ಪ್ರಪಂಚದ ಶಕ್ತಿಶಾಲಿ ಮನುಷ್ಯ ಮತ್ತು ಆತನ ಐಫೋನ್..!

|

ಇದು ನಿಜಕ್ಕೂ ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ. ಎಲ್ಲರಿಗೂ ತಿಳಿದಿರುವಂತೆ ಡೊನಾಲ್ಡ್ ಟ್ರಂಪ್ ಅತೀ ಹೆಚ್ಚು ಟ್ವೀಟರ್ ಬಳಸುತ್ತಾರೆ. ಅವರೇ ತಿಳಿಸಿರುವಂತೆ ಅವರಿಗೆ ಟ್ವೀಟ್ ಮಾಡುವುದು ಎಂದರೆ ಇಷ್ಟ. ಇದ್ರಲ್ಲಿ ಆಶ್ಚರ್ಯವಾಗುವ ವಿಚಾರವೇನೆಂದರೆ, ಅಮೇರಿಕಾ ಅಧ್ಯಕ್ಷ ಹೀಗೆ ಟ್ವೀಟರ್ ಬಳಕೆಗಾಗಿ ಐಫೋನ್ ಬಳಸುತ್ತಾರೆ. ಪೋಲಿಟಿಕೋ ನ್ಯೂಸ್ ಸಂಸ್ಥೆ ಪ್ರಕಟ ಪಡಿಸಿರುವಂತೆ ಡೋನಾಲ್ಡ್ ಬಳಿ ಎರಡು ಆಪಲ್ ಐಫೋನ್ ಗಳಿವೆ. ಒಂದು ವೇಳೆ ಕರೆಗಳನ್ನು ಮಾಡಲು ಮತ್ತೊಂದು ಕೇವಲ ಟ್ವೀಟರ್ ಬಳಕೆಗಾಗಿ.. ಟ್ವೀಟ್ ಮಾಡಲು ಡೋನಾಲ್ಡ್ ಐಫೋನ್ ಬಳಸುತ್ತಾರೆಂದರೆ ಎಷ್ಟು ಆಶ್ಚರ್ಯವಲ್ಲವೇ ಎಂದು ಉದ್ಘರಿಸುತ್ತಿದೆ ಪೋಲಿಟಿಕೋ ಸುದ್ದಿ ಮಾಧ್ಯಮ.

ಪ್ರಪಂಚದ ಶಕ್ತಿಶಾಲಿ ಮನುಷ್ಯ ಮತ್ತು ಆತನ ಐಫೋನ್..!


ಟ್ರಂಪ್ ಗೆ ನೀಡಲಾಗಿರುವ ಫೋನ್ ಬಗ್ಗೆ ಭಾರೀ ಭದ್ರತೆ ಇರುತ್ತೆ. ಅಧ್ಯಕ್ಷ ಟ್ರಂಪ್ ಪ್ರತಿಯೊಂದು ವಿಚಾರಕ್ಕೂ ಭದ್ರತಾ ಪರವಾನಗಿ ಪಡೆಯಬೇಕಾಗಿರುತ್ತೆ. ಆದರೆ ಅಮೇರಿಕಾ ಶ್ವೇತ ಭವನದ ಅಧಿಕಾರಿಗಳ ಹೇಳುವ ಪ್ರಕಾರ ಇದು ಅಧ್ಯಕ್ಷರಿಗೆ ಸ್ವಲ್ಪ ಕಿರಿಕಿರಿ ಅನ್ನಿಸುತ್ತಿದೆ. ಅಮೇರಿಕಾದಲ್ಲಿ ಯಾರು ಅಧ್ಯಕ್ಷರಾಗುತ್ತಾರೋ, ಅವರು ಅವರ ಫೋನ್ ನ್ನು ಭದ್ರತಾ ದೃಷ್ಟಿಯಿಂದ ಪ್ರತಿ 30 ದಿನಗಳಿಗೊಮ್ಮೆ, ಸಾಮಾಜಿಕ ಅಪಾಯಗಳ ದೃಷ್ಟಿಯಿಂದಾಗಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಟ್ರಂಪ್ ಮೇಲಿರುವ ಆಪಾದನೆ ಏನಂದರೆ ಅವರು ಈ ಭದ್ರತೆಯನ್ನು ಸರಿಯಾಗಿ ಪಡೆಯುತ್ತಿಲ್ಲವಂತೆ.

ಆದರೆ ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಅವರಿಗಾಗಿಯೇ ತಯಾರಿಸಲಾಗಿದ್ದ ಸ್ಪೆಷಲ್ ಬ್ಲಾಕ್ ಬೆರಿ ಫೋನನ್ನು ಅತೀ ಹೆಚ್ಚು ಸಮಯದ ವರೆಗೆ ಬಳಸಿದ್ದರು. ಆದರೆ ಅದರಲ್ಲಿ ಯಾವುದೇ ಕ್ಯಾಮರಾ,ಮೈಕ್ರೋಫೋನ ಇಲ್ಲವೇ ಜಿಬಿಎಸ್ ಸೌಲಭ್ಯವೂ ಇರಲಿಲ್ಲ. ಜಿಮ್ಮಿ ಕಿಮಲ್ ಜೊತೆ ನಡೆದ ಮಾತುಕತೆಯಲ್ಲೊಮ್ಮೆ ಮಾಜಿ ಅಧ್ಯಕ್ಷ ಒಬಾಮಾ ಈ ವಿಚಾರವನ್ನು ತಿಳಿಸಿದ್ದರು.

ಆದರೆ ಟ್ರಂಪ್ ಭಾರೀ ದೊಡ್ಡ ಮಟ್ಟದಲ್ಲಿ ಟ್ವೀಟರ್ ಗೆ ಅಡಿಕ್ಟ್ ಆಗಿರುವುದರಿಂದಾಗಿ, ಶ್ವೇತ ಭವನದ ಅಧಿಕಾರಿಗಳಿಗೆ ಭಾರೀ ಭಯವಾಗಿದೆ. ಯಾಕೆಂದರೆ ಸೈಬರ್ ಅಟ್ಯಾಕ್ ಗಳ ಸಮಸ್ಯೆ ಅಧಿಕವಾಗಿರುವುದರಿಂದಾಗಿ ಭದ್ರತಾ ವಿಷಯ ಅವರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಆದರೆ ತಮ್ಮ ಐಫೋನಿಗೆ ಅಗತ್ಯವಿರುವ ಭದ್ರತೆಯನ್ನು ಪಡೆಯಲು ಅಮೇರಿಕಾ ಅಧ್ಯಕ್ಷ ನಿರಾಕರಿಸುತ್ತಿದ್ದಾರಂತೆ.

ಅದೂ ಅಲ್ಲದೆ ಟ್ರಂಪ್ ಕೇವಲ ಒಂದು ಫೋನನ್ನು ಬಳಸುತ್ತಿಲ್ಲ. ಬದಲಾಗಿ ಎರಡು ಪೋನ್ ಬಳಸುತ್ತಿದ್ದಾರೆ. ಅವರ ಅಧ್ಯಕ್ಷೀಯ ಪ್ರಚಾರ ಕಾರ್ಯದ ಸಮಯದಲ್ಲಿ, ಟ್ರಂಪ್ ಭಾರೀ ಟೆಕ್ನಾಲಜಿಗಳ ಬಗ್ಗೆ ವಿಮರ್ಷೆಗಳನ್ನು ಮಾಡುತ್ತಿದ್ದರು. ಫೆಬ್ರವರಿ 20, 2016 ರಲ್ಲಿ ಟ್ವೀಟ್ ಮಾಡಿದ್ದ ಟ್ರಂಪ್, ಆಪಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹೇಳಿದ್ದರು. ನಂತರದ ದಿನಗಳಲ್ಲಿ ಮತ್ತೆ ಟ್ವೀಟ್ ಮಾಡಿದ್ದ ಟ್ರಂಪ್, ಇಸ್ಲಾಮಿಕ್ ಟೆರರಿಸ್ಟ್ ಗಳ ಬಗ್ಗೆ ಆಪಲ್ ಸಂಸ್ಥೆ ಮಾಹಿತಿ ನೀಡುವವರೆಗೆ ಆಪಲ್ ಪ್ರೊಡಕ್ಟ್ ಗಳನ್ನು ಬಹಿಷ್ಕರಿಸಿ ಪುನರುಚ್ಚರಿಸಿದ್ದರು.

ಆದರೆ ಆಪಲ್ ಸಂಸ್ಥೆ ಈ ನಿಟ್ಟಿನಲ್ಲಿ ಅಮೇರಿಕಾ ಸರ್ಕಾರಕ್ಕೆ ಯಾವುದೇ ಉತ್ತರವನ್ನು ನೀಡಲಿಲ್ಲ. ಕುತೂಹಲಕಾರಿಯಾಗಿ ಟ್ರಂಪ್ ತಮ್ಮ ಎಲೆಕ್ಷನ್ ರ್ಯಾಲಿಯಲ್ಲಿ ತಾವು ಎರಡು ಫೋನ್ ಬಳಸುತ್ತಿರುವುದಾಗಿ ತಿಳಿಸಿದ್ದರು. ಒಂದು ಸ್ಯಾಮ್ ಸಂಗ್ ಮತ್ತೊಂದು ಐಫೋನ್. ಆದರೀಗ ಸ್ಯಾಮ್ ಸಂಗ್ ಫೋನ್ ಎಸೆದಿದ್ದಾರೆ ಅನ್ನಿಸುತ್ತೆ. ಯಾಕೆಂದರೆ ಕೇವಲ ಎರಡು ಆಪಲ್ ಫೋನ್ ಇರುವ ಬಗ್ಗೆ ಶ್ವೇತಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

How To Link Aadhaar With EPF Account Without Login (KANNADA)

ಒನ್‌ಪ್ಲಸ್ 6 - ಯಾವ RAM ಮತ್ತು ಸ್ಟೋರೇಜ್ ಸ್ಮಾರ್ಟ್‌ಫೋನ್ ಖರೀದಿ ಉತ್ತಮ?ಒನ್‌ಪ್ಲಸ್ 6 - ಯಾವ RAM ಮತ್ತು ಸ್ಟೋರೇಜ್ ಸ್ಮಾರ್ಟ್‌ಫೋನ್ ಖರೀದಿ ಉತ್ತಮ?

ಆದರೆ ಟ್ರಂಪ್ ವಿಚಾರದಲ್ಲಿ, ಫೋನಿನ ಸೆಕ್ಯುರಿಟಿ ಬಹಳ ಪ್ರಮುಖವಾಗಿ ಬೇಕಾಗಿದೆ. ಯಾಕೆಂದರೆ ಶ್ವೇತ ಭವನದ ಅಧಿಕಾರಿಗಳು ಈಗಾಗಲೇ ಟೆರರಿಸ್ಟ್ ಗಳ ಟಾರ್ಗೆಟ್ ಆಗಿದ್ದಾರೆ. ಟ್ರಂಪ್ ಅವರ ಮುಖ್ಯ ಅಧಿಕಾರಿಯಾಗಿರುವ ಜಾನ್ ಕೆಲ್ಲಿಯವರ ಸ್ಮಾರ್ಟ್ ಫೋನ್ ಹ್ಯಾಕ್ ಆಗಿತ್ತು. ಟ್ರಂಪ್ ಅವರ ಟ್ವೀಟರ್ ಪ್ರೀತಿಯನ್ನು ಗಮನಿಸಿ, ಅವರಿಗೆ ಐಫೋನ್ ನೀಡುವುದೇ ಆದರೂ ಅದಕ್ಕಾಗಿ ಶ್ವೇತಭವನದಲ್ಲಿರುವ ಶಿಷ್ಟಾಚಾರವನ್ನು ಪಾಲಿಸಿ, ಎಲ್ಲಾ ಭದ್ರತಾ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದು ಸೂಕ್ತ.

Best Mobiles in India

Read more about:
English summary
World's Most 'Powerful Man And Its 'iPhones'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X