ಮೊದಲ SMS ಕಳುಹಿಸಿ ಇಂದಿಗೆ 25 ವರ್ಷ

By Lekhaka
|

SMS ಅಥಾವ ಶಾರ್ಟ್ ಮೇಸೆಜಿಂಗ್ ಸರ್ವೀಸ್ ಇಂದಿನ ದಿನದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಕೆಲವೊಮ್ಮೆ ವಾಯ್ಸ್ ಕರೆಗಳಿಗಂತಲೂ ಹೆಚ್ಚಿನದಾಗಿ ಈ SMS ಗಳನ್ನು ಬಳಕೆ ಮಾಡಿಕೊಳ್ಳುವ ಮಂದಿಯನ್ನು ನಾವು ಕಾಣಬಹುದಾಗಿದೆ. ವಿಶ್ವದಲ್ಲಿ ಮೊದಲ SMS ಕಳುಹಿಸಿ 25 ವರ್ಷಗಳು ಸಂದಿವೆ ಎನ್ನಲಾಗಿದೆ.

ಮೊದಲ SMS ಕಳುಹಿಸಿ ಇಂದಿಗೆ 25 ವರ್ಷ

3ನೇ ಡಿಸೆಂಬರ್ 1992ರಲ್ಲಿ ವಿಶ್ವದ ಮೊದಲ SMS ಕಳುಹಿಸಲಾಗಿತ್ತು. 1992ರಲ್ಲಿ ನಿಲ್ ಪಾಪ್ ವರ್ಥ್ ಎನ್ನುವ 22 ವರ್ಷದ ಸಾಫ್ಟ್ ವೇರ್ ಪ್ರೋಗ್ರಾಮರ್ ವಿಶ್ವದ ಮೊದಲ SMS ಕಳುಹಿಸಿದ ಎನ್ನಲಾಗಿದ್ದು, ಅದುವೇ ಕಂಪ್ಯೂಟರ್ ನಲ್ಲಿ ತನ್ನ ಸಹದ್ಯೋಗಿಗೆ SMS ಕಳುಹಿಸಿದ್ದ ಎನ್ನುವುದು ಈಗ ಇತಿಹಾಸವಾಗಿದೆ.

ತನ್ನ ಗ್ರಾಹಕರಿಗೆ SMS ಸೇವೆಯನ್ನು ಡೆವಲಪವ್ ಮಾಡುತ್ತಿದ್ದ ಪಾಪ್ ವರ್ಥ್, SMS ಟೆಸ್ಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಮೊದಲ ಬಾರಿಗೆ ಡಿಸೆಂಬರ್ 3 ರಂದು 1992ರಲ್ಲಿ ನಲ್ಲಿ ಸಹದ್ಯೋಗಿಗೆ ಮೆರಿ ಕ್ರಿಸ್ಮಸ್ ಎಂದು SMS ಮಾಡಿದ್ದರು.

ಈ SMS ಅಭಿವೃದ್ದಿ ಮಾಡುವ ಸಂದರ್ಭದಲ್ಲಿ ಪಾಪ್ ವರ್ಥ್ ಗೂ ಸಹ SMS ಇಷ್ಟೊಂದು ಜನಪ್ರಿಯತೆ ಗಳಿಸಿಕೊಳ್ಳಲಿದೆ ಎನ್ನುವುದು ತಿಳಿದಿರಲಿಲ್ಲ ಎನ್ನಲಾಗಿದೆ. SMS ಸೇವೆಯನ್ನು ಜನರು ಇಷ್ಟಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಆತನೆ ಆಶ್ವರ್ಯವ್ಯಕ್ತಪಡಿಸಿದ್ದ.

'ಫ್ರಿಡಮ್ 251' ಸುಳ್ಳಲ್ಲ: ರೂ.251ಕ್ಕೆ ಸ್ಮಾರ್ಟ್‌ಫೋನ್ ಮಾರ್ಚ್-ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ..!!'ಫ್ರಿಡಮ್ 251' ಸುಳ್ಳಲ್ಲ: ರೂ.251ಕ್ಕೆ ಸ್ಮಾರ್ಟ್‌ಫೋನ್ ಮಾರ್ಚ್-ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ..!!

ಈತ SMS ಸೇವೆಯನ್ನು ಅಭಿವೃದ್ಧಿ ಪಡಿಸಿದ ನಂತರದಲ್ಲಿ 1993ರಲ್ಲಿ ನೋಕಿಯಾ SMS ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿತ್ತು. ಇದಕ್ಕಾಗಿ ಬಿಪ್ ಸೌಂಡ್ ಅನ್ನು ಇನ್ ಕಂಮಿಂಗ್ SMS ನೀಡಿತ್ತು. ಇದಾದ ಮೇಲೆ ನಡೆದಿದೆಲ್ಲವೂ SMS ಇತಿಹಾಸವಾಗಿದೆ.

Best Mobiles in India

Read more about:
English summary
In 1992, Neil Papworth, a 22-year-old software programmer, sent the first ever text message from a computer to his colleague Richard Jarvis.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X