Home
ಸುದ್ದಿಜಾಲ

X Down: ವಿಶ್ವಾದ್ಯಂತ 'ಎಕ್ಸ್‌' ಡೌನ್; 27,700ಕ್ಕಿಂತ ಹೆಚ್ಚು ದೂರು! ಏನಾಯ್ತು?

X Down Globally: ಎಕ್ಸ್ ಬಳಕೆದಾರರಿಗೆ ಇದು ಶಾಕಿಂಗ್‌ ಸುದ್ದಿ. ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಎಕ್ಸ್‌ (X) ದಿಢೀರನೆ ಸ್ಥಗಿತಗೊಂಡಿದೆ. ಹೌದು, ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್​​​ಗಳಲ್ಲಿ ಒಂದಾದ ಎಕ್ಸ್ ಇಂದು ಜಾಗತಿಕವಾಗಿ ಸ್ಥಗಿತಗೊಂಡಿರುವ ಅನುಭವ ಉಂಟಾಗಿದೆ. ಎಕ್ಸ್​​​ ಡೌನ್​​​ ಆಗಿರುವ ಬಗ್ಗೆ ಬಳಕೆದಾರರು ವರದಿ ಮಾಡಿದ್ದಾರೆ. ಸಾವಿರಾರು ಎಕ್ಸ್‌ (Twitter) ಬಳಕೆದಾರರು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ಲಿಂಕ್‌ಗಳು, ಚಿತ್ರಗಳು ಮತ್ತು ವಿಡಿಯೋ ಅಪ್ಲೋಡ್​​​ ಮತ್ತು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಲಾಗಿದೆ.

ಎಲೋನ್ ಮಸ್ಕ್ ಅವರ ಎಕ್ಸ್ ಪ್ಲಾಟ್‌ಫಾರ್ಮ್ ಬುಧವಾರ (ಆಗಸ್ಟ್‌ 28) ಬೆಳಗ್ಗೆ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಎದುರಿಸಿದೆ. ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಫೀಡ್‌ನಲ್ಲಿ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನ ಸೇವೆಯನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬಳಕೆದಾರರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಹಿಂದೆಯೂ ಹಲವು ಬಾರಿ ಎಕ್ಸ್​​​ ಬಳಕೆದಾರರು ಇಂತಹ ಸಮಸ್ಯೆಗಳನ್ನು ಅನುಭವಿಸಿದ್ದಾರೆ.

X Down: ವಿಶ್ವಾದ್ಯಂತ 'ಎಕ್ಸ್‌' ಡೌನ್; 27,700ಕ್ಕಿಂತ ಹೆಚ್ಚು ದೂರು! ಏನಾಯ್ತು?

ಎಕ್ಸ್‌ನಲ್ಲಿ ದೋಷ ಕಂಡುಬಂದ ಕೂಡಲೇ ಜನರು ವರದಿ ಮಾಡಲು ಪ್ರಾರಂಭಿಸಿದರು. ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಈ ಬಗ್ಗೆ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಜೊತೆಗೆ, ಅನೇಕ ಜನರು ಡೌನ್ ಡಿಟೆಕ್ಟರ್, ಸ್ಥಗಿತಗಳನ್ನು ಪತ್ತೆಹಚ್ಚುವ ವೆಬ್‌ಸೈಟ್‌ನಲ್ಲಿಯೂ ಪೋಸ್ಟ್ ಮಾಡಲು ಪ್ರಾರಂಭಿಸಿದರು.

ಏನೋ ತಪ್ಪಾಗಿದೆ, ಮರುಲೋಡ್ ಮಾಡಿ!

ಎಕ್ಸ್ ಸ್ಥಗಿತ ಆಗಿರುವ ಸುದ್ದಿ ಬೆಳಗ್ಗೆ 9.15 ಗಂಟೆಯ ನಂತರ ಬರಲು ಪ್ರಾರಂಭಿಸಿತು. ಸಾಮಾಜಿಕ ಜಾಲತಾಣದಲ್ಲಿ ಅನೇಕ ಬಳಕೆದಾರರು ಈ ಬಗ್ಗೆ ವರದಿ ಮಾಡಿದ್ದಾರೆ. ಅನೇಕ ಜನರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿರುವ ಬಳಕೆದಾರರು ತಮ್ಮ ಖಾತೆಗಳಲ್ಲಿನ ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ವೀಕ್ಷಿಸಲು ಪ್ರಯತ್ನಿಸಿದ ತಕ್ಷಣ, ಏನೋ ತಪ್ಪಾಗಿದೆ, ಮರುಲೋಡ್ ಮಾಡಲು ಪ್ರಯತ್ನಿಸಿ ಎಂಬ ಸಂದೇಶವು ಕಾಣಿಸಿಕೊಂಡಿದೆ.

ಡೌನ್ ಡಿಟೆಕ್ಟರ್ ಪ್ರಕಾರ, ಬುಧವಾರ ಬೆಳಗ್ಗೆ 9.15 ಗಂಟೆ ಸುಮಾರಿಗೆ ಎಕ್ಸ್‌ ಸ್ಥಗಿತ (ಎಕ್ಸ್‌ ಡೌನ್) ಆಗಿರುವ ವರದಿಗಳು ಕಂಡುಬಂದವು. ಮತ್ತು ಕೆಲವು ನಿಮಿಷಗಳ ನಂತರ ಈ ಸಂಖ್ಯೆ 1 ಸಾವಿರವನ್ನು ದಾಟಿತು. ಅನೇಕ ಬಳಕೆದಾರರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮತ್ತು ಎಕ್ಸ್‌ ಸ್ಥಗಿತ ಆಗಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಏಕಾಏಕಿ ಸ್ಥಗಿತಕ್ಕೆ ಕಾರಣ ಏನು?

ಸಾಕಷ್ಟು ಬಳಕೆದಾರರು ಈ ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಅಪ್ಡೇಟ್‌ಗಳನ್ನು ಮತ್ತು ಇತ್ತೀಚಿನ ಸುದ್ದಿಗಳನ್ನು ಸಹ ಪಡೆಯುತ್ತಾರೆ. ಏಕಾಏಕಿ ಎಕ್ಸ್‌ನ ಸ್ಥಗಿತವು ಪ್ರಪಂಚದಾದ್ಯಂತದ ಜನರು ಕೊಂಚ ಗಾಬರಿಯಾದರು. ಎಕ್ಸ್‌ ಸ್ಥಗಿತದ ಪರಿಣಾಮವು ಭಾರತದ ಜೊತೆಗೆ ಅನೇಕ ದೇಶಗಳಲ್ಲಿ ಗೋಚರವಾಯಿತು. ಪ್ರಸ್ತುತ, ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ. ಮತ್ತು ಏಕಾಏಕಿ ಸ್ಥಗಿತದ ಹಿಂದಿನ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

27,701ಕ್ಕೆ ಏರಿದ ದೂರುಗಳ ಸಂಖ್ಯೆ

ಡೌನ್‌ಟೈಮ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್‌ನಲ್ಲಿ, ಎಕ್ಸ್‌ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗದಿರುವ ಬಗ್ಗೆ ಬಳಕೆದಾರರು 27,700 ವರದಿಗಳನ್ನು ಮಾಡಿದ್ದಾರೆ. ಬೆಳಗ್ಗೆ 8.46 ಗಂಟೆಗೆ ದೂರುಗಳ ಸಂಖ್ಯೆ ಸುಮಾರು 27,701ಕ್ಕೆ ಏರಿದವು. ರಾಯಿಟರ್ಸ್ ಪ್ರಕಾರ, ಕೆನಡಾದಲ್ಲಿ 3,300 ಸ್ಥಗಿತ ವರದಿಗಳು ಮತ್ತು ಯುಕೆನಲ್ಲಿ (UK) 1,600 ವರದಿಗಳನ್ನು ನೋಂದಾಯಿಸಿದ್ದಾರೆ.

ಡೌನ್‌ಡೆಕ್ಟರ್ ಪ್ರಕಾರ, ಶೇ.68 ರಷ್ಟು ಬಳಕೆದಾರರು ಅಪ್ಲಿಕೇಶನ್ ಅನ್ನು ಪ್ರವೇಶಿಸುವಾಗ ಸಮಸ್ಯೆಯನ್ನು ಎದುರಿಸಿದ್ದಾರೆ. ಮತ್ತು ಅವರಲ್ಲಿ ಶೇ.26 ರಷ್ಟು ಜನರು ವೆಬ್‌ಸೈಟ್‌ನಲ್ಲಿ ತೊಂದರೆ ಎದುರಿಸಿದ್ದಾರೆ. ಇದಲ್ಲದೆ, 6 ಪ್ರತಿಶತ ಎಕ್ಸ್‌ ಬಳಕೆದಾರರು ಸರ್ವರ್ ಸಂಬಂಧಿತ ಸಮಸ್ಯೆಗಳನ್ನು ಸಹ ವರದಿ ಮಾಡಿದ್ದಾರೆ.

Best Mobiles in India

English summary
X Down Globally: Users Report Outage Across the Globe, Including India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+