ನಾಳೆ Xiaomi 15 Ultra ಲಾಂಚ್; 200MP ಕ್ಯಾಮೆರಾ.. 6000mAh ಬ್ಯಾಟರಿ.. ಬೆಲೆ ಎಷ್ಟು ಗೊತ್ತಾ?
ಶಿಯೋಮಿ (Xiaomi) ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು ಕಳೆದ ವರ್ಷ ತನ್ನ Xiaomi 15 ಮತ್ತು Xiaomi 15 Pro ಫೋನನ್ನು ಬಿಡುಗಡೆ ಮಾಡಿತ್ತು. ಈಗಾಗಲೇ ಎರಡೂ ಫೋನ್‌ಗಳು ಗ್ರಾಹಕರ ಮನಸ್ಸು ಗೆದ್ದಿವೆ. ಇದೀಗ, ಕಂಪನಿಯು ಈ ಸರಣಿಯ ಅಲ್ಟ್ರಾ ಮಾದರಿಯ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದೇ ಫೆಬ್ರವರಿ 27 ರಂದು ನೂತನ ಶಿಯೋಮಿ 15 ಅಲ್ಟ್ರಾ (Xiaomi 15 Ultra) ಬಿಡುಗಡೆಯಾಗಲಿದೆ. ಇದರ ಜೊತೆಗೆ Xiaomi SUV7 ಅಲ್ಟ್ರಾ ಎಲೆಕ್ಟ್ರಿಕ್ ಕಾರು ಕೂಡ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಶಿಯೋಮಿ 15 ಅಲ್ಟ್ರಾ 200MP ಕ್ಯಾಮೆರಾ ಹೊಂದಿರಲಿದೆ. ಜೊತೆಗೆ 50MP + 50MP + 50MP ಕ್ಯಾಮೆರಾಗಳು ಇರುತ್ತವೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.8 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಹಾಗೆಯೇ 32MP ಸೆಲ್ಫಿ ಕ್ಯಾಮೆರಾ, 6000mAh ದೊಡ್ಡ ಬ್ಯಾಟರಿ, 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಶಿಯೋಮಿ 15 ಅಲ್ಟ್ರಾ ಬಿಡುಗಡೆ ವಿವರ
ನಾಳೆ (ಫೆಬ್ರವರಿ 27) ಬಹುನಿರೀಕ್ಷಿತ ಶಿಯೋಮಿ 15 ಅಲ್ಟ್ರಾ ಮೊಬೈಲ್ ಅನಾವರಣಗೊಳ್ಳಲಿದೆ. ಈ ಮೊಬೈಲ್ ಮೊದಲು ಚೀನಾದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಳಿಕ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2025) ವೇದಿಕೆಯಿಂದ ಇತರೆ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಶಿಯೋಮಿ 15 ಅಲ್ಟ್ರಾ ಫೋನ್ ಮಾರ್ಚ್ 27 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಶಿಯೋಮಿ 15 ಅಲ್ಟ್ರಾ ಜೊತೆಗೆ, ಕಂಪನಿಯು ನಾಳೆ ತನ್ನ ಶಿಯೋಮಿ SUV7 ಅಲ್ಟ್ರಾ ಎಲೆಕ್ಟ್ರಿಕ್ ಕಾರನ್ನು ಸಹ ರಿಲೀಸ್ ಮಾಡಲಿದೆ.
ಶಿಯೋಮಿ 15 ಅಲ್ಟ್ರಾ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ 6.8 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. ಈ ಡಿಸ್ಪ್ಲೇಯು 2K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು ಅಮೋಲೆಡ್ ಪ್ಯಾನೆಲ್‌ನಲ್ಲಿ ಮಾಡಿದ LTPO ಡಿಸ್ಪ್ಲೇ ಆಗಿದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಫೋನ್ ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಇರುತ್ತದೆ. ಗೆ ಬೆಂಬಲವನ್ನು ಸಹ ಹೊಂದಿರುತ್ತದೆ.
ಪ್ರೊಸೆಸರ್ ಯಾವುದು?
ಶಿಯೋಮಿ 15 ಅಲ್ಟ್ರಾ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಇದು ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್, ಗ್ರಾಫಿಕ್ಸ್‌ಗಾಗಿ ಅಡ್ರಿನೊ 830 ಜಿಪಿಯು ಸಹ ಹೊಂದಿರಲಿದೆ.
ಅದ್ಭುತ ಕ್ಯಾಮೆರಾ ಸೆಟಪ್
ಶಿಯೋಮಿ 15 ಅಲ್ಟ್ರಾ ಫೋನಿನ ಕ್ಯಾಮೆರಾ ಸೆಟಪ್ ಅದ್ಭುತವಾಗಿರುತ್ತದೆ. ಈ ಫೋನಿನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಕಾಣಬಹುದು. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್, 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹೊಂದಿರುತ್ತದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಶಿಯೋಮಿ 15 ಅಲ್ಟ್ರಾ ಮೊಬೈಲ್ 6000mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಜೊತೆಗೆ 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಲಬ್ಯವಿರುತ್ತದೆ. ಈ ಫೋನ್ ಯುಎಸ್‌ಬಿ ಟೈಪ್ ಸಿ 3.2 ಪೋರ್ಟ್ ಸಹ ಹೊಂದಿರುತ್ತದೆ.
ಇತರೆ ವೈಶಿಷ್ಟ್ಯಗಳು
ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್ ಪಡೆದಿದೆ. ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳೊಂದಿಗೆ ಬರಲಿದೆ.


Click it and Unblock the Notifications








