Home
ಸುದ್ದಿಜಾಲ

ಭಾರತಕ್ಕೆ Xbox ಕ್ಲೌಡ್ ಗೇಮಿಂಗ್: ಕನ್‌ಸೋಲ್ ಇಲ್ಲದೆ ಫೋನ್, PC, TVಯಲ್ಲೇ ಆಡಿ!

ನೀವು ಜನಪ್ರಿಯ Xbox ಗೇಮಿಂಗ್ ಆಡಬೇಕೆ?..ಇದಕ್ಕಾಗಿ ಹೆಚ್ಚು ಖರ್ಚು ಮಾಡಲು ಮನಸ್ಸಿಲ್ಲವೇ?.. ಹಾಗಾದರೆ, ಇನ್ನು ಹೆಚ್ಚು ಚಿಂತಿಸಬೇಡಿ.! ಏಕೆಂದರೆ, ಮೈಕ್ರೋಸಾಫ್ಟ್ ಭಾರತದ ಗೇಮಿಂಗ್ ಜಗತ್ತಿಗೆ ಒಂದು ದೊಡ್ಡ ಉಡುಗೊರೆಯನ್ನು ನೀಡಿದ್ದು, Xbox Cloud Gaming ಇದೀಗ ದೇಶದಲ್ಲಿಯೂ ಲಭ್ಯವಾಗಿದೆ. ಇದರ ಸಹಾಯದಿಂದ ಗೇಮಿಂಗ್ ಪ್ರಿಯರು ಯಾವುದೇ Xbox ಕಾನ್ಸೋಲ್ ಖರೀದಿ ಮಾಡದೆ, ತಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಸ್ಮಾರ್ಟ್‌ಟಿವಿಗಳಲ್ಲೇ Xbox ಆಟಗಳನ್ನು ನೇರವಾಗಿ ಸ್ಟ್ರೀಮ್ ಮಾಡಿ ಆಡಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಹುದಿನಗಳ ನಿರೀಕ್ಷೆಯ ನಂತರ ಮೈಕ್ರೋಸಾಫ್ಟ್ ತನ್ನ Xbox Cloud Gaming ಅನ್ನು ದೇಶದಲ್ಲಿ ಇದೀಗ ಪರಿಚಯಿಸಿದೆ. ಈ Xbox Cloud Gaming ಸೇವೆಯನ್ನು Game Pass Essential, Premium ಮತ್ತು Ultimate ಎಂಬ ಪ್ಲಾನ್‌ಗಳಲ್ಲಿ ನೀಡಲಾಗಿದ್ದು, ಜೊತೆಗೆ, PC Game Pass ಮುಖಾಂತರವೂ ಈ ಕ್ಲೌಡ್ ಸ್ಟ್ರೀಮಿಂಗ್ ಸೌಲಭ್ಯವನ್ನು ಬಳಸಬಹುದು ಎಂದು ತಿಳಿಸಲಾಗಿದೆ. ಇದರಲ್ಲಿ, Xbox ಗೇಮ್‌ನ ಬೇಸಿಕ್ Game Pass Essential ಚಂದಾದಾರಿಕೆಯು ಪ್ರತಿ ತಿಂಗಳು ಕೇವಲ ₹499 ರೂ.ಗಳಿಂದ ಆರಂಭವಾಗಿದೆ. ಇದು ಜನಪ್ರಿಯ Xbox ಗೇಮ್‌ಗಳಿಗೆ ಪ್ರವೇಶ ನೀಡುತ್ತದೆ.

ಕಾನ್ಸೋಲ್ ಇಲ್ಲದೆ Xbox ಗೇಮ್‌ಗಳನ್ನು ಆಡುವ ವಿಧಾನ

  • ಇದೀಗ ಯಾವುದೇ Xbox ಕಾನ್ಸೋಲ್ ಇಲ್ಲದವರೂ Xbox ಗೇಮ್‌ಗಳನ್ನು ಸುಲಭವಾಗಿ ಆಡುವಂತಾಗಿದೆ. ಇದಕ್ಕಾಗಿ,
  • ಮೊದಲು, Xbox Game Pass Essential, Premium ಅಥವಾ Ultimate ಪ್ಲಾನ್‌ಗಳಲ್ಲಿ ಒಂದನ್ನು ಚಂದಾದಾರಿಕೆ ಮಾಡಿಕೊಳ್ಳಿ.
  • Windows PC, Mac, Android/iOS ಸಾಧನ ಅಥವಾ Smart TV (Samsung ಅಥವಾ LG) ಇರಲಿ.
  • ಕನಿಷ್ಠ 20 Mbps ವೇಗದ ಇಂಟರ್ನೆಟ್ ಸಂಪರ್ಕ ಮತ್ತು ಕಂಟ್ರೋಲರ್ ಅಗತ್ಯವಿದೆ.
  • Xbox App ಡೌನ್‌ಲೋಡ್ ಮಾಡಿ ಅಥವಾ xbox.com/play ಗೆ ತೆರಳಿ, ನಿಮ್ಮ Microsoft ಖಾತೆ ಬಳಸಿ ಲಾಗಿನ್ ಆಗಿ.
  • Cloud-enabled ಗೇಮ್‌ಗಳ ಲೈಬ್ರರಿಯಲ್ಲಿ ಇಷ್ಟದ ಗೇಮ್ ಅನ್ನು ಆಯ್ಕೆ ಮಾಡಿ. ಯಾವುದೇ ಡೌನ್‌ಲೋಡ್ ಬೇಡ, ನೇರವಾಗಿ ಸ್ಟ್ರೀಮ್ ಮಾಡಿ ಆಡಿ.!
  • ಭಾರತಕ್ಕೆ Xbox ಕ್ಲೌಡ್ ಗೇಮಿಂಗ್: ಕನ್‌ಸೋಲ್ ಇಲ್ಲದೆ ಫೋನ್, PC, TVಯಲ್ಲೇ ಆಡಿ!

ಯಾವ ಸಾಧನಗಳಲ್ಲಿ ಬಳಸಬಹುದು?

  • Windows, Mac ಮತ್ತು Chromebook ಕಂಪ್ಯೂಟರ್‌ಗಳು
  • Android ಹಾಗೂ iOS ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು
  • Samsung ಹಾಗೂ LG Smart TVs
  • Amazon Fire TV ಸ್ಟ್ರೀಮಿಂಗ್ ಸಾಧನಗಳು

ಹೊಂದಾಣಿಕೆಯ ಕಂಟ್ರೋಲರ್‌ಗಳು

  • Xbox Wireless ಅಥವಾ Sony DualSense ಕಂಟ್ರೋಲರ್‌ಗಳು (ವೈರ್‌ಲೆಸ್ ಅಥವಾ USB ಮೂಲಕ)
  • ಆಯ್ದ ಆಟಗಳಿಗೆ ಮೌಸ್, ಕೀಬೋರ್ಡ್ ಅಥವಾ ಟಚ್ ಕಂಟ್ರೋಲ್‌ಗಳು ಸಹ ಲಭ್ಯವಿವೆ.

Xbox Cloud Gaming: ಹೊಸ ಚಂದಾದಾರಿಕೆ ದರಗಳು ಹೀಗಿವೆ,

  • Xbox Game Pass Ultimate: ₹1,389 ಪ್ರತಿ ತಿಂಗಳು
  • Game Pass Premium: ₹699 ಪ್ರತಿ ತಿಂಗಳು
  • Game Pass Essential: ₹499 ಪ್ರತಿ ತಿಂಗಳು
  • PC Game Pass: ₹939 ಪ್ರತಿ ತಿಂಗಳು

ಈ ಪ್ಲಾನ್‌ಗಳ ಮೂಲಕ ನೂರಾರು ಜನಪ್ರಿಯ Xbox ಆಟಗಳನ್ನು ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಆಡುವ ಅವಕಾಶ ದೊರೆಯಲಿದೆ.

ಭಾರತದಲ್ಲಿ ಹೊಸ ಗೇಮಿಂಗ್ ಕ್ರಾಂತಿ?
ಮೈಕ್ರೋಸಾಫ್ಟ್‌ Xbox Cloud Gaming ಭಾರತದ ಗೇಮಿಂಗ್ ಪ್ರಪಂಚಕ್ಕೆ ಹೊಸ ದಾರಿ ತೆರೆದಿದೆ. ದುಬಾರಿ ಕಾನ್ಸೋಲ್‌ಗಳ ಅಗತ್ಯವಿಲ್ಲದೆ, ಅತ್ಯುತ್ತಮ ಗುಣಮಟ್ಟದ ಆಟಗಳನ್ನು ಎಲ್ಲೆಂದರಲ್ಲಿ ಆಡುವ ಅವಕಾಶ ಇದೀಗ ಎಲ್ಲರಿಗೂ ಲಭ್ಯವಾಗಿದೆ. ಇದು ದೇಶದಲ್ಲಿ ಹೊಸ ಗೇಮಿಂಗ್ ಯುಗದ ಆರಂಭ ಎಂದು ಹೇಳಬಹುದು. ನೀವು ಕೂಡ Xbox ಗೇಮ್‌ಗಳನ್ನು ಆಡಲು ಇಷ್ಟಪಡುತ್ತೀರಾ? . ಈ ಹೊಸ ಅಪ್‌ಡೇಟ್ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Xbox Cloud Gaming has officially launched in India, allowing gamers to stream and play Xbox titles instantly on their smartphones, PCs, and smart TVs no Xbox console required.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+