Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಡಲು ಶಿಯೋಮಿ 14 ತಯಾರಿ! ಹೊಸ ವರ್ಷದಲ್ಲಿ ಅಬ್ಬರಿಸೋದು ಗ್ಯಾರಂಟಿ!

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವ ಶಿಯೋಮಿ 14 ಸ್ಮಾರ್ಟ್‌ಫೋನ್‌ ಭಾರತಕ್ಕೆ ಕಾಲಿಡಲು ತಯಾರಿ ನಡೆಸಿದೆ. ಜಾಗತಿಕ ಮಾರುಕಟ್ಟೆ ಸೇರಿದಂತೆ ಭಾರತದಲ್ಲಿಯೂ ಅನಾವರಣಗೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದು, MWC 2024 ರ ಸಮಯದಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಈ ಮೂಲಕ ಮುಂದಿನ ವರ್ಷ ಶಿಯೋಮಿ 14 ಭಾರತದಲ್ಲಿ ಅಬ್ಬರಿಸುವ ಸೂಚನೆ ಸಿಕ್ಕಿದೆ.

ಹೌದು, ಶಿಯೋಮಿ 14 ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡುವ ಕಾಲ ಸನ್ನಿಹಿತವಾಗಿದೆ. ಮುಂಬರುವ MWC 2024 ಈವೆಂಟ್ ನಲ್ಲಿ ಈ ಫೋನ್‌ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಈವೆಂಟ್‌ 2024ರ ಫೆಬ್ರವರಿ 26 ರಿಂದ ಫೆಬ್ರವರಿ 29 ರವರೆಗೆ ನಡೆಯುವ ಸಾಧ್ಯತೆಯಿದ್ದು, ಇದೇ ಸಮಯದಲ್ಲಿ ಫೋನ್‌ ಬಿಡುಗಡೆ ಆಗಲಿದೆ. ಹಾಗಾದ್ರೆ ಶಿಯೋಮಿ 14 ಭಾರತದಲ್ಲಿ ಯಾವ ಫೀಚರ್ಸ್‌ಗಳೊಂದಿಗೆ ಎಂಟ್ರಿ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಡಲು ಶಿಯೋಮಿ 14 ತಯಾರಿ!ಹೊಸ ವರ್ಷಕ್ಕೆ ಅಬ್ಬರಿಸೋದು ಗ್ಯಾರಂಟಿ

ಶಿಯೋಮಿ 14 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಶಿಯೋಮಿ 14 ಸ್ಮಾರ್ಟ್‌ಫೋನ್‌ 6.36 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,200x2,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 460ppi ಪಿಕ್ಸೆಲ್ ಸಾಂದ್ರತೆ ಮತ್ತು 1Hz ನಿಂದ 120Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ರೇಟ್‌ ಹೊಂದಿದೆ.

ಶಿಯೋಮಿ 14 ಪ್ರೊಸೆಸರ್‌ ಯಾವುದು?
ಶಿಯೋಮಿ 14 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು Android 14 ಅನ್ನು ಬಾಕ್ಸ್‌ನ ಹೊರಗೆ HyperOS ಸ್ಕಿನ್‌ನೊಂದಿಗೆ ರನ್ ಮಾಡುತ್ತದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಲಿದೆ. ಇದರಲ್ಲಿ ಮೆಮೊರಿ ಕಾರ್ಡ್‌ ಬಳಕೆಗೆ ಅವಕಾಶ ನೀಡಿರುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಭಾರತಕ್ಕೆ ಎಂಟ್ರಿ ಕೊಡಲು ಶಿಯೋಮಿ 14 ತಯಾರಿ!ಹೊಸ ವರ್ಷಕ್ಕೆ ಅಬ್ಬರಿಸೋದು ಗ್ಯಾರಂಟಿ

ಶಿಯೋಮಿ 14 ಕ್ಯಾಮೆರಾ ಸೆಟಪ್‌ ಏನಿದೆ?
ಶಿಯೋಮಿ 14 ಸ್ಮಾರ್ಟ್‌‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾವೈಡ್ ಲೆನ್ಸ್, ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಶಿಯೋಮಿ 14 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಶಿಯೋಮಿ 14 ಸ್ಮಾರ್ಟ್‌ಫೋನ್‌ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಚಾರ್ಜಿಂಗ್ ಬೆಂಬಲಿಸಲಿದೆ. ಇದು 50W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, WiFi 7, ಬ್ಲೂಟೂತ್ 5.3, GPS, NFC, USB-C ಪೋರ್ಟ್, ಬ್ಲೂಟೂತ್ 5.4, ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಭಾರತಕ್ಕೆ ಎಂಟ್ರಿ ಕೊಡಲು ಶಿಯೋಮಿ 14 ತಯಾರಿ!ಹೊಸ ವರ್ಷಕ್ಕೆ ಅಬ್ಬರಿಸೋದು ಗ್ಯಾರಂಟಿ

ಶಿಯೋಮಿ 14 ಬೆಲೆ ಮತ್ತು ಲಭ್ಯತೆ
ಶಿಯೋಮಿ 14 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಇದರ ಬೆಲೆ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಇದರ ಫೀಚರ್ಸ್‌ಗಳನ್ನು ಗಮನಿಸಿದರೆ 50,000ರೂ ಬೆಲೆ ವಿಭಾಗದಲ್ಲಿ ಬರುವ ನಿರೀಕ್ಷೆಯಿದೆ.

ಇನ್ನು ಚೀನಾದಲ್ಲಿ ಶಿಯೋಮಿ 14 ಸರಣಿಯಲ್ಲಿ ಪ್ರೊ ರೂಪಾಂತರವನ್ನು ಕೂಡ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ 6.73 ಇಂಚಿನ 2.5D LTPO ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,440x3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲವನ್ನು ಹೊಂದಿದೆ. ಇದು 4nm ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ.

Best Mobiles in India

English summary
Xiaomi 14 Tipped to Launch in India Market at MWC 2024: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+