Subscribe to Gizbot

ಆಪಲ್‌ ಐಓಎಸ್‌ನೊಂದಿಗೆ ಬರಲಿದೆ ಕಾರು

Posted By:

ಆಪಲ್‌ ಕಂಪೆನಿಯ ವರ್ಲ್ಡ‌ ವೈಡ್‌ ಡೆವಲಪರ್‍ಸ್‌ ಕಾನ್ಪರೆನ್ಸ್‌ ಈಗಾಗಲೇ ಆರಂಭಗೊಂಡಿದೆ. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಕಛೇರಿಯಲ್ಲಿ ಪ್ರತಿವರ್ಷ‌ದ ಜೂನ್‌ ಮೊದಲ ಅಥವಾ ಎರಡನೇ ವಾರದಲ್ಲಿ ಈ ಕಾನ್ಫರೆನ್ಸ್‌ನ್ನು ಆಪಲ್ ಆಯೋಜಿಸುತ್ತದೆ. ವಿಶ್ವದ ದೊಡ್ಡ ದೊಡ್ಡ ಟೆಕ್ ತಜ್ಞರು, ವಿವಿಧ ಸಾಫ್ಟ್‌ವೇರ್‌ ಕಂಪೆನಿಗಳ ಅಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭ‌ದಲ್ಲಿ ಆಪಲ್‌ ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ ಜೊತೆಗೆ ಈಗ ಇರುವ ಉತ್ಪನ್ನವನ್ನು ಮತ್ತಷ್ಟು ಸುಧಾರಿಸಿ ಗ್ರಾಹಕರಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಈ ವರ್ಷದ ಆಪಲ್‌ನ ಕಾನ್ಫ್‌ರೆನ್ಸ್‌ನಲ್ಲಿ ಆಪಲ್‌ ಪ್ರಕಟಿಸಿದ ಹೊಸ ಉತ್ಪ್ಪನ್ನಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

Click Here For More Apple Gadgets Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್‌ 7

ಐಓಎಸ್‌ 7

ವಿಶೇಷತೆ:
ಹೊಸ ಲಾಕ್‌ ಸ್ಕ್ರೀನ್
ಹವಾಮಾನ ಅಪ್ಲಿಕೇಶನ್ ಹೊಸ ಡಿಸ್ಪ್ಲೆ ನೀಡಲಾಗಿದೆ
ಫೇಸ್‌ ಟೈಮ್‌ ಆಡಿಯೋ ಕಾಲಿಂಗ್‌
ನೋಟಿಫಿಕೇಶನ್‌ ಸಿಂಕ್‌ ಮಾಡಬಹುದು
ಫೋನ್‌ ಮತ್ತು ಮೆಸೇಜ್‌ ಬ್ಲಾಕ್‌ ಮಾಡಬಹುದು
ಸಫಾರಿ ಬ್ರೌಸರ್‌ಗೆ ಲಾಕಿಂಗ್‌ ವ್ಯವಸ್ಥೆ

ಸುಧಾರಿಸಿತು ಸಿರಿ

ಸಿರಿ

ಆಪಲ್‌ನ ಸ್ಪೀಚ್ ರೆಕಗ್ನಿಷನ್ ತಂತ್ರಾಂಶ 'ಸಿರಿ' ಈಗ ಮತ್ತಷ್ಟು ಸುಧಾರಣೆ ಗೊಂಡಿದೆ. ಸ್ಕ್ರೀನ್‌ ಬ್ರೈಟ್‌ ನೆಸ್‌ನ್ನು ಮಾತಿನಿಂದಲೇ ಸೆಟ್‌ ಮಾಡಿಕೊಳ್ಳಬಹುದು.

ಐಓಎಸ್‌ನೊಂದಿಗೆ ಬರಲಿದೆ ಕಾರು

ಐಓಎಸ್‌ನೊಂದಿಗೆ ಬರಲಿದೆ ಕಾರು

ಐಓಎಸ್‌ ಹೊಂದಿರುವ ಕಾರುಗಳು ಮುಂದೆ ಬರಲಿವೆ.ಕಾರಿನ ಡಾಶ್‌ಬೋರ್ಡ್‌ ಐಓಎಸ್‌ ಹೊಂದಿದ್ದು,ಇದರಲ್ಲೇ ಮ್ಯೂಸಿಕ್‌,ದಾರಿ,ಐ ಮೆಸೇಜ್‌ಗಳನ್ನು ನೋಡಬಹುದಾಗಿದೆ. ಕಾರುಗಳನ್ನು ತಯಾರಿಸುವ 12 ಕಂಪೆನಿಗಳೊಂದಿಗೆ ಆಪಲ್‌ ಮಾತುಕತೆ ನಡೆಸಿದ್ದು ಮುಂದಿನ ವರ್ಷ ಈ ಕಾರುಗಳು ರಸ್ತೆಗೆ ಇಳಿಯಲಿವೆ.

ಒಸ್‌ ಎಕ್ಸ್‌ ಮ್ಯಾವರಿಕ್ಸ್‌

ಒಸ್‌ ಎಕ್ಸ್‌ ಮ್ಯಾವರಿಕ್ಸ್‌

ಮೊದಲಿದ್ದ ಆಪರೇಟಿಂಗ್‌ ಸಿಸ್ಟಂಗಿಂತ ಮತ್ತಷ್ಟು ಸುಧಾರಿತ ಓಎಸ್
ಒಪನ್‌ ಜಿಲ್‌(Open Graphics Library) ಸಪೋರ್ಟ್‌ ಮಾಡುತ್ತದೆ.
ಮಲ್ಟಿಪಲ್‌ ಡಿಸ್ಪ್ಲೆ: ಮೆನು ಮತ್ತು ಡಾಕ್‌ನ್ನು ಓಪನ್‌ ಮಾಡಿ ಕೆಲಸ ಮಾಡಬಹುದು

ಮ್ಯಾಕ್‌ ಪ್ರೋ(ಸಿಪಿಯು)

ಮ್ಯಾಕ್‌ ಪ್ರೋ(ಸಿಪಿಯು)

ಮ್ಯಾಕ್‌ ಸಿಪಿಯುನಲ್ಲಿ ಬದಲಾವಣೆ ಮಾಡಿದ್ದು,ಹೊಸ ವಿಶೇಷತೆಗಳೊಂದಿಗೆ ಸಿಪಿಯು ಬರಲಿದೆ.
ವಿಶೇಷತೆ:
ಹೊಸ ಥರ್ಮ‌ಲ್‌ ಕೋರ್‌ ಬಾಡಿ
ಇಂಟೆಲ್‌ 12 ಕೋರ್‌
ಡ್ಯುಯಲ್‌ ವರ್ಕ್‌ ಸ್ಟೆಷನ್‌
4k ಡಿಸ್ಪ್ಲೇ ಸಪೋರ್ಟ್‌
ಅಮರಿಕದಲ್ಲಿ ನಿರ್ಮಾ‌ಣ
ಮುಂದಿನ ವರ್ಷ‌ ಮಾರುಕಟ್ಟೆಗೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot