"ಐ ಯಾಮ್" ನಿಂದ ಜಗತ್ತಿನ ಮೊದಲ ಸ್ಮಾರ್ಟ್ ವಾಚ್

ಕೇವಲ ಟೈಮ್ ನೋಡಲಿಕ್ಕೆ ಮಾತ್ರವಲ್ಲದೆ ,ಎಲ್ಲಿದ್ದರೂ ಮಾತಾಡುವ, ಹಾಡು ಕೇಳುವ ಹಾಗು ಈ-ಮೇಲ್ ಕಳಿಸುವ ವಾಚ್ ಇದ್ದರೆ ಎಷ್ಟು ಚೆಂದ ಅಲ್ಲವೆ.
ಜಗತ್ತೇ ನಿಮ್ಮ ಕೈಯಲ್ಲಿ ಇಡುವ ಉದ್ದೇಶ ಹೊಂದಿರುವ ಇಟಲಿಯ "ಐ ಯಾಮ್" ಎಂಬ ಕಂಪನಿ, ಮೊಬೈಲ್, ಕಂಪ್ಯೂಟರ್ ಹಾಗು ಪ್ಲೇಯರುಗಳನ್ನು ಒಳಗೂಡಿಸಿರುವ ವಾಚ್ ಗಳನ್ನ ಪರಿಚಯಿಸಿದೆ .
ಎಸ್.ಎಂ.ಎಸ್, ಫೇಸ್ ಬುಕ್, ಟ್ವಿಟರ್, ಬ್ಲೂ ಟೂತ್, ಮ್ಯುಸಿಕ್, ಈ ಮೇಲ್, ಶೇರುಪೇಟೆ ಸುದ್ದಿ, ಚಿತ್ರ ವೀಕ್ಷಣೆ ಇರುವ ಈ ವಾಚ್ , 4 ಜಿಬಿ ಮೆಮೊರಿ ಕಾರ್ಡ್ ಹೊಂದಿದ್ದು 64 ಎಂ.ಬಿ - 128 ಎಂ.ಬಿ ರಾಮ್ ಹೊಂದಿದೆ.
1.55 ಇಂಚು ಸಫೈರ ಗ್ಲಾಸ್ ನ ಟಚ್ ಡಿಸ್ಪ್ಲೇ ತಂತ್ರಜ್ಞಾನದ , 70ಗ್ರಾಂ ತೂಕ ಇರುವ ಇದು ಆಕರ್ಷಕ 7 ಬಣ್ಣ ಗಳಲ್ಲಿ ನಿಮ್ಮ ಕೈ ರಂಗಾಗಿಸಲಿದೆ.
ಇದರ ಇನ್ನಿತರ ಸ್ಪೆಸಿಫಿಕೆಷನ್ನುಗಳು ಹೀಗಿವೆಪವರ್ & ಬ್ಯಾಟರಿ
- ರಿ-ಚಾರ್ಜಬಲ್ , ಲಿ - ಪೋ 450 ಎಂ.ಏ ಬ್ಯಾಟರಿ
- ಯು. ಎಸ್ .ಬಿ & ಅಡಾಪ್ಟರ್ ಚಾರ್ಜ್
- 48 ಘಂಟೆಗಳ ಸ್ಟ್ಯಾಂಡ್ ಬೈ ಟೈಮ್
- 3 ಘಂಟೆಗಳ ಸ್ಪೀಕರ್ ಫೋನ್ ಟಾಕ್ ಟೈಮ್
ತಂತ್ರಾಂಶ ಹೊಂದಾಣಿಕೆ
- ಆನ್ಡ್ರೊಯ್ಡ್ ( ಎಚ್ . ಟಿ. ಸಿ , ಸ್ಯಾಮ್ ಸಂಗ್, ಮುಂತಾದವು )
- ಬ್ಲಾಕ್ ಬೆರಿ
- ಐಯ್ ಓಎಸ್ (ಆಪಲ್ )
- ಬಡ ( ಸ್ಯಾಮ್ಸಂಗ್ )
- ಸಿಂಬಿಯನ್ (ನೋಕಿಯಾ )
- ವಿನ್ ಡೋಸ್ ಫೋನ್
ಕನೆಕ್ಟ್ಅರ್ & ಇನ್ಪುಟ್
- 3.5 ಎಂ ಎಂ ಹೆಡ್ ಫೋನ್ , ಮೈಕ್ರೋ ಫೋನ್ & ಸ್ಪೀಕರ್
ಮಾಡೆಲ್ ಗಳು 18ಸಾವಿರ ರುಪಾಯಿoದ ಒಂದುಕಾಲು ಲಕ್ಷ ವರೆಗೂ ಇದೆ. ಹಾಗಿದ್ದರೆ ತಡ ಏಕೆ , "ಐ ಅಮ್" ವಾಚ್ ಧರಿಸಿ ಮತ್ತಷ್ಟು ಸ್ಮಾರ್ಟ್ ಆಗಿ !!


Click it and Unblock the Notifications








