ಸಮುದ್ರದ ಮೇಲೆ ನಿರ್ಮಿತವಾಗಿದೆ ವಿಶ್ವದ ಮೊದಲ 'ತೇಲುವ ನಗರ'!!

|

ಎಲ್ಲವೂ ಅಂದುಕೊಂಡಂತೆಯೇ ಆದರೆ ಕೇವಲ ಇನ್ನೆರಡು ವರ್ಷಗಳಲ್ಲಿ ಸಮುದ್ರದ ಮೇಲೊಂದು ತೇಲುವ ನಗರ ಹುಟ್ಟಿಕೊಳ್ಳಲಿದೆ.! ಅಯ್ಯೋ, ಇದನ್ನು ಜೋಕ್ ಎಂದುಕೊಳ್ಳಬೇಡಿ. ಇದು ಖಂಡಿತಾ ನಿಜ. 2020 ಕ್ಕೆ ಬೆಂಗಳೂರು, ಮಂಗಳೂರು, ಮುಂಬೈ, ನ್ಯೂಯಾರ್ಕ್ ನಗರಗಳಂತೆಯೇ ಸಮುದ್ರದ ಮೇಲೊಂದು ನೂತನ ಹೆಸರಿನ ನಗರವೊಂದು ರೂಪತಾಳಲಿದೆ.

ತೇಲುವ ನಗರ ಎಂಬುದು ಒಂದು ಕಲ್ಪನೆಯಂತೆ ಕಂಡರೂ, ಅದು ಸಾಕಾರವಾಗುವ ಸಮಯ ಹತ್ತಿರವಾಗಿದೆ. ಹೊಸಹೊಸ ನೆಲೆಗಳನ್ನು ಅನ್ವೇಷಣೆ ಮಾಡಲು ಹೊರಟ ಮನುಷ್ಯ ಎಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾನೆ ಎಂಬುದಕ್ಕೆ ಈ ನಗರ ನಿದರ್ಶನವಾಗಲಿದೆ. ತೇಲುವ ಮನೆಗಳು, ಮಾರುಕಟ್ಟೆ, ಪಟ್ಟಿಗೆ ಈಗ ತೇಲುವ ನಗರ ಸಹ ಸೇರ್ಪಡೆಯಾಗಲಿದೆ.

ಸಮುದ್ರದ ಮೇಲೆ ನಿರ್ಮಿತವಾಗಿದೆ ವಿಶ್ವದ ಮೊದಲ 'ತೇಲುವ ನಗರ'!!

ವಿಶ್ವದ ಮೊದಲ ತೇಲುವ ನಗರ ಪೆಸಿಫಿಕ್‌ ಸಮುದ್ರದಲ್ಲಿ ಇನ್ನು ಎರಡು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ನಗರದಲ್ಲಿ ಹೋಟೆಲ್‌, ಮನೆ, ಕಚೇರಿ, ರೆಸ್ಟೋರೆಂಟ್ ಮತ್ತಿತರ ಎಲ್ಲಾ ಸೌಕರ್ಯಗಳು ಸಹ ಇರಲಿವೆ. ಹಾಗಾದರೆ, ಏನಿದು ಮಾನವ ನಿರ್ಮಿತ ತೇಲುವ ನಗರ? ತಂತ್ರಜ್ಞಾನವನ್ನು ಮನುಷ್ಯ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾನೆ ಎಂಬುದನ್ನು ಮುಂದೆ ಓದಿರಿ.

ವಿಶ್ವದ ಮೊದಲ ತೇಲುವ ನಗರ

ವಿಶ್ವದ ಮೊದಲ ತೇಲುವ ನಗರ

ವಿಶ್ವದ ಮೊದಲ ತೇಲುವ ನಗರ ಪೆಸಿಫಿಕ್‌ ಸಮುದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ನಗರದಲ್ಲಿ ಹೋಟೆಲ್‌, ಮನೆ, ಕಚೇರಿ, ರೆಸ್ಟೋರೆಂಟ್ ಮತ್ತಿತರ ಕೇಂದ್ರಗಳಿರುತ್ತವೆ. ಮರ, ಬಿದಿರು ಮತ್ತು ತೆಂಗಿನ ಫೈಬರ್‌ ಅಲ್ಲದೆ ಮರುಬಳಕೆ ಮಾಡಿದ ಲೋಹ ಹಾಗೂ ಪ್ಲಾಸ್ಟಿಕ್‌ ನಿಂದ ತಯಾರಾಗುತ್ತಿರುವ ನಗರಕ್ಕೆ ಎಂಜಿನಿಯರಗಳು, ವಾಸ್ತುಶಿಲ್ಪಿಗಳು ಮತ್ತು ಸರ್ಕಾರದ ಸಹಕಾರವಿದೆ.

ನಿರ್ಮಿಸುತ್ತಿರುವುದು ಸರ್ಕಾರೇತರ ಸಂಸ್ಥೆ!

ನಿರ್ಮಿಸುತ್ತಿರುವುದು ಸರ್ಕಾರೇತರ ಸಂಸ್ಥೆ!

2008ರಲ್ಲಿ ಆರಂಭವಾಗಿದ್ದ ಸೀ ಸ್ಟೀಡಿಂಗ್ ಸಂಸ್ಥೆ ಇಂತಹದೊಂದು ಯೋಜನೆಗೆ ಮುಂದಾಗಿದೆ. ಈ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಈ ಸಂಬಂಧ ಕೆಲಸ ಮಾಡುತ್ತಿದ್ದು, ಇನ್ನೇನು ತೇಲುವ ನಗರವನ್ನು ಸಾಕಾರಗೊಳಿಸಲಿದೆ. ಆರಂಭದಲ್ಲಿ ಹುಚ್ಚರ ಆಲೋಚನೆ ಎಂದು ನಗೆಪಾಟಲಿಗೆ ಈಡಾಗಿದ್ದ ಕಲ್ಪನೆಯೊಂದು ಈಗ ಸಾಕಾರವಾಗಿ ವಿಶ್ವವನ್ನು ಬೆರಗುಗೊಳಿಸುತ್ತಿದೆ.

ನಗರ ನಿರ್ಮಾಣ ಏಕೆ ಮತ್ತು ಹೇಗೆ?

ನಗರ ನಿರ್ಮಾಣ ಏಕೆ ಮತ್ತು ಹೇಗೆ?

ಮನುಷ್ಯರನ್ನು ರಾಜಕಾರಣಿಗಳಿಂದ ಸ್ವತಂತ್ರಗೊಳಿಸಲು ಈ ನಗರ ನಿರ್ಮಾಣವಾಗುತ್ತಿದೆ ಎಂದು ಸೀ ಸ್ಟೀಡಿಂಗ್ ಹೇಳಿಕೊಂಡಿದೆ. ಕಾಯಿನ್ ಆಫರಿಂಗ್' (coin offering) ಎಂಬ ಹಣ ಸಂಗ್ರಹದ ಹೊಸ ಪರಿಕಲ್ಪನೆಯ ಮೂಲಕ ಈ ನಗರಕ್ಕೆ ಹಣ ಒಟ್ಟು ಮಾಡಲಾಗಿದೆ. ಇನ್ನುಳಿದಂತೆ ಉದ್ಯಮಿಗಳಿಂದಲೂ ಸಾಕಷ್ಟು ಹಣ ಹರಿದುಬಂದಿರುವ ಬಗ್ಗೆ ಊಹಾಪೊಹಗಳಿವೆ.

ತನ್ನದೇ ಆದ ವ್ಯಾಪಾರ ಕಾನೂನು!

ತನ್ನದೇ ಆದ ವ್ಯಾಪಾರ ಕಾನೂನು!

ಸೀ ಸ್ಟೀಡಿಂಗ್ ಸಂಸ್ಥೆ ತಾನು ನಿರ್ಮಿಸಲಿರುವ ತೇಲುವ ನಗರದ ಬಗ್ಗೆ ಕಳೆದ ವರ್ಷವೇ ಬಹಿರಂಗಪಡಿಸಿತ್ತು. ಇದಕ್ಕೆ ಸರ್ಕಾರ ಕೂಡ ಅನುಮತಿಯನ್ನೂ ನೀಡಿತ್ತು. ಇದಕ್ಕಾಗಿ ಸರ್ಕಾರ ಒಂದು ಹೊಸ ವಿಶೇಷ ಆರ್ಥಿಕ ವಲಯವನ್ನೂ ನಿರ್ಮಿಸುತ್ತಿದೆ ಎಂದು ತಿಳಿದುಬಂದಿದೆ. .ಇದರಿಂದ ತೇಲುವ ನಗರ ತನ್ನದೇ ಆದ ವ್ಯಾಪಾರ ಕಾನೂನುಗಳನ್ನು ಹೊಂದಬಹುದಾಗಿದೆ.

ಆತಂಕ ಕೂಡ ಮೂಡಿದೆ!

ಆತಂಕ ಕೂಡ ಮೂಡಿದೆ!

‌ವಿಶ್ವದ ಮೊದಲ ತೇಲುವ ಎಂಬುದು ಮಹತ್ವಾಕಾಂಕ್ಷಿ ಯೋಜನೆಯಂತೆ ಕಂಡು ಬಂದರೂ ಸಾಗರದ ಮಧ್ಯೆ ಇರುವ ನಗರದಲ್ಲಿನ ಜನರ ಸುರಕ್ಷತೆ ಬಗ್ಗೆ ಆತಂಕವಿದೆ. ಅಲ್ಲದೆ ಸಮುದ್ರದ ಮಟ್ಟ ಏರಿಕೆಯಾದರೆ ಮತ್ತು ಇತರ ನೈಸರ್ಗಿಕ ಪ್ರಕೋಪಗಳನ್ನು ಈ ನಗರ ಎಷ್ಟರಮಟ್ಟಿಗೆ ತಡೆದುಕೊಳ್ಳಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೂ ಇದೊಂದು ಅದ್ಬುತ ಎನ್ನಲಾಗುತ್ತಿದೆ.

Most Read Articles
Best Mobiles in India

English summary
The world's first floating nation is set to appear in the Pacific Ocean off the island of Tahiti in 2020. A handful of hotels, homes, offices. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more