Xiaomi 16 ವಿನ್ಯಾಸ ಮತ್ತು ಫೀಚರ್ಸ್ ಸೋರಿಕೆ: ಇಲ್ಲಿಯವರೆಗಿನ ಎಲ್ಲಾ ಮಾಹಿತಿ!
ವಿಶ್ವ ಮೊಬೈಲ್ ಮಾರುಕಟ್ಟೆಗೆ ಮುಂದಿನ ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಬರಲಿರುವ Xiaomi 16 ಸರಣಿಯು ಬಿಡುಗಡೆಗೆ ಮುನ್ನವೇ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಸರಣಿಯು ಇನ್ನೂ ಅಧಿಕೃತವಾಗಿ ಅನಾವರಣಗೊಳ್ಳದಿದ್ದರೂ, ಹಲವಾರು ವದಂತಿಗಳು ಮತ್ತು ಸೋರಿಕೆಗಳು ಇದರ ಬಗ್ಗೆ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸುತ್ತಿವೆ. ವಿಶೇಷವಾಗಿ, Xiaomi 16 ಸರಣಿಯ ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯಗಳ ಕುರಿತು ಹೊಸ ಮಾಹಿತಿಗಳನ್ನು ಟಿಪ್‌ಸ್ಟರ್‌ಗಳು ಈಗಾಗಲೇ ಹಂಚಿಕೊಂಡಿದ್ದಾರೆ. ಹಾಗಾದರೆ, ಮುಂಬರುವ Xiaomi 16 ಸರಣಿಯ ಕುರಿತು ಈಗಾಗಲೇ ಹೊರಬಿದ್ದಿರುವ ಪ್ರಮುಖ ಮಾಹಿತಿಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಇತ್ತೀಚಿಗಷ್ಟೆ ಸೋರಿಕೆ ಮಾಡಿರುವ ಪ್ರಕಾರ, ಮುಂಬರುವ Xiaomi 16 ಫ್ಲ್ಯಾಗ್‌ಶಿಪ್ ಸಾಧನವು ಇನ್ನೂ ಘೋಷಣೆಯಾಗದ Snapdragon 8 Elite 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಈ ಶಕ್ತಿಶಾಲಿ ಚಿಪ್‌ಸೆಟ್ ಅನ್ನು ಕ್ವಾಲ್‌ಕಾಮ್ ತನ್ನ ಮುಂದಿನ ಸ್ನಾಪ್‌ಡ್ರಾಗನ್ ಶೃಂಗಸಭೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. Xiaomi 16 Pro ಕೂಡ ಇದೇ ಪ್ರೊಸೆಸರ್ ಅನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, Xiaomi 16s Pro ಮತ್ತು 16 Ultra ಮಾದರಿಗಳು ಆಂತರಿಕ XRING O1 ಚಿಪ್‌ನ್ನು ಬಳಸಬಹುದು ಎಂಬ ವದಂತಿಗಳು ಹರಿದಾಡುತ್ತಿವೆ.ಸಾಫ್ಟ್‌ವೇರ್ ವಿಷಯದಲ್ಲಿ, Xiaomi 16 ಸ್ಮಾರ್ಟ್‌ಫೋನ್ ಬಾಕ್ಸ್‌ನ ಹೊರಗೆ Android 16 ಅನ್ನು ಕಾರ್ಯನಿರ್ವಹಿಸುತ್ತೆ ಎಂದು ವರದಿಯಾಗಿದೆ, ಇದು Xiaomi ಯ ಮುಂಬರುವ HyperOS 3.0 ನೊಂದಿಗೆ ಲೇಯರ್ ಆಗಿರುತ್ತದೆ. ಇತ್ತೀಚೆಗೆ ಸೋರಿಕೆಯಾದ ರೆಂಡರ್ ಚಿತ್ರಗಳು, Xiaomi 16 ಡ್ಯುಯಲ್-ಟೋನ್ ಬ್ಯಾಕ್ ವಿನ್ಯಾಸವನ್ನು ಹೊಂದಿರುವುದನ್ನು ತೋರಿಸುತ್ತವೆ, ಇದು ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್‌ಗಾಗಿ ಕಟೌಟ್ ಹೊಂದಿರುವ ಗಾಢವಾದ ವಿಭಾಗವನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ, ಇತ್ತೀಚಿನ ಸೋರಿಕೆಗಳ ಪ್ರಕಾರ, Xiaomi 16 ಸ್ಮಾರ್ಟ್‌ಫೋನ್ 6.3-ಇಂಚಿನ ಫ್ಲಾಟ್ OLED ಪ್ಯಾನೆಲ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ಯಾನೆಲ್ ಎಲ್ಲಾ ನಾಲ್ಕು ಬದಿಗಳಲ್ಲಿ ಅಲ್ಟ್ರಾ-ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದ್ದು, ಉತ್ತಮ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Xiaomi 16 ಒಂದು ಆಕರ್ಷಕ ಟ್ರಿಪಲ್ 50MP ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ 1/1.3-ಇಂಚಿನ ಪ್ರಾಥಮಿಕ ಸೆನ್ಸರ್, ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮ್ಯಾಕ್ರೋ ಸಾಮರ್ಥ್ಯಗಳೊಂದಿಗೆ ಟೆಲಿಫೋಟೋ ಲೆನ್ಸ್ ಸೇರಿವೆ, ಇದು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಛಾಯಾಗ್ರಹಣ ಅನುಭವವನ್ನು ನೀಡುವ ನಿರೀಕ್ಷೆಯಿದೆ.ಬ್ಯಾಟರಿ ಸಾಮರ್ಥ್ಯದ ಬಗ್ಗೆ, ಹೊಸ ಸೋರಿಕೆಗಳು Xiaomi 16, 6,500mAh ಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ. ಈ ಹಿಂದೆ ಬಂದ ವದಂತಿಗಳು 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,800mAh ಬ್ಯಾಟರಿಯ ಬಗ್ಗೆ ಮಾಹಿತಿ ನೀಡಿದ್ದವು. ಈ ದೊಡ್ಡ ಬ್ಯಾಟರಿ ಸಾಮರ್ಥ್ಯವು ಬಳಕೆದಾರರಿಗೆ ದೀರ್ಘಾವಧಿಯ ಬಳಕೆಯನ್ನು ಖಚಿತಪಡಿಸುತ್ತದೆ ಎನ್ನಲಾಗಿದೆ.
Xiaomi 16 ಸರಣಿ ಬಿಡುಗಡೆ ಯಾವಾಗ?
Xiaomi 16 ಫ್ಲ್ಯಾಗ್‌ಶಿಪ್ ಸಾಧನವು ಹೊಂದಿರಲಿದೆ ಎನ್ನಲಾದ Snapdragon 8 Elite 2 ಶಕ್ತಿಶಾಲಿ ಚಿಪ್‌ಸೆಟ್ ಅನ್ನು ಕ್ವಾಲ್‌ಕಾಮ್ ತನ್ನ ಮುಂದಿನ ಸ್ನಾಪ್‌ಡ್ರಾಗನ್ ಶೃಂಗಸಭೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಅಂದರೆ, ಮುಂಬರುವ Xiaomi 16 ಸ್ಮಾರ್ಟ್‌ಫೋನ್ ಈ ವರ್ಷದ ಕೊನೆಯಲ್ಲಿ Xiaomi 16 Pro ಜೊತೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಪ್ರೊ ಮಾದರಿಯು ಚೀನೀ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ. ಇನ್ನು ಕೆಲವು ವರದಿಗಳಂತೆ. Xiaomi 16 Ultra 2026 ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳಿವೆ. ಆದರೆ, ಈ ಎಲ್ಲಾ ಮಾಹಿತಿಗಳನ್ನು ನಾವು ಕೇವಲ ಊಹಾಪೋಹಗಳೆಂದು ಪರಿಗಣಿಸಬೇಕು, ಏಕೆಂದರೆ Xiaomi ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ.


Click it and Unblock the Notifications








