Home
ಸುದ್ದಿಜಾಲ

ಸೂರ್ಯನ ಅತಿ ಸಮೀಪಕ್ಕೆ ತೆರಳುತ್ತಿರುವ 'ಪಾರ್ಕರ್' ಶಕ್ತಿ ಎಷ್ಟು ಗೊತ್ತಾ?

By Bhaskar N J

ಸೂರ್ಯನ ಅತಿ ಸಮೀಪಕ್ಕೆ ತೆರಳಿ ಅಧ್ಯಯನ ನಡೆಸುತ್ತಿರುವ ಮೊದಲ ಉಪಗ್ರಹ ಪಾರ್ಕರ್ ಸೋಲಾರ್ ಪ್ರೋಬ್ ಕೆಲ ತೊಂದರೆಗಳನ್ನು ಪರಿಹರಿಸಿಕೊಂಡು ಭಾನುವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ನಾಸಾ ಹಮ್ಮಿಕೊಂಡಿರುವ ಸುಮಾರು 10 ಸಾವಿರ ಕೋಟಿ ರೂಪಾಯಿಗಳು ಬೃಹತ್ ಯೋಜನೆ ಯಶಸ್ವಿಯಾಗಿ ಮೊದಲ ದಾಪುಗಾಲನ್ನಿಟ್ಟಿದೆ.

ರಾಕೆಟ್​ನಲ್ಲಿನ ಹೀಲಿಯಂ ಗ್ಯಾಸ್ ಸೆನ್ಸರ್​ನಲ್ಲಿ ತಾಂತ್ರಿಕ ಅಡಚಣೆ ಕಂಡುಬಂದ ಹಿನ್ನೆಲೆಯಲ್ಲಿ ಶನಿವಾರವೇ ಉಡಾವಣೆ ಯಾಗಬೇಕಿದ್ದ ಪಾರ್ಕರ್ ಸೋಲಾರ್ ಪ್ರೋಬ್ ಉಪಗ್ರಹವನ್ನು ನಾಸಾ ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಿದ್ದು, ಅತಿಯಾದ ಶಾಖವನ್ನು ತಡೆಯುವಂತೆ ವಿನ್ಯಾಸವಾಗಿರುವ ಈ ನೌಕೆ ಸೂರ್ಯನ ಅತಿ ಸಮೀಪಕ್ಕೆ ತೆರಳುತ್ತಿರುವ ಮೊದಲ ಉಪಗ್ರಹವಾಗಿದೆ.

ಸೂರ್ಯನ ಅತಿ ಸಮೀಪಕ್ಕೆ ತೆರಳುತ್ತಿರುವ 'ಪಾರ್ಕರ್' ಶಕ್ತಿ ಎಷ್ಟು ಗೊತ್ತಾ?

2500 ಡಿಗ್ರಿ ಫ್ಯಾರನ್​ಹೀಟ್ (1370 ಡಿಗ್ರಿ ಸೆಲ್ಶಿಯಸ್) ಶಾಖ ತಾಳಿಕೊಳ್ಳುವ ಶಕ್ತಿಯು ಈ ನೌಕೆಗಿದ್ದು, ಸೂರ್ಯನ ಕುರಿತು ಮಹತ್ವವಾದ ಸಂಶೋಧನೆ ನಡೆಸುವ ಸಲುವಾಗಿ ಈಗ 'ಪಾರ್ಕರ್​ ಸೋಲಾರ್​ ಪ್ರೋಬ್' ನೌಕೆ ಸೂರ್ಯನತ್ತ ಚಿಮ್ಮುತ್ತಿದೆ. ಹಾಗಾದರೆ, ಸೂರ್ಯನ ಬಳಿಗೆ ತೆರಳುತ್ತಿರುವ ನೌಕೆ ಸಾಮರ್ಥ್ಯವೇನು? ಮುಂದಿನ ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಅತ್ಯಂತ ಹತ್ತಿರಕ್ಕೆ ನೌಕೆ!

ಅತ್ಯಂತ ಹತ್ತಿರಕ್ಕೆ ನೌಕೆ!

ಈ ಹಿಂದೆ ಹಲವು ಬಾರಿ ಸೂರ್ಯನಲ್ಲಿಗೆ ನಾಸಾ ಶೋಧ ನೌಕೆಗಳನ್ನು ಹಾರಿ ಬಿಟ್ಟಿದೆ. ಆದರೆ, ಇದೇ ಮೊದಲ ಬಾರಿಗೆ ಸೂರ್ಯನಿಗೆ ಅತ್ಯಂತ ಹತ್ತಿರಕ್ಕೆ ಹೋಗುತ್ತಿರುವ ನೌಕೆ ಇದಾಗಿದೆ. ಪಾರ್ಕರ್​ ಉಪಗ್ರಹ ಸೂರ್ಯನಿಂದ ಸುಮಾರು 7 ಲಕ್ಷ ಕಿಲೋಮೀಟರ್​ ಹತ್ತಿರದವರೆಗೆ ಹಾರಲಿದೆ ಎಂದು ನಾಸಾ ತಿಳಿಸಿದೆ.

ನೌಕೆಯ ಮುಖ್ಯ ಗುರಿ ಏನು?

ನೌಕೆಯ ಮುಖ್ಯ ಗುರಿ ಏನು?

ಸೂರ್ಯನ ಮೇಲ್ಮೈನಲ್ಲಿ ಇದ್ದಕ್ಕಿದ್ದಂತೆ ಉಷ್ಣಾಂಶದಲ್ಲಿ ಏರಿಳಿತ ಆಗುವುದೇಕೆ ಎಂಬುದನ್ನು ತಿಳಿಯುವ ಮುಖ್ಯ ಗುರಿಯನ್ನು ಈ 'ಪಾರ್ಕರ್​ ಸೋಲಾರ್​ ಪ್ರೋಬ್' ನೌಕೆ ಹೊಂದಿದೆ. ಆಗಾಗ ಬೀಸುವ ಸೌರ ಮಾರುತಗಳ ಕುರಿತು ಸಹ ಅಧ್ಯಯನ ನಡೆಸಲಿದೆ. ಜತೆಗೆ ಶಕ್ತಿಯ ಕಣಗಳು ಚಲಿಸೋಕೆ ಕಾರಣವಾಗುವ ಅಂಶಗಳು ಯಾವುವು ಎಂಬ ಮಾಹಿತಿ ಕಲೆ ಹಾಕಲಿದೆ.

ಹೇಗಿದೆ ನೌಕೆ?

ಹೇಗಿದೆ ನೌಕೆ?

ಫ್ಲೋರಿಡಾದ ಕೇಪ್​ ಕಾರ್ನವೆರಲ್​ನಿಂದ ಡೆಲ್ಟಾ 4 ನೌಕೆಯ ಮೂಲಕ ಹಾರುತ್ತಿರುವ 'ಪಾರ್ಕರ್​ ಸೋಲಾರ್​ ಪ್ರೋಬ್' ಒಂದು ಕಾರಿನ ಗಾತ್ರದ ಶೋಧ ನೌಕೆಯಾಗಿದೆ. ಈ ಉಪಗ್ರಹದಲ್ಲಿ ಫೀಲ್ಡ್ಸ್​, ಈಸೋಸ್​, ವಿಸ್ಪರ್​, ಸ್ವೀಪ್​, ಹೀಲಿಯೋಸ್ಪ್​​ ಎಂಬ ನಾನಾ ಉಪಕರಣಗಳನ್ನು ಅಳವಡಿಸಲಾಗಿದ್ದು, ಅವೆಲ್ಲವನ್ನು ತನ್ನ ಜತೆ ಒಯ್ಯಲಿದೆ.

ಪವರ್ ಹೀಟ್ ಶೀಲ್ಡ್ ಹೊದಿಕೆ!

ಪವರ್ ಹೀಟ್ ಶೀಲ್ಡ್ ಹೊದಿಕೆ!

ಸೂರ್ಯನ ಅಪಾರ ಶಾಖ ಹಾಗೂ ರೇಡಿಯೇಷನ್​ನಿಂದ ರಕ್ಷಣೆ ನೀಡುವ ಸಲುವಾಗಿ ನೌಕೆಗೆ ಅಲ್ಟ್ರಾ ಪವರ್ ಹೀಟ್ ಶೀಲ್ಡ್ ಅಳವಡಿಕೆ ಮಾಡಲಾಗಿದೆ. ಇದರಿಂದ . ಶೀಲ್ಡ್ ಕೇವಲ 4.5 ಇಂಚು ದಪ್ಪವಾಗಿದೆ. ಎಷ್ಟೇ ಶಾಖ ಇದ್ದರೂ ನೌಕೆಯ ಒಳಭಾಗದಲ್ಲಿ 29 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಲಿದೆ ಎಂದು ನಾಸಾ ಮಾಹಿತಿ ನೀಡಿದೆ.

ಫೀಲ್ಡ್ಸ್ ಮತ್ತು ಈಸೋಸ್​

ಫೀಲ್ಡ್ಸ್ ಮತ್ತು ಈಸೋಸ್​

ನೌಕೆ ಹೊತ್ತಿರುವ ನಾನಾ ಉಪಕರಣಗಳಲ್ಲಿ ಈಸೋಸ್,​ ಶಕ್ತಿಶಾಲಿ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಇತರ ಭಾರದ ಅಯಾನ್​ಗಳ ಕುರಿತು ಅಧ್ಯಯನ ನಡೆಸಲಿದ್ದರೆ, ಫೀಲ್ಡ್ಸ್​​ ಉಪಕರಣ ಸೂರ್ಯನ ವಿದ್ಯುತ್​ ವಲಯ, ಗುರುತ್ವಾಕರ್ಷಣ ಶಕ್ತಿ, ರೇಡಿಯೋ ತರಂಗಗಳ ಕುರಿತು ಸಂಶೋಧನೆ ನಡೆಸಲಿದೆ.

ಕರೋನಾ ಸೆರೆಹಿಡಿಯಲಿದೆ.

ಕರೋನಾ ಸೆರೆಹಿಡಿಯಲಿದೆ.

ಫೀಲ್ಡ್ಸ್ ಮತ್ತು ಈಸೋಸ್​ ಕಾರ್ಯಗಳು ಮೇಲೆ ತಿಳಿಸಿದಂತಿದ್ದರೆ, ಸೂರ್ಯನ ಮೇಲ್ಮೈ ಅಂದರೆ ಕರೋನಾ ಮತ್ತು ಒಳ ವಾತಾವರಣದ ಚಿತ್ರಗಳನ್ನು ಆಪ್ಟಿಕಲ್​ ಇಮೇಜ್​ ಸೆನ್ಸಾರ್​ ಸೆರೆ ಹಿಡಿಯಲಿದೆ.ಸ್ವೀಪ್​ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಹೀಲಿಯಂ ಅಯಾನ್​ಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಅವುಗಳ ಸಾಂದ್ರತೆ ಮತ್ತು ಶಾಖದ ಕುರಿತು ಮಾಹಿತಿ ನೀಡಲಿದೆ.

ಪಾರ್ಕರ್ ಎಂಬ ಹೆಸರೇಕೆ?

ಪಾರ್ಕರ್ ಎಂಬ ಹೆಸರೇಕೆ?

ಸೂರ್ಯನ ಮೇಲ್ಮೈ ವಾತಾವರಣದ ಸೌರಮಾರುತಗಳನ್ನು ಚಿತ್ರೀಕರಿಸಲು, ಇಲೆಕ್ಟ್ರಿಕ್ ಹಾಗೂ ಮ್ಯಾಗ್ನೆಟಿಕ್, ಪ್ಲಾಸ್ಮಾ, ಇನ್ನಿತರ ವಸ್ತು, ಕಣಗಳನ್ನು ಅಧ್ಯಯನ ನಡೆಸಲು ಹೊರಟಿರುವ ಈ ನೌಕೆಗೆ ವಿಜ್ಞಾನಿ ಯೂಜಿನ್ ಪಾರ್ಕರ್ ಗೌರವಾರ್ಥವಾಗಿ ಅವರ ಹೆಸರನ್ನು ಇಡಲಾಗಿದೆ. ಸೌರ ಜ್ವಾಲೆ ಕುರಿತು 1958ರಲ್ಲಿ ಪಾರ್ಕರ್ ವಿವರಣೆ ನೀಡಿದ್ದರು.

Best Mobiles in India

English summary
NASA’s Parker Solar Probe, mankind’s first mission to ‘touch’ the Sun, has been launched today. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+