Subscribe to Gizbot

ಕುರುಡರಿಗಾಗಿ ಹೊಸ ಸ್ಮಾರ್ಟ್‌ಫೋನ್‌

Written By:

ಕಣ್ಣಿಲ್ಲದವರಿಗಾಗಿ ಪ್ರಪಂಚದ ಮೊತ್ತ ಮೊದಲ ಸ್ಮಾರ್ಟ್‌ಫೋನ್‌ ಭಾರತದಲ್ಲಿ ತಯಾರಾಗಿದೆ.ಈ ಸ್ಮಾರ್ಟ್‌ಫೋನ್‌ ಮೂಲಕ ಕುರುಡರು ಸುಲಭವಾಗಿ ಇ ಮೇಲ್‌ ಮತ್ತು ಮೆಸೇಜ್‌ಗಳನ್ನು ಕಳುಹಿಸಬಹುದಾಗಿದೆ.
ಅಹಮದಾಬಾದ್‌ನ ಐಐಎಂನ ಸುಮಿತ್‌ ದುಗ್ಗರ್‌ ಈ ಬ್ರೈಲ್‌ ಸ್ಮಾರ್ಟ್‌ಫೋನ್‌ ಕಂಡುಹಿಡಿದಿದ್ದಾರೆ. ಈ ಸ್ಮಾರ್ಟ್‌ಫೋನ್‌ಲ್ಲಿ Shape Memory Alloy technology ಜೊತೆಗೆ ವಿಶೇಷವಾದ ಟಚ್‌ಸ್ಕ್ರೀನ್‌ ಬಳಸಲಾಗಿದೆ.

ಕುರುಡರಿಗಾಗಿ ಹೊಸ ಸ್ಮಾರ್ಟ್‌ಫೋನ್‌

ಈ ವಿಶೇಷ ಸ್ಮಾರ್ಟ್‌ಫೋನ್‌ನ್ನು ಐಐಟಿ ದೆಹಲಿ ಮತ್ತು ಹೈದರಾಬಾದ್‌ನ ಎಲ್‌.ವಿ ಪ್ರಸಾದ್‌ ಇನ್ಸೂಟ್ಯೂಟ್‌ ಜೊತೆಯಾಗಿ ನಿರ್ಮಿಸಿದ್ದಾರೆ. ಈಗ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೇಗೆ ಮೆಸೇಜ್‌,ಇಮೇಲ್‌, ಚಿತ್ರಗಳನ್ನು ನೋಡುತ್ತೇವೋ ಅದೇ ರೀತಿಯಾಗಿ ಈ ಸ್ಮಾರ್ಟ್‌ಫೋನ್‌ಲ್ಲಿ ನೋಡಬಹುದು ಎಂದು ತಯಾರಕರಾದ ಸುಮಿತ್‌ ದುಗ್ಗರ್‌ ಹೇಳಿದ್ದಾರೆ.

ಈ ಸ್ಮಾರ್ಟ್‌ಫೋನ್‌ ಬೆಲೆ ಅಂದಾಜು ಹತ್ತು ಸಾವಿರವಿದ್ದು, ಈ ವರ್ಷದ ಅಂತ್ಯಕ್ಕೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot