ಭಾರತಕ್ಕೆ ಎಂಟ್ರಿ ಕೊಟ್ಟ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್: ಕ್ವಾಡ್ ರಿಯರ್ ಕ್ಯಾಮೆರಾ ವಿಶೇಷ
ಬಹು ನಿರೀಕ್ಷಿತ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಹೌದು, ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಗ್ರ್ಯಾಂಡ್ ಎಂಟ್ರಿ ನೀಡಿದೆ. ಎಂಟ್ರಿಯಲ್ಲಿಯೇ ಭರ್ಜರಿ ಸೌಂಡ್ ಮಾಡುತ್ತಿರುವ ಈ ಫೋನ್ ವಿಶೇಷ ಕ್ಯಾಮೆರಾ ವಿನ್ಯಾಸದಿಂದ ಗಮನಸೆಳೆದಿದೆ. ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್ ಆಗಿ ಗುರುತಿಸಿಕೊಳ್ಳುವ ಸೂಚನೆಯನ್ನು ನೀಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿನ ಕ್ಯಾಮೆರಾ ಡಿಸೈನ್ ಹೇಗಿದೆ? ಇದರ ಫೀಚರ್ಸ್ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Xiaomi 14 ಅಲ್ಟ್ರಾ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Xiaomi 14 Ultra ಸ್ಮಾರ್ಟ್‌ಫೋನ್ 6.73 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು LTPO AMOLED ಮೈಕ್ರೋ-ಕರ್ವ್ ಡಿಸ್‌ಪ್ಲೇ ಆಗಿದೆ. ಇನ್ನು ಡಿಸ್‌ಪ್ಲೇಯು 3,200 x 1,440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದಲ್ಲದೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದ್ದು, 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ.
Xiaomi 14 ಅಲ್ಟ್ರಾ ಪ್ರೊಸೆಸರ್ ಯಾವುದು?
Xiaomi 14 ಅಲ್ಟ್ರಾ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14-ಆಧಾರಿತ ಹೈಪರ್ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ.
Xiaomi 14 ಅಲ್ಟ್ರಾ ಕ್ಯಾಮೆರಾ ಸೆಟಪ್ ಏನಿದೆ?
Xiaomi 14 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ LYT900 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX858 ಸೆನ್ಸಾರ್ 3.2x ಆಪ್ಟಿಕಲ್ ಜೂಮ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ 5x ಆಪ್ಟಿಕಲ್ ಜೂಮ್ ಹೊಂದಿದೆ. ಇನ್ನು ನಾಲ್ಕನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Xiaomi 14 ಅಲ್ಟ್ರಾ ಬ್ಯಾಟರಿ ಮತ್ತು ಇತರೆ ಸೌಲಭ್ಯ
Xiaomi 14 ಅಲ್ಟ್ರಾ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೈರ್ಡ್, 80W ವಾಯರ್‌ಲೆಸ್ ಮತ್ತು 10W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ, ಬ್ಲೂಟೂತ್ 5.4, NFC, GPS, GLONASS, ಗೆಲಿಲಿಯೋ, BeiDou, NavIC, ಮತ್ತು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತದೆ. ಇದು ಧೂಳು ಮತ್ತು ಬೆವರಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಸಹ ಹೊಂದಿದೆ.

ಭಾರತದಲ್ಲಿ Xiaomi 14 Ultra ಬೆಲೆ ಮತ್ತು ಲಭ್ಯತೆ
Xiaomi 14 Ultra ಸ್ಮಾರ್ಟ್‌ಫೋನ್ 16GB RAM ಮತ್ತು 512GB ರೂಪಾಂತರದ ಆಯ್ಕೆಗೆ 99,999ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಶಿಯೋಮಿ ಕಂಪನಿಯು ಈ ಸ್ಮಾರ್ಟ್‌ಫೋನ್‌ನೊಂದಿಗೆ ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಈ ಫೋನ್ ಏಪ್ರಿಲ್ 12 ರಂದು ಮಧ್ಯಾಹ್ನ 12 ಗಂಟೆಯ ನಂತರ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








