ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ! WQHD+ E5 ಡಿಸ್‌ಪ್ಲೇ ವಿಶೇಷ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಶಿಯೋಮಿ ಕಂಪೆನಿ ಕೂಡ ಸೇರಿದೆ. ಶಿಯೋಮಿ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.72 ಇಂಚಿನ WQHD+ E5 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ಹೊಸ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಶಿಯೋಮಿ ಹೈಪರ್ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ 6.72 ಇಂಚಿನ WQHD+ E5 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,440x3,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 1Hz ಮತ್ತು 120Hz ನಡುವಿನ ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು?
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಅನ್ನು MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ.

ಕ್ಯಾಮೆರಾ ವಿಶೇಷ
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆತಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ 24fps ಫ್ರೇಮ್ ರೇಟ್‌ನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಬ್ಯಾಟರಿ ಮತ್ತು ಇತರೆ
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ 4,600mAh ಲಿ-ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಇದು 120W ಶಿಯೋಮಿ ಹೈಪರ್ ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕ್ವಿಕ್ ಚಾರ್ಜ್ 4, ಕ್ವಿಕ್ ಚಾರ್ಜ್ 3+ ಮತ್ತು ಪವರ್ ಡೆಲಿವರಿ 3.0 ಚಾರ್ಜಿಂಗ್ ಮಾನದಂಡಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಇದು 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS/ NavIC, ಇನ್ಫ್ರಾರೆಡ್ (IR) ಬ್ಲಾಸ್ಟರ್, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 8GB RAM ಮತ್ತು 256GB ಮಾದರಿಗೆ 62,999ರೂ. ಬೆಲೆ ಹೊಂದಿದೆ. ಹಾಗೆಯೇ 12GB RAM ಮತ್ತು 256GB ರೂಪಾಂತರದ ಆಯ್ಕೆಗೆ 66,999ರೂ. ಬೆಲೆ ಪಡೆದಿದೆ. ಇನ್ನು ಈ ಫೋನ್ ಕೌಚರ್ ಬ್ಲೂ, ನಾಯ್ರ್ ಬ್ಲಾಕ್ ಮತ್ತು ಒಪೆರಾ ಮೌವ್ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಇದು ಇದೇ ಮೇ 2 ರಂದು ಮಧ್ಯಾಹ್ನ 12 ರಿಂದ ಮಾರಾಟವಾಗಲಿದೆ.


Click it and Unblock the Notifications








