಂವಹನದಲ್ಲಿ ಗುರುತಿಸಲಾಗದ ರಹಸ್ಯಗಳನ್ನು ಕಂಡುಹಿಡಿಯಲು ಈ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿಲಾಗಿದೆ ಎಂದು ಯುಎಸ್‌ನ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಹೇಳಿದ್ದಾರೆ.

ಸೆಕೆಂಡ್‌ಗೆ 10 ಟ್ರಿಲಿಯನ್ ಫ್ರೇಮ್ಸ್ ಸೆರೆ
ವೇಗದ ಕ್ಯಾಮೆರಾ ಸೆಕೆಂಡ್‌ಗೆ 10 ಟ್ರಿಲಿಯನ್ ಫ್ರೇಮ್ಸ್‌ಗಳನ್ನು ಸೆರೆಹಿಡಿಯುವ ತಾಕತ್ತು ಹೊಂದಿದೆ. ಇದು ಅತ್ಯಂತ ಹೆಚ್ಚಿನ ಸ್ಲೋ ಮೋಷನ್‌ಗೆ ದಾರಿಯಾಗಲಿದ್ದು, ಸ್ಲೋ ಮೋಷನ್‌ನಲ್ಲಿ ಸಮಯವನ್ನು ಫ್ರೀಜ್ ಮಾಡಿ ಬೆಳಕನ್ನು ನೋಡಬಹುದಾಗಿದೆ. ಇದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳಷ್ಟು ಉಪಯೋಗವಾಗಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ವೈಜ್ಞಾನಿಕ ಕ್ಷೇತ್ರಕ್ಕೆ ಬಲ
ನೈಜ ಸಮಯದ ಇಮೇಜಿಂಗ್ ವೇಗದಲ್ಲಿ (real-time imaging speed) ವಿಶ್ವದಾಖಲೆಯನ್ನು ಸೃಷ್ಟಿಸಿರುವ ಈ ನಾವೆಲ್ ಕ್ಯಾಮೆರಾಗೆ T-CUP ಎಂದು ಹೆಸರಿಡಲಾಗಿದೆ. ಬಯೋಮೆಡಿಕಲ್, ಮಟೇರಿಯಲ್ ಸೈನ್ಸ್ ಮತ್ತು ಇತರ ವೈಜ್ಞಾನಿಕ ಅಪ್ಲಿಕೇಷನ್‌ಗಳಿಗೆ ಹೊಸ ಪೀಳಿಗೆಯ ಸೂಕ್ಷ್ಮದರ್ಶಕ ಆಗುವ ಸಾಮರ್ಥ್ಯ ಹೊಂದಿದೆ.

ಫೆಮ್ಟೋಸೆಕೆಂಡ್ ಸ್ಟ್ರೀಕ್ ಕ್ಯಾಮೆರಾ ಸಿದ್ಧಾಂತ
ಪ್ರತಿ ಸೆಕೆಂಡಿಗೆ 100 ಬಿಲಿಯನ್ ಫ್ರೇಮ್‌ಗಳನ್ನು ಸೆರೆಹಿಡಿಯುವ ಕ್ಯಾಮೆರಾದ ಸಮೀಪದಲ್ಲಿ ಹೊಸ T-CUP ಕ್ಯಾಮೆರಾ ನಿಂತಿದೆ. ಆದರೆ, ಅದನ್ನು ಸಾಧಿಸಲು ಇನ್ನು ಸಮಯ ಬೇಕಾಗಿದ್ದು, ಫೆಮೆಟೋಸೆಕೆಂಡ್ ಲೇಸರ್‌ಗಳನ್ನು ಸಂಯೋಜಿಸಿಸುವ ಫೀಚರ್‌ನ್ನು ಬೇಡುತ್ತದೆ. ಅದಕ್ಕಾಗಿಯೇ ಈ ಪರಿಕಲ್ಪನೆಯನ್ನು ಸುಧಾರಿಸಲು T-CUP ಕ್ಯಾಮೆರಾ ವ್ಯವಸ್ಥೆಯನ್ನು ಫೆಮ್ಟೋಸೆಕೆಂಡ್ ಸ್ಟ್ರೀಕ್ ಕ್ಯಾಮೆರಾ ಸಿದ್ಧಾಂತದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಟೋಮೋಗ್ರಫಿಯಂತಹ ಅಪ್ಲಿಕೇಷನ್‌ಗಳಲ್ಲಿ ಬಳಸುವಂತಹ ಡೇಟಾ ಸ್ವಾಧೀನತೆಯನ್ನು ಸಹ ಒಳಗೊಂಡಿದೆ.

T-CUP ಎಂದರೇನು..?
CUP ಎಂದರೆ Compressed Ultrafast Photography ಆಗಿದ್ದು, T ಎಂದರೆ ಟ್ರಿಲಿಯನ್ ಆಗಿರುವ ಸಾಧ್ಯತೆಯಿದೆ. ಲೇಸರ್‌ನಿಂದ ಗಾಜನ್ನು ಕೊರೆಯುತ್ತಿರುವ ಫೋಟೋ ಸೆರೆಹಿಡಿಯಬೇಕಾದರೆ ಅಲ್ಲಿ ಪಿಕೋಸೆಕೆಂಡ್‌ಗಿಂತ ಸಮಯ ಕಡಿಮೆಯಿರುತ್ತದೆ. ಆಗ, ನೈಜ ಸಮಯದಲ್ಲಿ ಚಿತ್ರದ ಸಂಪೂರ್ಣ ಪ್ರಕ್ರಿಯೆಯನ್ನುಸೆರೆಹಿಡಿಯಲು Compressed Ultrafast Photography (CUP) ಉತ್ತಮವಾಗಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರದ ಗುಣಮಟ್ಟಕ್ಕಾಗಿ ಮತ್ತೊಂದು ಕ್ಯಾಮೆರಾ ಅಳವಡಿಕೆ
ಫೆಮ್ಟೋಸೆಕೆಂಡ್ ಸ್ಟ್ರೇಕ್ ಕ್ಯಾಮೆರಾ ಮಾತ್ರ ಬಳಸುವುದರಿಂದ ಚಿತ್ರದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ತಿಳಿದಿದ್ದು, ಅದಕ್ಕಾಗಿಯೇ ಚಿತ್ರ್ ಗುಣಮಟ್ಟ ಸುಧಾರಿಸಿ ಸ್ಥಿರ ಚಿತ್ರ ಪಡೆದುಕೊಳ್ಳಲು ಮತ್ತೊಂದು ಕ್ಯಾಮೆರಾ ಅಳವಡಿಸಲಾಗಿದೆ ಎಂದು ಕ್ಯಾಲ್ಟೆಕ್ ಆಪ್ಟಿಕಲ್ ಇಮೇಜಿಂಗ್ ಲ್ಯಾಬೋರೇಟರಿಯ (COIL) ನಿರ್ದೇಶಕ ಲಿಹೋಂಗ್ ವಾಂಗ್ ಹೇಳಿದ್ದಾರೆ.

ರೆಡಾನ್ ಟ್ರಾನ್ಸ್‌ಫಾರ್ಮೇಶನ್ ಬಳಕೆ
ಫೆಮ್ಟೋಸೆಕೆಂಡ್ ಸ್ಟ್ರೇಕ್ ಕ್ಯಾಮೆರಾ ಜತೆಯಲ್ಲಿ ರೆಡಾನ್ ಟ್ರಾನ್ಸ್‌ಫಾರ್ಮೇಶನ್ ಬಳಸಿಕೊಂಡು ಸೆಕೆಂಡ್‌ಗೆ 10 ಟ್ರಿಲಿಯನ್ ಫ್ರೇಮ್‌ಗಳನ್ನು ಸೆರೆಹಿಡಿದು ಉನ್ನತ ಗುಣಮಟ್ಟದ ಚಿತ್ರಗಳನ್ನು ಪಡೆಯಬಹುದು ಎಂದು ವಾಂಗ್ ತಿಳಿಸಿದ್ದಾರೆ.

ಪ್ರಯತ್ನ ಯಶಸ್ವಿ
ಬೆಳಕು ಮತ್ತು ವಸ್ತುವಿನ ನಡುವಿನ ಪರಸ್ಪರ ಕ್ರಿಯೆಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಲು ಈ ಕ್ಯಾಮೆರಾ ಸಾಧ್ಯವಾಗಿಸುತ್ತದೆ. ಮೊದಲ ಬಾರಿಗೆ ಅಲ್ಟ್ರಾಫಾಸ್ಟ್ ಕ್ಯಾಮೆರಾವನ್ನು ಬಳಸಿದಾಗ ನೈಜ ಸಮಯದಲ್ಲಿ ಒಂದು ಫೆಮ್ಟೋಸೆಕೆಂಡ್ ಲೇಸರ್ ಪಲ್ಸ್‌ನ್ನು ತಾತ್ಕಾಲಿಕ ಫೋಕಸಿಂಗ್ನೊಂದಿಗೆ ಸೆರೆಹಿಡಿದು ಹೊಸದನವನ್ನು ಸಾಧಿಸಿತು. ಈ ಪ್ರಕ್ರಿಯೆಯನ್ನು 400 ಫೆಮ್ಟೊಸೆಕೆಂಡ್‌ಗಳ ಮಧ್ಯಂತರದಲ್ಲಿ ತೆಗೆದುಕೊಂಡ 25 ಫ್ರೇಮ್‌ಗಳಲ್ಲಿ ದಾಖಲಿಸಲಾಗಿದ್ದು, ಬೆಳಕಿನ ಆಕಾರ, ತೀವ್ರತೆ, ಮತ್ತು ಇಳಿಜಾರಿನ ಕೋನವನ್ನು ವಿವರಿಸಲಾಗಿದೆ.

ವೇಗ ಹೆಚ್ಚಳಕ್ಕೆ ಸಿದ್ಧತೆ
ಹೀಗಾಗಲೇ ಸೆಕೆಂಡ್‌ಗೆ 1ಟ್ರಿಲಿಯನ್ ಫ್ರೇಮ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುವ T-CUP ಕ್ಯಾಮೆರಾದ ವೇಗವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ನೋಡುತ್ತಿದ್ದು, ಸೆಕೆಂಡ್‌ಗೆ ಕ್ವಾಡ್ರಿಲಿಯನ್ ಫ್ರೇಮ್ಸ್‌ವರೆಗೆ ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು COIL ಇಂಜಿನಿಯರ್ ಜಿನ್ಯಾಂಗ್ ಲಿಯಾಂಗ್ ಹೇಳಿದ್ದಾರೆ.


Click it and Unblock the Notifications








