Home
ಸುದ್ದಿಜಾಲ

Xiaomi 15: ನಾಳೆಯಿಂದ ಪ್ರೀ-ಬುಕಿಂಗ್; 5000 ರಿಯಾಯಿತಿ.. ಬೆಲೆ ಎಷ್ಟು? ವಿಶೇಷತೆಗಳೇನು ಗೊತ್ತಾ?

ಶಿಯೋಮಿ ಇತ್ತೀಚೆಗೆ ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಶಿಯೋಮಿ 15 (Xiaomi 15) ಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ. ಹೌದು, ಶಿಯೋಮಿ 15 (Xiaomi 15), ಶಿಯೋಮಿ 15 ಅಲ್ಟ್ರಾ (Xiaomi 15 Ultra) ಫೋನ್‌ಗಳು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಪೈಕಿ ಶಿಯೋಮಿ 15 ಮೊಬೈಲ್ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ, ಈ ಮೊಬೈಲ್ ನಾಳೆಯಿಂದ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಶಿಯೋಮಿ 15 ಫೋನ್ ಒಂದೇ ಸ್ಟೊರೇಜ್ ಆಯ್ಕೆಯಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನ್ 50MP + 50MP + 32MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.36 ಇಂಚಿನ ಡಿಸ್ಪ್ಲೇ ಇದೆ. ಹಾಗೆಯೇ 5240mAh ಬ್ಯಾಟರಿ, 90W ವೈರ್ಡ್ ಹೈಪರ್‌ಚಾರ್ಜ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಜ್ಜಾಗಿದೆ.

Xiaomi 15: ನಾಳೆಯಿಂದ ಪ್ರೀ-ಬುಕಿಂಗ್; 5000 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಶಿಯೋಮಿ 15 ಬೆಲೆ ಮತ್ತು ಮಾರಾಟ ವಿವರಗಳು

ಶಿಯೋಮಿ 15 ಫೋನಿನ 12GB RAM + 512GB ಸ್ಟೊರೇಜ್ ರೂಪಾಂತರವನ್ನು 64,999 ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಮೊಬೈಲ್ ಕಪ್ಪು, ಬಿಳಿ ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ನಾಳೆಯಿಂದ (ಮಾರ್ಚ್ 19 ರಂದು ಸಂಜೆ 5 ಗಂಟೆಯಿಂದ) ಏಪ್ರಿಲ್ 2 ರವರೆಗೆ ಕಂಪನಿಯ ಅಧಿಕೃತ ವೆಬ್‌ಸೈಟ್ (Mi.com), ಅಮೆಜಾನ್ ಮತ್ತು ಶಿಯೋಮಿ ಚಿಲ್ಲರೆ ಅಂಗಡಿಗಳಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಪಾವತಿ ಮೇಲೆ 5000 ರೂ.ಗಳ ರಿಯಾಯಿತಿ ಘೋಷಿಸಿದೆ. ಜೊತೆಗೆ 5,999 ರೂ. ಮೌಲ್ಯದ ಶಿಯೋಮಿ ಕೇರ್ ಪ್ಲಾನ್ ಪಡೆಯಬಹುದು.

ಶಿಯೋಮಿ 15 ವೈಶಿಷ್ಟ್ಯಗಳು

ಶಿಯೋಮಿ 15 ಸ್ಮಾರ್ಟ್‌ಫೋನ್ 6.36 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 2,670 × 1,200 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಶಿಯೋಮಿ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಶಿಯೋಮಿ ಹೈಪರ್‌ಓಎಸ್ 2 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 830 ಜಿಪಿಯು ಹೊಂದಿದೆ.

Xiaomi 15: ನಾಳೆಯಿಂದ ಪ್ರೀ-ಬುಕಿಂಗ್; 5000 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಶಿಯೋಮಿ 15 ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಹೈಪರ್ OIS, LED ಫ್ಲ್ಯಾಶ್, ಲೈಕಾ ಸಮ್ಮಿಲಕ್ಸ್ ಲೆನ್ಸ್‌ನೊಂದಿಗೆ ಬರುತ್ತದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಇನ್ಫಿನಿಟಿ ಲೈಕಾ ಟೆಲಿಫೋಟೋ ಸೆನ್ಸರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 12GB RAM + 512GB ಸ್ಟೊರೇಜ್ ಆಯ್ಕೆ ಒಳಗೊಂಡಿದೆ.

ಶಿಯೋಮಿ 15 ಸ್ಮಾರ್ಟ್‌ಫೋನ್ 5,240mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್, ಮ್ಯಾಗ್ನೆಟಿಕ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಒಳಗೊಂಡಿದೆ. ಈ ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್ಫ್ರಾರೆಡ್ ಸೆನ್ಸರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Xiaomi 15 will go on pre-order on March 19 and will go on sale April 2: check price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+