Xiaomi: ಭಾರತದಲ್ಲಿ ಹೊಸ ಸೆಕ್ಯುರಿಟಿ ಕ್ಯಾಮೆರಾ ಪರಿಚಯಿಸಿದ ಶಿಯೋಮಿ! ಉಪಯೋಗ ಕೇಳಿದ್ರೆ ಶಾಕ್!
ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲ ವಿವಿಧ ಸ್ಮಾರ್ಟ್ ಡಿವೈಸ್‌ಗಳ ಮೂಲಕ ಸಹ ಸೈ ಎನಿಸಿಕೊಂಡಿದೆ. ಭಾರತದ ಟೆಕ್ ವಲಯದಲ್ಲಿ ಸಾಕಷ್ಟು ಪ್ರಾಬಲ್ಯ ಸಾಧಿಸಿರುವ ಶಿಯೋಮಿ ಸೆಕ್ಯುರಿಟಿ ಕ್ಯಾಮೆರಾ ವಿಭಾಗದಲ್ಲಿಯೂ ಕೂಡ ಮುಂಚೂಣಿಯಲ್ಲಿದೆ. ಇದಕ್ಕೆ ಅನುಗುಣವಾಗಿ ಇದೀಗ ಹೊಸ ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ 2K ಅನ್ನು ಬಿಡುಗಡೆ ಮಾಡಿದೆ.
ಹೌದು, ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ 2K ಭಾರತದಲ್ಲಿ ಬಿಡುಗಡೆ ಆಗಿದೆ. ಇನ್ನು ಈ ಹೋಮ್ ಸೆಕ್ಯುರಿಟಿ ಕ್ಯಾಮೆರಾ 1080p 2i ಮತ್ತು ಹೋಮ್ ಸೆಕ್ಯುರಿಟಿ ಕ್ಯಾಮೆರಾ 2K ಪ್ರೊ ನಡುವೆ ಇರಿಸಲಾಗಿದೆ. ಹಾಗಾದ್ರೆ ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ. ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಫೀಚರ್ಸ್ ಹೇಗಿದೆ?
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ 3MP ಸೆನ್ಸಾರ್ ಅನ್ನು ಹೊಂದಿದೆ. ಇದು ಹೆಚ್ಚಿನ ರೆಸಲ್ಯೂಶನ್ 2K ವೀಡಿಯೊವನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.
ಆಪ್ಟಿಕ್ಸ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಅಪ್‌ಗ್ರೇಡ್ ಮಾಡಿದ 6P ಲೆನ್ಸ್‌ನೊಂದಿಗೆ ಸಜ್ಜುಗೊಂಡಿರುವ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೆ ಹೆಚ್ಚು ವಿವರವಾದ ಚಿತ್ರಗಳಿಗಾಗಿ ಬೆಳಕಿನ ವಕ್ರೀಭವನವನ್ನು ಕಡಿಮೆ ಮಾಡುತ್ತದೆ.
ವ್ಯೂ
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಸಂಪೂರ್ಣ ದೃಷ್ಟಿಕೋನವನ್ನು ನೀಡುವುದರಿಂದ, ಇದು ಸಮಗ್ರವಾದ ತುಣುಕನ್ನು ಸೆರೆಹಿಡಿಯಲು ಸಂಪೂರ್ಣ 360° ಅಡ್ಡ ಮತ್ತು 108° ಲಂಬ ವೀಕ್ಷಣೆಯನ್ನು ಒದಗಿಸುತ್ತದೆ.

ಮೌಂಟಿಂಗ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾವನ್ನು ನಮ್ಯತೆಗಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಪ್ರಮಾಣಿತ ಮತ್ತು ತಲೆಕೆಳಗಾದ ಮೌಂಟಿಂಗ್ ಅನ್ನು ಬೆಂಬಲಿಸಲಿದ್ದು, 180º ಸ್ಕ್ರೀನ್ ತಿರುಗುವಿಕೆಯನ್ನು ಅನುಮತಿಸಲಿದೆ.
ಕ್ವಾಲಿಟಿ
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾವು ಅತ್ಯುತ್ತಮವಾದ ವಿಶ್ಯುಯಲ್ ಕ್ವಾಲಿಟಿಯನ್ನು ನೀಡಲಿದೆ. ಇದು ವೈಡ್ ಡೈನಾಮಿಕ್ ರೇಂಜ್ ಮೋಡ್ ಅನ್ನು ಸಂಯೋಜಿಸುವ ಮೂಲಕ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಲಿದೆ.
ಕನೆಕ್ಟಿವಿಟಿ
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಸ್ಥಿರ ಮತ್ತು ವಿಶ್ವಾಸಾರ್ಹ ಸಂವಹನಕ್ಕಾಗಿ 2.4 GHz ನಲ್ಲಿ Wi-Fi ಕನೆಕ್ಟಿವಿಟಿ ಬೆಬಲಿಸಲಿದೆ.

ಎನ್ಕೋಡಿಂಗ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ H.265 ವೀಡಿಯೊ ಎನ್‌ಕೋಡಿಂಗ್ ಅದೇ ಪಿಕ್ಸೆಲ್ ದರದಲ್ಲಿ H.264 ವೀಡಿಯೊಗಳಿಗೆ ಹೋಲಿಸಿದರೆ 50% ಉಳಿಸುವ ಮೂಲಕ ಸ್ಟೊರೇಜ್ ಅನ್ನು ಉತ್ತಮಗೊಳಿಸಲಿದೆ.
ನೈಟ್ ವಿಷನ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ ಅತಿಗೆಂಪು ಎಲ್ಇಡಿಗಳನ್ನು ಒಳಗೊಂಡಿರುವುದು ನೈಟ್ ವಿಷನ್ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಲೋ ಲೈಟ್ ಪರಿಸ್ಥಿತಿಗಳಲ್ಲಿಯೂ ಕೂಡ ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ.
ಕಲರ್ ಕ್ಯಾಪ್ಚರ್
ಕಡಿಮೆ-ಬೆಳಕಿನ ಸನ್ನಿವೇಶಗಳಲ್ಲಿ, ಇದು ಪೂರ್ಣ ಬಣ್ಣವನ್ನು ಸೆರೆಹಿಡಿಯುತ್ತದೆ, ತುಣುಕಿಗೆ ಚೈತನ್ಯ ಮತ್ತು ವಿವರಗಳನ್ನು ಸೇರಿಸುತ್ತದೆ.
ಡಿಟೆಕ್ಷನ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾವು AI ಹ್ಯೂಮನ್ ಡಿಟೆಕ್ಷನ್ ಅನ್ನು ಬಳಸಿಕೊಂಡು, ಕ್ಯಾಮರಾ ಸುಧಾರಿತ ಭದ್ರತಾ ಮೇಲ್ವಿಚಾರಣೆ ಸಾಮರ್ಥ್ಯಗಳನ್ನು ನೀಡುತ್ತದೆ.
ಕಮ್ಯೂನಿಕೇಷನ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾದಲ್ಲಿ 2-ವೇ ವಾಯ್ಸ್ ಕಾಲ್ ಫೀಚರ್ಸ್ ನೀಡಲಾಗಿದ್ದು, ಇದು ಹೆಚ್ಚಿನ ಅನುಕೂಲಕ್ಕಾಗಿ ಸಂವಾದಾತ್ಮಕ ಸಂವಹನವನ್ನು ಅನುಮತಿಸಲಿದೆ.
ಸ್ಟೊರೇಜ್
ಶಿಯೋಮಿ 360 ಹೋಮ್ ಸೆಕ್ಯುರಿಟಿ ಕ್ಯಾಮೆರಾದಲ್ಲಿ ಮೆಮೊರಿ ಕಾರ್ಡ್ ಮೂಲಕ 256GB ಸ್ಟೋರೇಜ್ ವಿಸ್ತರಿಸಬಹುದಾಗಿದೆ. ಜೊತೆಗೆ NAS ಡಿವೈಸ್‌ಗಳನ್ನು ಬೆಂಬಲಿಸಲಿದೆ. ಇದು ಬಳಕೆದಾರರ ಆದ್ಯತೆಗಳನ್ನು ಪೂರೈಸಲು ಬಹುಮುಖ ಶೇಖರಣಾ ಆಯ್ಕೆಗಳನ್ನು ಒದಗಿಸುತ್ತದೆ.


Click it and Unblock the Notifications








