ಶಿಯೋಮಿಯಿಂದ ಮತ್ತೊಂದು ಪವರ್ ಬ್ಯಾಂಕ್ ಲಾಂಚ್..! ಶೀಘ್ರದಲ್ಲಿಯೇ ಭಾರತಕ್ಕೆ..!
ಕೆಲವು ತಿಂಗಳುಗಳ ಹಿಂದೆ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 20W ವೈರ್‌ಲೆಸ್ ಚಾರ್ಜರ್, 10,000 mAh Mi ವೈರ್‌ಲೆಸ್ ಪವರ್ ಬ್ಯಾಂಕ್ ಮತ್ತು 20W ವೈರ್‌ಲೆಸ್ ಕಾರ್ ಚಾರ್ಜರ್ ಸೇರಿ ಹಲವು ಪರಿಕರಗಳನ್ನು ಬಿಡುಗಡೆ ಮಾಡಿತ್ತು. ಈಗ, ಕಂಪನಿ ವೈರ್‌ಲೆಸ್ ಪವರ್ ಬ್ಯಾಂಕ್‌ನ ಯೂಥ್ ಆವೃತ್ತಿಯೊಂದಿಗೆ ಬಂದಿದೆ. ಈ ಹೊಸ ವೈರ್‌ಲೆಸ್ ಪವರ್ ಬ್ಯಾಂಕ್ ಮೂಲ ಆವೃತ್ತಿಯಂತೆಯೇ 2-ವೇ 18W ವೈರಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಪವರ್‌ಬ್ಯಾಂಕ್ ವಿಶೇಷತೆಗಳು
ಹೊಸ ಶಿಯೋಮಿ 10,000 mAh ವೈರ್‌ಲೆಸ್ ಪವರ್ ಬ್ಯಾಂಕ್ ಪಾಲಿಕಾರ್ಬೊನೇಟ್ ಬಾಡಿ ಹೊಂದಿದ್ದು, ಸ್ಟ್ಯಾಂಡರ್ಡ್ ಆವೃತ್ತಿಯಿಂದ ಭಿನ್ನವಾಗಿದೆ. ಅಲ್ಯೂಮಿನಿಯಂ ಮಿಶ್ರಲೋಹದ ಕವಚದೊಂದಿಗೆ ಬರುವ ವೈರ್‌ಲೆಸ್ ಪವರ್ ಬ್ಯಾಂಕ್‌ನ ಯೂಥ್ ಆವೃತ್ತಿ ಹೆಚ್ಚು ಹಗುರ ಮತ್ತು ತುಲನಾತ್ಮಕವಾಗಿ ತೆಳ್ಳಗಿರುತ್ತದೆ. 75 ಗ್ರಾಂ ತೂಕ ಇರುವ ಪವರ್ ಬ್ಯಾಂಕ್ 1.8 ಮಿ.ಮೀ. ದಪ್ಪವಾಗಿದ್ದು, ಹಗುರವಾಗಿರುತ್ತದೆ ಎಂದು ಕಂಪನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ 10,000 mAh ವೈರ್‌ಲೆಸ್ ಪವರ್ ಬ್ಯಾಂಕ್ ಯೂತ್ ಆವೃತ್ತಿಯ ಬೆಲೆ 149 ಯುವಾನ್ (ಅಂದಾಜು 1,500 ರೂ.) ಆಗಿದೆ. 10000 mAh ಶಿಯೋಮಿ ವೈರ್‌ಲೆಸ್ ಪವರ್ ಬ್ಯಾಂಕ್ ಯೂತ್ ಎಡಿಷನ್ ಸೆಪ್ಟೆಂಬರ್ 12 ರಿಂದ ಚೀನಾದಲ್ಲಿ ಖರೀದಿಸಲು ಲಭ್ಯವಿದೆ. ಆದರೆ, ಭಾರತದಲ್ಲಿ ಯಾವಾಗಿನಿಂದ ಲಭ್ಯ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ.

ಶಿಯೋಮಿ ವೈರ್‌ಲೆಸ್ ಪವರ್ ಬ್ಯಾಂಕ್
10,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಶಿಯೋಮಿ ವೈರ್‌ಲೆಸ್ ಪವರ್ ಬ್ಯಾಂಕ್ ನಾಲ್ಕು ಎಲ್ಇಡಿಗಳನ್ನು ಹೊಂದಿದ್ದು, ಬ್ಯಾಟರಿ ಮಟ್ಟವನ್ನು ಸೂಚಿಸುತ್ತವೆ. ಪವರ್ ಬ್ಯಾಂಕ್‌ಗೆ ಅಂತರ್ನಿರ್ಮಿತ ರಕ್ಷಣೆಗಳಿವೆ. ಗಮನಾರ್ಹವಾಗಿ, ಯೂಥ್ ಎಡಿಷನ್ ಪವರ್ ಬ್ಯಾಂಕ್ ಇತರ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುತ್ತದೆ ಮತ್ತು ಪ್ರಮುಖ Qi ವೈರ್‌ಲೆಸ್ ಚಾರ್ಜರ್ ಆಗಿರಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿ, ಐಫೋನ್ ಎಕ್ಸ್‌ಎಸ್, ಮತ್ತು ಶಿಯೋಮಿ Mi 9 ಸೇರಿ ಅನೇಕ ಸಾಧನಗಳನ್ನು ಈ ಪವರ್ ಬ್ಯಾಂಕ್ ಬೆಂಬಲಿಸುತ್ತದೆ.

ಇನ್ನೇನನ್ನು ನಿರೀಕ್ಷಿಸಬಹುದು
ಶಿಯೋಮಿ ಮುಂದಿನ ವಾರ ಭಾರತದಲ್ಲಿ 'ಸ್ಮಾರ್ಟ್ ಲಿವಿಂಗ್ 2020' ಕಾರ್ಯಕ್ರಮ ಆಯೋಜಿಸಿದೆ. ಈ ಸಮಾರಂಭದಲ್ಲಿ 65 ಇಂಚಿನ 4ಕೆ Mi ಟಿವಿಯನ್ನು ದೇಶದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಸಮಾರಂಭದಲ್ಲಿ Mi ಬ್ಯಾಂಡ್ 4 ಅನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಖಚಿತಪಡಿಸಿದ್ದು, ವೈರ್‌ಲೆಸ್ ಪವರ್ ಬ್ಯಾಂಕ್ ಯೂತ್ ಎಡಿಷನ್‌ನ್ನು ಕೂಡ ಭಾರತದಲ್ಲಿಯೂ ಬಿಡುಗಡೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.


Click it and Unblock the Notifications








