Home
ಸುದ್ದಿಜಾಲ

ಕಚೇರಿಗೆ ಪೈಜಾಮದಲ್ಲೇ ತೆರಳಿದ ವಿಶ್ವದ ಶ್ರೀಮಂತ ವ್ಯಕ್ತಿ!..ಏಕೆ ಗೊತ್ತಾ?

120 ಬಿಲಿಯನ್‌ಗಿಂತಲೂ ಹೆಚ್ಚು ಆಸ್ತಿಗೆ ಒಡೆಯನಾಗಿರುವ ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಪೈಜಾಮಾದಲ್ಲಿ ಆಫೀಸ್​ಗೆ ಬರುವ ಮೂಲಕ ಗಮನಸೆಳೆದಿದ್ದಾರೆ. ಆನ್​ಲೈನ್ ರಿಟೇಲ್ ದಿಗ್ಗಜ ಅಮೆಜಾನ್ ಕಂಪನಿ ಸಿಇಒ ಆಗಿರುವ ಜೆಫ್ ಬೆಜೋಸ್ ರಾತ್ರಿ ವೇಳೆ ಧರಿಸುವ ಪೈಜಾಮಾ ಮತ್ತು ಚಪ್ಪಲಿ ಧರಿಸಿ ಕಚೇರಿಗೆ ಆಗಮಿಸಿ ಎಲ್ಲರಿಗೂ ಒಮ್ಮೆ ಅಚ್ಚರಿ ಮೂಡಿಸಿದ್ದಾರೆ.

ಬುಧವಾರ ನಡೆದಿರುವ ಆಡಳಿತ ಮಂಡಳಿಯ ಸಭೆಗೆ ಮನೆಯಲ್ಲಿ ಧರಿಸುವ ಪೈಜಾಮಾ ಧರಿಸಿ ಜೆಫ್​ ಬೆಜೋಸ್​ ಪಾಲ್ಗೊಂಡಿದ್ದರು. ಜೆಫ್​ ತಾವು ಪೈಜಾಮಾ ಧರಿಸಿ ಕಚೇರಿಗೆ ತೆರಳಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ಆದರೆ, ಅವರು ಹೀಗೆ ಪೈಜಾಮಾದಲ್ಲಿ ಆಫೀಸ್​ಗೆ ಬಂದಿದ್ದಕ್ಕೆ ಬಲವಾದ ಕಾರಣ ಸಹ ಇರುವುದು ವಿಶೇಷವಾಗಿತ್ತು.

ಕಚೇರಿಗೆ ಪೈಜಾಮದಲ್ಲೇ ತೆರಳಿದ ವಿಶ್ವದ ಶ್ರೀಮಂತ ವ್ಯಕ್ತಿ!..ಏಕೆ ಗೊತ್ತಾ?

ಹೌದು, ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೆಜೋಸ್ ಅವರು ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಹೀಗೆ ಬಂದಿದ್ದರು. ಅಮೆರಿಕದ ಮಕ್ಕಳ ಕ್ಯಾನ್ಸರ್​ ಸಂಸ್ಥೆಯೊಂದಿಗೆ ಸೇರಿ ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಈ ಕಾರ್ಯದ ಮೂಲಕ ಅವರ ಕೀರ್ತಿಯನ್ನು ವಿಶ್ವದಲ್ಲಿ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಕಚೇರಿಗೆ ಪೈಜಾಮದಲ್ಲೇ ತೆರಳಿದ ವಿಶ್ವದ ಶ್ರೀಮಂತ ವ್ಯಕ್ತಿ!..ಏಕೆ ಗೊತ್ತಾ?

ಮಕ್ಕಳು ಕ್ಯಾನ್ಸರ್​ ಚಿಕಿತ್ಸೆ ಪಡೆಯುವಾಗ ಹಲವು ತಿಂಗಳುಗಳವರೆಗೆ ಅವರು ಪೈಜಾಮಾದಲ್ಲೇ ಇರಬೇಕಾಗುತ್ತದೆ. ಇತರ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಲವೆಡೆ ಪೈಜಾಮಾ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಕ್ಯಾನ್ಸರ್​ ಸಂಸ್ಥೆ ತಿಳಿಸಿದೆ. ಇದಕ್ಕಾಗಿಯೇ ಬೆಜೋಸ್ ಪೈಜಾಮದಲ್ಲಿ ಆಫಿಸ್‌ಗೆ ತೆರಳಿದ್ದಾರೆ.

ಕಚೇರಿಗೆ ಪೈಜಾಮದಲ್ಲೇ ತೆರಳಿದ ವಿಶ್ವದ ಶ್ರೀಮಂತ ವ್ಯಕ್ತಿ!..ಏಕೆ ಗೊತ್ತಾ?

ವಿಶ್ವದೆಲ್ಲೆಡೇ ಮಕ್ಕಳು ಎದುರಿಸುತ್ತಿರುವ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಕಾಶರ್ಯಕ್ರಮಗಳಿಗೆ ದೇಣಿಗೆಯನ್ನು ನೀಡುವ ಹಾಗೂ ಸಂಗ್ರಹಿಸುವ ಕೆಲದಲ್ಲಿಯೂ ಜೆಫ್ ಬೆಜೋಸ್ ಕಾರ್ಯನಿರತರಾಗಿದ್ದಾರೆ. ಹಾಗಾಗಿ, ಈ ರೀತಿಯಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ನಿಲ್ಲುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ.

ಓದಿರಿ: ಜಿಯೋ '4G ಲ್ಯಾಪ್‌ಟಾಪ್‌' ಬಿಡುಗಡೆಗೆ ಸಮಯ ಫಿಕ್ಸ್!!

Best Mobiles in India

English summary
It was not Amazon CEO Jeff Bezos alone. With #PJammin, scores of Amazon employees joined their boss to support the cause and and went to work wearing pajamas and in their night suit.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+