ಹಣ ಹಿಂತಿರುಗಿಸಲಿರುವ ಎಕ್ಸ್‌ಬಾಕ್ಸ್‌ ಲೈವ್ ಗೋಲ್ಡ್

Written By:

ಎಕ್ಸ್‌ಬಾಕ್ಸ್ ತನ್ನ ಇತ್ತೀಚಿನ ಎಕ್ಸ್‌ಬಾಕ್ಸ್ ಲೈವ್ ಗೋಲ್ಡ್ ಅನ್ನು ಕೈ ಬಿಟ್ಟು ಅದನ್ನು ಖರೀದಿಸಿದ ಬಳಕೆದಾರರಿಗೆ ಹಣವನ್ನು ವಾಪಾಸು ಮಾಡಲು ನಿರ್ಧರಿಸಿದೆ. ಇದನ್ನು ಈಗಾಗಲೇ ಖರೀದಿಸಿದವರು ಅದನ್ನು ಕಂಪನಿಗೆ ಹಿಂತಿರುಗಿಸಿ ಹಣವನ್ನು ಪಡೆಯಬಹುದಾಗಿದೆ.

ತಮ್ಮ ಚಂದಾದಾರಿಕೆಯ ಮೇಲೆ ಗೋಲ್ಡ್ ಸದಸ್ಯರು ಹಣವನ್ನು ಹಿಂಪಡೆಯಲು ಅರ್ಜಿ ಹಾಕಬಹುದಾಗಿದ್ದು ಎಕ್ಸ್ ಬಾಕ್ಸ್ ಅನ್ನು ಮರಳಿ ನೀಡಬೇಕೆಂದು ಮೈಕ್ರೋಸಾಫ್ಟ್ ತಿಳಿಸಿದೆ. ಇದೊಂದು ಗೇಮ್ ಆಡುವ ಡಿವೈಸ್ ಆಗಿದ್ದು ಇದು ಕೆಲವೊಂದು ದೋಷಗಳನ್ನು ತನ್ನಲ್ಲಿ ಹೊಂದಿದೆ ಎಂದು ಬಳಕೆದಾರರು ದೂರು ನೀಡಿದ್ದಾರೆ.

ಹಣ ಹಿಂತಿರುಗಿಸಲಿರುವ ಎಕ್ಸ್‌ಬಾಕ್ಸ್‌ ಲೈವ್ ಗೋಲ್ಡ್

ಅಪ್ಲಿಕೇಶನ್‌ಗಳಾದ ಹುಲು ಪ್ಲಸ್, ನೆಟ್‌ಫಿಕ್ಸ್, ಟ್ವಿಚ್, ಇಎಸ್‌ಪಿಎನ್, ಎಚ್‌ಬಿಒ ಹಾಗೂ ಮೆಶಿನಿಮಾ ಎಕ್ಸ್ ಬಾಕ್ಸ್ ಒನ್ ಮತ್ತು ಎಕ್ಸ್‌ ಬಾಕ್ಸ್ 360 ನಲ್ಲಿ ದೊರೆಯಲಿದ್ದು ಎಕ್ಸ್‌ ಬಾಕ್ಸ್ ಲೈವ್ ಚಂದಾದಾರಿಕೆಯಿಲ್ಲದೆ ಬರುವ ತಿಂಗಳಿನಿಂದಲೇ ಈ ಸೌಲಭ್ಯ ದೊರೆಯಲಿದೆ.

ಆನ್‌ಲೈನ್‌ನಲ್ಲಿ ಗೇಮ್ ಆಡಲು, ಚಾಟ್ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಗೋಲ್ಡ್ ಸೇವೆಯೊಂದಿಗೆ ಮೈಕ್ರೋಸಾಫ್ಟ್ ಗೇಮ್‌ಗಳ ಮೂಲಕ ಉಚಿತ ಗೇಮ್ ಅನ್ನು ಪಡೆಯಲು ಎಕ್ಸ್ ಬಾಕ್ಸ್ ಲೈವ್ ಗೋಲ್ಡ್ ಚಂದಾದಾರಿಕೆಯು ಅತ್ಯವಶ್ಯಕವಾಗಿದೆ. ಪ್ರತೀ ತಿಂಗಳು ಈ ಗೇಮ್ ಅಪ್ಲಿಕೇಶನ್ ಬದಲಾಗುತ್ತಿದ್ದು ಬಳಕೆದಾರರು ತಮ್ಮ ಗೋಲ್ಡ್ ಸದಸ್ಯತ್ವ ಕೊನೆಗೊಂಡ ಒಡನೆ ಇದರ ಸೇವೆಯೂ ಮುಕ್ತಾಯಗೊಳ್ಳುತ್ತದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot