Xiaomi: ಎರಡಲ್ಲ.. ಮೂರು ಫೋನ್‌ಗಳು! ಬಿಡುಗಡೆ ದಿನಾಂಕ ಘೋಷಣೆ.. 200MP ಕ್ಯಾಮೆರಾ ಖಚಿತ!
ಶಿಯೋಮಿ (Xiaomi) ತನ್ನ ಬಹುನಿರೀಕ್ಷಿತ ಶಿಯೋಮಿ 15 ಸರಣಿ (Xiaomi 15 Series) ಬಿಡುಗಡೆಗೆ ಸಜ್ಜಾಗಿದೆ. ಇದೀಗ, ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಶಿಯೋಮಿ 15 ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತದೆ. ಇವು, ಶಿಯೋಮಿ 15 (Xiaomi 15), ಶಿಯೋಮಿ 15 ಪ್ರೊ (Xiaomi 15 Pro) ಮತ್ತು ಶಿಯೋಮಿ 15 ಅಲ್ಟ್ರಾ (Xiaomi 15 Ultra) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಇದರಲ್ಲಿ ಎರಡು ಫೋನ್‌ಗಳು ಮಾತ್ರ ಈ ತಿಂಗಳು ಲಾಂಚ್ ಆಗಲಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಕಂಪನಿಯು ಈ ಸರಣಿಯ ಮೂರನೇ ಫೋನ್, ಶಿಯೋಮಿ 15 ಅಲ್ಟ್ರಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಕಂಪನಿಯು ಟೀಸರ್ ಹಂಚಿಕೊಳ್ಳುವ ಮೂಲಕ ಈ ಫೋನಿನ ಬಿಡುಗಡೆ ದಿನಾಂಕ ಬಹಿರಂಗಪಡಿಸಿದೆ. ಮುಂಬರುವ ಎರಡು ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಇದರೊಂದಿಗೆ 6.36 ಮತ್ತು 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಲಭ್ಯವಿರಲಿದೆ. ಈ ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟಪ್, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಶಿಯೋಮಿ 15 ಸರಣಿ ಬಿಡುಗಡೆ ದಿನಾಂಕ
ಕಂಪನಿಯು ಶಿಯೋಮಿ 15 ಸರಣಿಯನ್ನು ಚೀನಾದಲ್ಲಿ ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಿದೆ. ಅಂದು 7 ಗಂಟೆಗೆ ಸಮಾರಂಭ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಶಿಯೋಮಿ 15 ಸರಣಿಯ ಜೊತೆಗೆ ಆಂಡ್ರಾಯ್ಡ್ 15 (Android 15) ಆಧಾರಿತ HyperOS 2.0 ಅನ್ನು ಪರಿಚಯಿಸಲಾಗುತ್ತದೆ. ಮತ್ತು ಶಿಯೋಮಿ SU7 ಅಲ್ಟ್ರಾ (Xiaomi SU7 Ultra) ಸಹ ಲೋಕಾರ್ಪಣೆಯಾಗಲಿದೆ. ಭಾರತದಲ್ಲಿ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಶಿಯೋಮಿ 15 ಮತ್ತು ಶಿಯೋಮಿ 15 ಪ್ರೊ ಬಿಡುಗಡೆಯಾಗಲಿದೆ.
ಶಿಯೋಮಿ 15 ಮತ್ತು ಶಿಯೋಮಿ 15 ಪ್ರೊ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಶಿಯೋಮಿ 15 ಮೊಬೈಲ್ 6.36 ಇಂಚಿನ 1.5K LTPO ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಡಿಸ್ಪ್ಲೇಯು HDR10+ ಮತ್ತು ಡಾಲ್ಬಿ ವಿಷನ್ (Dolby Vision) ಅನ್ನು ಬೆಂಬಲಿಸುವ ಸಾಧ್ಯತೆಯಿದೆ. ಶಿಯೋಮಿ 15 ಪ್ರೊ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಕರ್ವ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ 15 ಸರಣಿ ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ (Snapdragon 8 Elite SoC) ಹೊಂದಿರಲಿವೆ ಎಂದು ಕಂಪನಿ ಹೇಳಿದೆ. ಇದು 16GB ವರೆಗಿನ LPDDR5x RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ಹೊಂದಿರಲಿದೆ. ಈ ಮೊಬೈಲ್‌ಗಳು ಆಂಡ್ರಾಯ್ಡ್ 15 ಜೊತೆಗೆ HyperOS 2.0 ನಲ್ಲಿ ಕೆಲಸ ನಿರ್ವಹಿಸುತ್ತವೆ.
ಕ್ಯಾಮೆರಾ ಸೆಟಪ್
ಶಿಯೋಮಿ 15 ಮತ್ತು ಶಿಯೋಮಿ 15 ಪ್ರೊ ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿವೆ. ಇದು ಟೆಲಿಫೋಟೋ ಜೂಮ್ ಲೆನ್ಸ್‌ನೊಂದಿಗೆ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 10 ಎಂಎಂ ಪೆರಿಸ್ಕೋಪ್ ಲೆನ್ಸ್ ಕೂಡ ಲಭ್ಯವಿರಲಿದೆ. ಉನ್ನತ ಮಟ್ಟದ ರೂಪಾಂತರಗಳಲ್ಲಿ ನಾಲ್ಕು ಕ್ಯಾಮೆರಾಗಳು ಲಭ್ಯವಿರುತ್ತದೆ. ಇದು 3x ಜೂಮ್ ಸೆಟಪ್‌ನೊಂದಿಗೆ 50 ಮೆಗಾಪಿಕ್ಸೆಲ್ ಜೂಮ್ ಲೆನ್ಸ್ ಸಹ ಹೊಂದಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಇರಲಿದೆ. ಈ ಸ್ಮಾರ್ಟ್‌ಫೋನ್‌ಗಳು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿರಲಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಶಿಯೋಮಿ 15 ಸರಣಿಯ 5500mAh ಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ.
ಇತರೆ ವೈಶಿಷ್ಟ್ಯಗಳು
ಶಿಯೋಮಿ 15 ಸರಣಿಯು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಹೊಂದಿರಲಿದೆ. ಈ ಎಲ್ಲಾ ವೈಶಿಷ್ಟ್ಯಗಳು ಶಿಯೋಮಿ 14 ಸರಣಿಯನ್ನು (Xiaomi 14) ಹೋಲುತ್ತದೆ. ಕಂಪನಿಯು, ಕೆಲವು ಬದಲಾವಣೆಗಳೊಂದಿಗೆ ಶಿಯೋಮಿ 15 ಸರಣಿಯನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








