Xiaomi 12 Pro Price Cut : ಶಿಯೋಮಿ 12 ಪ್ರೊ 5G ಖರೀದಿಸುವವರಿಗೆ ಬಿಗ್ ಸಪ್ರೈಸ್!.ಬೆಲೆಯಲ್ಲಿ ಬಾರಿ ಇಳಿಕೆ!
ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತದಲ್ಲಿ ಶಿಯೋಮಿ 13 ಪ್ರೊ 5G ಸ್ಮಾರ್ಟ್‌ಫೋನ್ ಲಭ್ಯತೆ ವಿವರ ಪ್ರಕಟಿಸಿದ ಸಂದರ್ಭದಲ್ಲಿಯೇ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬಿಗ್ ಸಪ್ರೈಸ್ ನೀಡಿದೆ. ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತಗೊಳಿಸುವ ಮೂಲಕ ಭರ್ಜರಿ ಆಫರ್ ನೀಡಿದೆ.
ಹೌದು, ಶಿಯೋಮಿ ಸಂಸ್ಥೆ ತನ್ನ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತಗೊಳಿಸಿದೆ. ಹೆಚ್ಚು ಕಡಿಮೆ 10,000ರೂ, ವರೆಗೆ ಬೆಲೆ ಕಡಿತ ಮಾಡಿರುವುದಾಗಿ ಘೋಷಣೆ ಮಾಡಿದೆ. ಹಾಗಾದ್ರೆ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಮೇಲೆ ಏನೆಲ್ಲಾ ಆಫರ್ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ 12 ಪ್ರೊ 5G ಬೆಲೆಯಲ್ಲಿ ಭಾರಿ ಇಳಿಕೆ!
ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ. ಈ ಮೂಲಕ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಖರೀದಿಸಬೇಕಾದ್ರೆ ಬಿಗ್ ಸಪ್ರೈಸ್ ಸಿಗಲಿದೆ. ಯಾಕಂದ್ರೆ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಮೇಲೆ 10,000ರೂ. ವರೆಗೆ ರಿಯಾಯಿತಿ ದೊರೆಯಲಿದೆ. ಅದರಂತೆ HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 3,000ರೂ.ವರೆಗೆ ರಿಯಾಯಿತಿ ಸಿಗಲಿದೆ. ಇದರಿಂದ 8GB ರೂಪಾಂತರದ ಸ್ಮಾರ್ಟ್‌ಫೋನ್ ನಿಮಗೆ ಕೇವಲ 49,999ರೂ.ಗಳಿಗೆ ದೊರೆಯಲಿದೆ.
ಇದರೊಂದಿಗೆ ಶಿಯೋಮಿ ಸ್ಮಾರ್ಟ್‌ಫೋನ್ ಖರೀದಿಸುವ ಶಿಯೋಮಿ ಅಲ್ಲದ ಡಿವೈಸ್ ಬಳಕೆದಾರರಿಗೆ 3,000ರೂ. ವರಗೆ(ಡಿವೈಸ್‌ನ ಗುಣಮಟ್ಟದ ಆಧಾರದಲ್ಲಿ) ಎಕ್ಸ್‌ಚೇಂಜ್ ಆಫರ್ ದೊರೆಯಲಿದೆ. ಅಲ್ಲದೆ ನಿಮ್ಮ ಹಳೆಯ ಶಿಯೋಮಿ ಡಿವೈಸ್ ಮೇಲೆ(ಗುಣಮಟ್ಟದ ಆಧಾರದ ಮೇಲೆ) 5,000ರೂ. ಹೆಚ್ಚುವರಿ ಎಕ್ಸ್‌ಚೇಂಜ್ ಬೋನಸ್ ದೊರೆಯಲಿದೆ. ಇದರಿಂದ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ನ 8GB ರೂಪಾಂತರದ ಆಯ್ಕೆಯನ್ನು ಕೇವಲ 47,999ರೂ.ಗಳಿಗೆ ಖರೀದಿಸಬಹುದಾಗಿದೆ.

ಶಿಯೋಮಿ 12 ಪ್ರೊ 5G ವಿಶೇಷತೆ ಹೇಗಿದೆ?
ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ 1,440 x 3,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.73 ಇಂಚಿನ WQHD+ Samsung E5 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ.
ಶಿಯೋಮಿ 12 ಪ್ರೊ 5G ಪ್ರೊಸೆಸರ್ ಯಾವುದು?
ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM + 256GB ಹಾಗೂ 12GB RAM + 256GB ಇಂಟರ್ ಸ್ಟೋರೇಜ್ ಹೊಂದಿದೆ.

ಶಿಯೋಮಿ 12 ಪ್ರೊ 5G ಕ್ಯಾಮೆರಾ ಸೆಟ್‌ಅಪ್ ಏನಿದೆ?
ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX707 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪೋರ್ಟ್ರೇಟ್ ಲೆನ್ಸ್ ಮತ್ತು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಶಿಯೋಮಿ 12 ಪ್ರೊ 5G ಬ್ಯಾಟರಿ ಮತ್ತು ಇತರೆ ಫೀಚರ್ಸ್
ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ 4,600 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಕೂಡ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6E, ಬ್ಲೂಟೂತ್ v5.2, NFC ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್ ಬ್ಲೂ, ಬ್ಲ್ಯಾಕ್ ಹಾಗೂ ಓಪೆರಾ ಮಾವೆ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








