ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳು ಯಾವುವು ಗೊತ್ತಾ!?
ಮೌಲ್ಯಯುತ ಬ್ರಾಂಡ್ ಎಂದರೇ ಏನು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡುತ್ತಿರುತ್ತೆ. ಪ್ರತಿವರ್ಷ ವಿಶ್ವದ ಪ್ರಸಿದ್ಧ ನಿಯತಕಾಲಿಕೆಯಾದ ಫೋರ್ಬ್ಸ್ ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳನ್ನು ಪಟ್ಟಿ ಮಾಡುತ್ತೆ. ಆ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಪ್ರತಿ ಜಾಗತಿಕ ಕಂಪನಿಗಳ ಕನಸಾಗಿರುವುದಂತೂ ನಿಜ ಅಷ್ಟರ ಮಟ್ಟಿಗೆ ಫೋರ್ಬ್ಸ್ ನಿಯತಕಾಲಿಕೆಯ ಪ್ರಭಾವ ಕಾಣುತ್ತದೆ.

ಕಂಪನಿಯ ಬ್ರಾಂಡ್ ನೇಮ್‌ಗೆ ಇರುವ ಮೌಲ್ಯವನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಬ್ರಾಂಡ್ ನೇಮ್‌ಗಿಂತಲೂ ಕಂಪನಿಯ ವಾರ್ಷಿಕ ಆದಾಯ ಬಹಳಷ್ಟು ಇರುತ್ತೆ. ಆದರೆ ಫೋರ್ಬ್ಸ್ ಜನರು ಯಾವ ಬ್ರಾಂಡ್ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ, ಯಾವುವು ಜನರ ನಂಬಿಕೆ ಉಳಿಸಿಕೊಂಡು ಗ್ರಾಹಕರಿಂದ ಮೌಲ್ಯಯುತ ಎನಿಸಿಕೊಂಡಿವೆ ಎಂಬುದನ್ನು ಪರಿಗಣಿಸುತ್ತೆ.

ಇಂತಹ ಫೋರ್ಬ್ಸ್ ಟಾಪ್ ಮೌಲ್ಯಯುತ ಬ್ರಾಂಡ್‌ಗಳಲ್ಲಿ ಯಾವ್ಯಾವ ಕಂಪನಿಗಳು ಸ್ಥಾನ ಪಡೆದಿವೆ ಗೊತ್ತಾ? ಫೋರ್ಬ್ಸ್ 100 ಕಂಪನಿಗಳ ಪಟ್ಟಿಯನ್ನ ಮಾಡಿದೆ. ಅದರಲ್ಲಿ ಟಾಪ್ 8 ಯಾವುವು ಎಂಬುದರ ವಿವರಣೆ ಇಲ್ಲಿದೆ.

1. ಆಪಲ್
ಫೋರ್ಬ್ಸ್ ಪ್ರಕಟಿಸಿರುವ 2018ರ ಮೌಲ್ಯಯುತ ಬ್ರಾಂಡ್‌ಗಳಲ್ಲಿ ಜಾಗತಿಕ ಐಟಿ ದಿಗ್ಗಜ ಆಪಲ್ ಕಂಪನಿಯು ನಂ.1 ಸ್ಥಾನ ಗಳಿಸಿದೆ. ಐಪೋನ್, ಮ್ಯಾಕ್ ಕಂಪ್ಯೂಟರ್, ಐಪಾಡ್ ಮುಂತಾದ ಗ್ಯಾಡ್ಜೆಟ್‌ಗಳಿಂದ ಪ್ರಸಿದ್ಧಿಯಾಗಿರುವ ಆಪಲ್‌ನ ಬ್ರಾಂಡ್ ಮೌಲ್ಯ 182.8 ಬಿಲಿಯನ್ ಡಾಲರ್ ಎಂದರೆ ನಂಬಲೇಬೇಕು. ಆಪಲ್ ಬ್ರಾಂಡ್ ಆದಾಯ 228.6 ಬಿಲಿಯನ್ ಡಾಲರ್ ಆಗಿದ್ದು, ಶೇ.8ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

2. ಗೂಗಲ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಮೌಲ್ಯಯುತ ಬ್ರಾಂಡ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು, ಆಂಡ್ರಾಯ್ಡ್, ಮೊಬೈಲ್, ಸರ್ಚ್ ಇಂಜಿನ್ ಮತ್ತೀತರ ಇಂಟರ್‌ನೆಟ್ ಸಂಬಂಧಿತ ಅಂಶಗಳಿಂದ ಹೆಸರು ಪಡೆದಿದೆ. ಎರಡನೇ ಸ್ಥಾನ ಪಡೆದಿರುವ ಗೂಗಲ್ ಬ್ರಾಂಡ್ ಮೌಲ್ಯ 132.1 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 97.2 ಬಿಲಿಯನ್ ಡಾಲರ್ ಆಗಿದ್ದು, ಶೇ.30ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

3. ಮೈಕ್ರೋಸಾಫ್ಟ್
ಮಾಹಿತಿ ತಂತ್ರಜ್ಞಾನದ ಪ್ರಸಿದ್ಧ ಹೆಸರು ಮೈಕ್ರೋಸಾಫ್ಟ್ ಮೌಲ್ಯಯುತ ಬ್ರಾಂಡ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದು, ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತೀತರ ಅಂಶಗಳಿಂದ ಹೆಸರು ಪಡೆದಿದೆ. ಮೈಕ್ರೋಸಾಫ್ಟ್ ಬ್ರಾಂಡ್ ಮೌಲ್ಯ 104.9 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 98.4 ಬಿಲಿಯನ್ ಡಾಲರ್ ಆಗಿದ್ದು, ಶೇ.21ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

4. ಫೇಸ್‌ಬುಕ್
ಸಾಮಾಜಿಕ ಜಾಲತಾಣದ ಮೌಲ್ಯಯುತ ಬ್ರಾಂಡ್ ಫೇಸ್‌ಬುಕ್ ಆಗಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ವಾಟ್ಸ್‌ಆಪ್, ಇನ್ಸ್ಟಾಗ್ರಾಂ, ಐಜಿಟಿವಿ ಮುಂತಾದ ಆಪ್ ಹೊಂದಿರುವ ಫೇಸ್‌ಬುಕ್ ಬ್ರಾಂಡ್ ಮೌಲ್ಯ 94.8 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 35.7 ಬಿಲಿಯನ್ ಡಾಲರ್ ಆಗಿದ್ದು, ಶೇ.29ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

5. ಅಮೆಜಾನ್
ಜಗತ್ತಿನ ಪ್ರಸಿದ್ಧ ಇ-ಕಾಮರ್ಸ್ ತಾಣ ಅಮೆಜಾನ್ ಮೌಲ್ಯಯುತ ಬ್ರಾಂಡ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ಎಲ್ಲಾ ಕಡೆಯೂ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಬ್ರಾಂಡ್ ಮೌಲ್ಯ 70.9 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 169.3 ಬಿಲಿಯನ್ ಡಾಲರ್ ಆಗಿದ್ದು, ಶೇ.31ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

6. ಕೋಕಾಕೋಲಾ
ಜಗತ್ತಿನ ಪ್ರಸಿದ್ಧ ಪಾನೀಯ ಬ್ರಾಂಡ್ ಕೋಕಾಕೋಲಾ ಮೌಲ್ಯಯುತ ಬ್ರಾಂಡ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ. ಎಲ್ಲಾ ಕಡೆಯೂ ಪ್ರಚಲಿತದಲ್ಲಿರುವ ಕೋಕಾಕೋಲಾ ಬ್ರಾಂಡ್ ಮೌಲ್ಯ 57.3 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 23.4 ಬಿಲಿಯನ್ ಡಾಲರ್ ಆಗಿದ್ದು, ಶೇ.2ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

7. ಸ್ಯಾಮ್‌ಸಂಗ್
ಫೋರ್ಬ್ಸ್ ಪ್ರಕಟಿಸಿರು 2018ರ ಮೌಲ್ಯಯುತ ಬ್ರಾಂಡ್‌ಗಳಲ್ಲಿ ಜಗತ್ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಟಾಪ್ 7 ಸ್ಥಾನ ಅಲಂಕರಿಸಿದೆ. ಮೊಬೈಲ್, ಸ್ಮಾರ್ಟ್‌ಗ್ಯಾಡ್ಜೆಟ್ಸ್, ಗೃಹ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸುವ ಸ್ಯಾಮ್‌ಸಂಗ್ ಬ್ರಾಂಡ್ ಮೌಲ್ಯ 47.6 ಬಿಲಿಯನ್ ಡಾಲರ್ ಎಂದರೆ ನಂಬಲೇಬೇಕು. ಆಪಲ್ ಬ್ರಾಂಡ್ ಆದಾಯ 203.4 ಬಿಲಿಯನ್ ಡಾಲರ್ ಆಗಿದ್ದು, ಶೇ.25ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.

8. ಡಿಸ್ನಿ
ವಿಶ್ವದ ಜನಪ್ರಿಯ ಮನರಂಜನಾ ಕಂಪನಿ ಡಿಸ್ನಿ ಮೌಲ್ಯಯುತ ಬ್ರಾಂಡ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದಿದ್ದು, ಚಾನೆಲ್, ಪ್ರೋಡಕ್ಷನ್ ಹೌಸ್ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿದೆ. ಡಿಸ್ನಿ ಬ್ರಾಂಡ್ ಮೌಲ್ಯ 47.5 ಬಿಲಿಯನ್ ಡಾಲರ್, ಬ್ರಾಂಡ್ ಆದಾಯ 30.4 ಬಿಲಿಯನ್ ಡಾಲರ್ ಆಗಿದ್ದು, ಶೇ.8ರಷ್ಟು ವಾರ್ಷಿಕ ಮೌಲ್ಯ ಬದಲಾವಣೆ ಪ್ರಮಾಣ ಹೊಂದಿದೆ.


Click it and Unblock the Notifications








