Home
ಸುದ್ದಿಜಾಲ

ಭಾರತದಲ್ಲಿ ಶಿಯೋಮಿ 14 ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ಎಷ್ಟಿದೆ

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ Xiaomi 14 ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಜೊತೆಗೆ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಹೌದು, Xiaomi 14 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮಾಡ್ಯೂಲ್‌ ದೊಡ್ಡದಾಗಿದೆ. ಇದು ಡಾಲ್ಬಿ ವಿಷನ್, ಡಿಸಿ ಡಿಮ್ಮಿಂಗ್, ಮತ್ತು 3000 ನಿಟ್ಸ್ ಲೊಕಲ್‌ ಪೀಕ್ ಬ್ರೈಟ್‌ನೆಸ್ ಮಟ್ಟವನ್ನು ಬೆಂಬಲಿಸುತ್ತದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಶಿಯೋಮಿ 14 ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ಎಷ್ಟಿದೆ

Xiaomi 14 ಡಿಸ್‌ಪ್ಲೇ ರಚನೆ
Xiaomi 14 ಸ್ಮಾರ್ಟ್‌ಫೋನ್‌ 6.3 ಇಂಚಿನ ಕೇಂದ್ರಿತ ಪಂಚ್-ಹೋಲ್ ಫ್ಲಾಟ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2670 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಜೊತೆಗೆ ಡಿಸ್‌ಪ್ಲೇಯು 460 PPI ಮತ್ತು 1-120Hz ರಿಫ್ರೆಶ್ ರೇಟ್ (LTPO) ರೆಸಲ್ಯೂಶನ್ ಹೊಂದಿದೆ. ಇದು ಡಾಲ್ಬಿ ವಿಷನ್, ಡಿಸಿ ಡಿಮ್ಮಿಂಗ್, ಮತ್ತು 3000 ನಿಟ್ಸ್ ಲೋಕಲ್‌ ಪೀಕ್ ಬ್ರೈಟ್‌ನೆಸ್ ಲೆವೆಲ್‌ ಅನ್ನು ಬೆಂಬಲಿಸಲಿದೆ.

Xiaomi 14 ಪ್ರೊಸೆಸರ್‌ ಯಾವುದು?
Xiaomi 14 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದನ್ನು ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ.

ಭಾರತದಲ್ಲಿ ಶಿಯೋಮಿ 14 ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ಎಷ್ಟಿದೆ

Xiaomi 14 ಕ್ಯಾಮೆರಾ ಸೆಟಪ್‌ ಏನಿದೆ?
Xiaomi 14 ಸ್ಮಾರ್ಟ್‌ಫೋನ್‌ ಲೈಕಾ-ಟ್ಯೂನ್ಡ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ 3.2x ಫ್ಲೋಟಿಂಗ್ ಟೆಲಿಫೋಟೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Xiaomi 14 ಬ್ಯಾಟರಿ ಮತ್ತು ಇತರೆ
Xiaomi 14 ಸ್ಮಾರ್ಟ್‌ಫೋನ್‌ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೈರ್ಡ್, 50W ವಾಯರ್‌ಲೆಸ್ ಮತ್ತು 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಅಟ್ಮಾಸ್-ಬೆಂಬಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಎಕ್ಸ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್ ನಂತಹ ಆಯ್ಕೆಗಳನ್ನು ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ 7, ಬ್ಲೂಟೂತ್ 5.4, GNSS, NFC, ಮತ್ತು USB 3.2 ಅನ್ನು ಬೆಂಬಲಿಸಲಿದೆ.

ಭಾರತದಲ್ಲಿ Xiaomi 14 ಬೆಲೆ ಮತ್ತು ಲಭ್ಯತೆ
Xiaomi 14 ಸ್ಮಾರ್ಟ್‌ಫೋನ್‌ ಭಾರತದಲ್ಲಿ 12GB + 512GB ರೂಪಾಂತರದ ಆಯ್ಕೆಗೆ 69,999ರೂ ಬೆಲೆಯನ್ನು ಹೊಂದಿದೆ. ಇದನ್ನು ಕಪ್ಪು, ಬಿಳಿ ಅಥವಾ ಜೇಡ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಪಡೆಯಬಹುದು. ಈ ಸ್ಮಾರ್ಟ್‌ಫೋನ್‌ ಇದೇ ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವನ್ನು ಪ್ರಾರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಅಮೆಜಾನ್‌, ಮಿ.ಕಾಮ್‌, ಫ್ಲಿಪ್‌ಕಾರ್ಟ್‌, ಶಿಯೋಮಿಯ ಹೋಮ್‌ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Xiaomi 14 with Leica cameras launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+