Home
ಸುದ್ದಿಜಾಲ

ಶಿಯೋಮಿ ಸಂಸ್ಥೆಯಿಂದ 27-ಇಂಚಿನ ಗೇಮಿಂಗ್ ಮಾನಿಟರ್ ಬಿಡುಗಡೆ!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಕಂಪೆನಿ ಈಗಾಗಲೇ ಟೆಕ್‌ ವಲಯದಲ್ಲಿ ವೈವಿಧ್ಯಮಯ ಸ್ಮಾರ್ಟ್‌ ಪ್ರಾಡಕ್ಟ್‌ಗಳಿಂದ ಗುರುತಿಸಿಕೊಂಡಿದೆ. ಭಿನ್ನ ಮಾದರಿಯ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿರುವ ಶಿಯೋಮಿ ಸಧ್ಯ ಚೀನಾದಲ್ಲಿ ಕ್ರೌಡ್‌ಫಂಡಿಂಗ್‌ ಪ್ಲಾಟ್‌ಫಾರ್ಮ್‌ ಮೂಲಕ ಹೊಸ ಮಾದರಿಯ ಗೇಮಿಂಗ್‌ ಮಾನಿಟರ್‌ ಅನ್ನು ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ 27 ಇಂಚಿನ ಗೇಮಿಂಗ್ ಮಾನಿಟರ್ ಅನ್ನು ಕಂಪನಿಯ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು 27 ಇಂಚಿನ ಈ ಗೇಮಿಂಗ್‌ ಮಾನಿಟರ್ 165Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಗೇಮಿಂಗ್‌ ಮಾನಿಟರ್‌ TUV ಕಡಿಮೆ ನೀಲಿ ಬೆಳಕಿಗೆ ಸಹ ಬೆಂಬಲವನ್ನು ನೀಡುತ್ತದೆ. ಇದು 1ms IMBC ವೇಗದ ಪ್ರತಿಕ್ರಿಯೆ ಸಮಯವನ್ನು ಹೊಂದಿದೆ. ಇನ್ನು ಶಿಯೋಮಿ 27-ಇಂಚಿನ ಗೇಮಿಂಗ್ ಮಾನಿಟರ್ ಅನ್ನು ಮೇಜಿನ ಮೇಲೆ ಇರಿಸಬಹುದು ಅಥವಾ ಗೋಡೆಯ ಮೇಲೆ ಸಹ ತೂರಿಸಬಹುದು. ಇನ್ನು ಈ ಗೇಮಿಂಗ್‌ ಮಾನಿಟರ್‌ ವಿನ್ಯಾಸ ಹಾಗೂ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ 27-ಇಂಚಿನ ಗೇಮಿಂಗ್ ಮಾನಿಟರ್

ಶಿಯೋಮಿ 27-ಇಂಚಿನ ಗೇಮಿಂಗ್ ಮಾನಿಟರ್

ಇನ್ನು ಶಿಯೋಮಿಯ 27 ಇಂಚಿನ ಗೇಮಿಂಗ್‌ ಮಾನಿಟರ್‌ 1440x2560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 165Hz ಅಲ್ಟ್ರಾ-ಹೈ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. 95% DCI-P3 ಬಣ್ಣದ ಹರವು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ HDR400 ಡೈನಾಮಿಕ್ ಡಿಸ್‌ಪ್ಲೇ ವರ್ಧನೆಯನ್ನು ನೀಡುತ್ತದೆ. ಜೊತೆಗೆ ಉತ್ತಮ ಗೇಮಿಂಗ್ ಅನುಭವಕ್ಕಾಗಿ 1ms IMBC ವೇಗದ ರಿಯಾಕ್ಷನ್‌ ಟೈಂ ಅನ್ನು ನೀಡುತ್ತದೆ.

ಗೇಮಿಂಗ್‌ ಮಾನಿಟರ್

ಇದಲ್ಲದೆ ಈ ಗೇಮಿಂಗ್‌ ಮಾನಿಟರ್ ಒಂದು ಸ್ಟ್ಯಾಂಡ್‌ ಒಳಗೊಂಡ ಬಂಡಲ್ ನೊಂದಿಗೆ ಬರಲಿದೆ. ಇದು ಬಳಕೆದಾರರಿಗೆ ಮಾನಿಟರ್‌ ಅನ್ನು ಮೇಜಿನ ಮೇಲೆ ಇರಿಸಲು ಅಥವಾ ಹಿಂಭಾಗದಲ್ಲಿ ಬ್ರಾಕೆಟ್ ಅನ್ನು ಗೋಡೆಯ ಮೇಲೆ ಫಿಕ್ಸ್‌ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಶಿಯೋಮಿ 27-ಇಂಚಿನ ಗೇಮಿಂಗ್ ಮಾನಿಟರ್ ಅನ್ನು ಬಳಕೆದಾರರ ಅಗತ್ಯಗಳನ್ನು ಆಧರಿಸಿ ವಿವಿಧ ಕೋನಗಳಲ್ಲಿ ಸರಿಸಲು ಸಹಾಯ ಮಾಡಲು ಬ್ರಾಕೆಟ್ ತಿರುಗುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ ಇದು ಅಡಾಪ್ಟಿವ್-ಸಿಂಕ್ ಸಿಂಕ್ರೊನೈಸೇಶನ್ ಟೆಕ್ನಾಲಜಿಯನ್ನು ಹೊಂದಿದೆ ಮತ್ತು ಇದು ದೀರ್ಘಕಾಲದ ಗೇಮಿಂಗ್ ಸೆಷನ್‌ಗಳಲ್ಲಿ ಕಡಿಮೆ ಕಣ್ಣಿನ ಒತ್ತಡಕ್ಕೆ ಟಿಯುವಿ ಕಡಿಮೆ ನೀಲಿ ಬೆಳಕಿಗೆ ಬೆಂಬಲವನ್ನು ನೀಡುತ್ತದೆ.

ಶಿಯೋಮಿ

ಇನ್ನು ಶಿಯೋಮಿ 27-ಇಂಚಿನ ಗೇಮಿಂಗ್ ಮಾನಿಟರ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಂದು ಶ್ರೇಣಿಯನ್ನು ಹೊಂದಿದೆ. USB 3.0 ಪೋರ್ಟ್, ಡಿಸ್‌ಪ್ಲೇ ಪೋರ್ಟ್, HDMI ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸುತ್ತದೆ. ಇನ್ನು ಡಿವೈಸ್‌ ಮೂರು ವರ್ಷಗಳ ಖಾತರಿಯನ್ನು ಹೊಂದಿದೆ. ಇನ್ನು ಶಿಯೋಮಿ 27 ಇಂಚಿನ ಗೇಮಿಂಗ್ ಮಾನಿಟರ್ ಬೆಲೆ ಚೀನಾದಲ್ಲಿ CNY 2,199 (ಸುಮಾರು 23,500 ರೂ.) ಹೊಂದಿದೆ. ಆದಾಗ್ಯೂ, ಮಾನಿಟರ್ CNY 1,899 (ಸುಮಾರು 20,300 ರೂ.) ರಿಯಾಯಿತಿ ದರದಲ್ಲಿ ಕ್ರೌಡ್‌ಫಂಡಿಂಗ್‌ಗೆ ಹೋಗುತ್ತದೆ .

Best Mobiles in India

English summary
Xiaomi 27-inch gaming monitor can be placed on a table or be hung on a wall.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+