ವಾಟ್ಸ್‌ಆಪ್ ಎರರ್ ಒಪ್ಪಿಕೊಂಡ ಶಿಯೋಮಿ, ಇಲ್ಲಿದೆ ಪರಿಹಾರ..!

By Tejaswini P G

  ಕೆಲ ದಿನಗಳ ಹಿಂದೆ ವಾಟ್ಸಾಪ್ ಅನ್ನು ಒಬ್ಸೊಲೀಟ್ ಎರರ್ ಎಂಬ ಹೊಸತೊಂದು ಸಮಸ್ಯೆ ಕಾಡಿತ್ತು.ಈ ಎರರ್ ಹಲವು ಬಳಕೆದಾರರಿಗೆ ವಾಟ್ಸಾಪ್ ಸೇವೆಯನ್ನು ಬಳಸಬೇಕಾದರೆ ವಾಟ್ಸಾಪ್ ಅನ್ನು ನೂತನ ಆವೃತ್ತಿಗೆ ಅಪ್ಡೇಟ್ ಮಾಡುವಂತೆ ತಿಳಿಸುತ್ತಿತ್ತಾದರೂ , ಅದು ನೀಡುವ ಲಿಂಕ್ ಬಳಸಿ ಗೂಗಲ್ ಪ್ಲೇ ಸ್ಟೋರ್ ಗೆ ಹೋದರೆ ಅಲ್ಲಿ ಯಾವುದೇ ಅಪ್ಡೇಟ್ ಲಭ್ಯವಿರಲಿಲ್ಲ. ಈ ತೊಂದರೆ ಶಿಯೋಮಿ ಬಳಕೆದಾರರನ್ನು ಮಾತ್ರ ಕಾಡುತ್ತಿತ್ತು ಎಂಬ ವರದಿಗಳು ಆಗ ಕೇಳಿಬಂದಿತ್ತು. ಶಿಯೋಮಿ ಸಂಸ್ಥೆಯು ಈಗ ಈ ವಿಷಯವನ್ನು ನಿಜವೆಂದು ಒಪ್ಪಿಕೊಂಡಿದೆ.

  ವಾಟ್ಸ್‌ಆಪ್ ಎರರ್ ಒಪ್ಪಿಕೊಂಡ ಶಿಯೋಮಿ, ಇಲ್ಲಿದೆ ಪರಿಹಾರ..!

  ಶಿಯೋಮಿ ಸಂಸ್ಥೆಯು ತಾನು ಆಕಸ್ಮಿಕವಾಗಿ ವಾಟ್ಸಾಪ್ ನ ಬೀಟಾ ಆವೃತ್ತಿಯೊಂದನ್ನು ತನ್ನ ಆಪ್ ಸ್ಟೋರ್ನಲ್ಲಿ ಹಾಕಿದ್ದಾಗಿ ತಿಳಿಸಿದ್ದು, ಹಲವು ಬಳಕೆದಾರರು ಈ ಆವೃತ್ತಿಯನ್ನು ತಮ್ಮ ಮೊಬೈಲ್ ಗೆ ಡೌನ್ಲೋಡ್ ಮಾಡಿದ್ದರು ಎಂದು ಹೇಳಿದೆ. ಈಗ ಈ ತೊಂದರೆಯನ್ನು ಪರಿಹರಿಸಲು ತಮ್ಮ ಮೊಬೈಲ್ನಲ್ಲಿ ಮತ್ತೆ ಆಪ್ ಅನ್ನು ಅಪ್ಡೇಟ್ ಮಾಡುವಂತೆ ಕೇಳಿಕೊಂಡಿದೆ. ಹೀಗಾಗಿ ಈ ತೊಂದರೆಗೆ ಶಿಯೋಮಿಯ ಆಪ್ ಸ್ಟೋರ್ ಹೊಣೆಯಾಗಿದ್ದು, ಶಿಯೋಮಿಯ ಕೆಲವು ಇಂಜಿನಿಯರ್ಗಳು ಆಪ್ ಸ್ಟೋರ್ನಲ್ಲಿ ವಾಟ್ಸಾಪ್ ನ APK ಫೈಲ್ ನ ಬೀಟಾ ಆವೃತ್ತಿಯನ್ನು ಅಪ್ಲೋಡ್ ಮಾಡಿದ್ದೇ ಇಷ್ಟೆಲ್ಲಾ ತೊಂದರೆಗಳಿಗೆ ಕಾರಣವಾಗಿದೆ.

  ಮಿ ಆಪ್ ಸ್ಟೋರ್ ನ ಆಟೋ ಅಪ್ಡೇಟ್ ಫೀಚರ್ ಹೊಣೆ

  ಶಿಯೋಮಿಯ ಆಪ್ ಸ್ಟೋರ್ನಲ್ಲಿ ಆಟೋ ಅಪ್ಡೇಟ್ ಫೀಚರ್ ಇದ್ದು ಈ ಆಯ್ಕೆ ಪೂರ್ವನಿಯೋಜಿತವಾಗಿ ಸಕ್ರಿಯವಾಗಿರುತ್ತದೆ. ಈ ಆಯ್ಕೆ ಸಕ್ರಿಯವಾಗಿದ್ದ ಬಳಕೆದಾರರಲ್ಲಿ ಈ ಒಬ್ಸೊಲೀಟ್ ಎರರ್ ತೊಂದರೆ ತೋರಿಬಂದಿದ್ದು ಈ ಗೊಂದಲಕ್ಕೆ ಕಾರಣವಾಗಿದೆ. ಈಗ ಶಿಯೋಮಿ ಸಂಸ್ಥೆಯು ಈ ತೊಂದರೆಯನ್ನು ಪರಿಹರಿಸಿದ್ದು, ವಾಟ್ಸಾಪ್ ನ ಹೊಸ ಆವೃತ್ತಿಯನ್ನು ಮಿ ಆಪ್ ಸ್ಟೋರ್ ನಲ್ಲಿ ಅಪ್ಡೇಟ್ ಮಾಡಿದೆ. ಈ ಅಪ್ಡೇಟ್ ಈ ಎಲ್ಲಾ ತೊಂದರೆಗಳನ್ನು ಪರಿಹರಿಸಲು ಶಕ್ತವಾಗಿದೆ ಎಂದು ಶಿಯೋಮಿ ಹೇಳಿದೆ.

  ವಾಟ್ಸಾಪ್ ಒಬ್ಸೊಲೀಟ್ ಎರರ್ ಪರಿಹಾರ

  ಹಲವು ಬಳಕೆದಾರರು ಜನವರಿ 13 ರಂದು ಈ ಒಬ್ಸೊಲೀಟ್ ಎರರ್ ತೊಂದರೆ ಎದುರಿಸಿದ್ದರು. ಬಳೆಕೆದಾರರು ಈ ತೊಂದರೆಗೆ ವಾಟ್ಸಾಪ್ ಅನ್ನು ಅನ್-ಇನ್ಸ್ಟಾಲ್ ಮಾಡಿ ಗೂಗಲ್ ಪ್ಲೇ ನಿಂದ ರಿ-ಇನ್ಸ್ಟಾಲ್ ಮಾಡುವುದು, ಮೊಬೈಲ್ ನ ತಾರೀಕು ಬದಲಿಸುವುದು ಮೊದಲಾದ ಹಲವು ಪರಿಹಾರಗಳನ್ನು ತಾವಾಗೇ ಕಂಡುಕೊಂಡಿದ್ದಾರೆ. ಕೆಲವು ಬಳಕೆದಾರರು ಎದುರಿಸಿದ ವಾಟ್ಸಾಪ್ ಒಬ್ಸೊಲೀಟ್ ಎರರ್ ಗೆ ಪರಿಹಾರವನ್ನು ನಾವೂ ಕೂಡ ಸೂಚಿಸಿದ್ದೇವೆ.

  Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

  ರಿಲಯೆನ್ಸ್ ಜಿಯೋ ರೂ 398 ಅಥವಾ ಅಧಿಕ ರೀಚಾರ್ಜ್ ಮೇಲೆ ನೀಡಲಿದೆ ರೂ 700 ವರೆಗೆ ಕ್ಯಾಶ್ಬ್ಯಾಕ್!

  ಈ ವಿಷಯದ ಕುರಿತಾಗಿ ಶಿಯೋಮಿ ಯು ಹೇಳಿಕೆಯನ್ನು ನೀಡಿದ್ದು, "ಕೆಲವು ಶಿಯೋಮಿ ಬಳಕೆದಾರರು ತಮ್ಮ ಫೋನ್ಗಳಲ್ಲಿ ವಾಟ್ಸಾಪ್ ಸಂಬಂಧಿ ತೊಂದರೆಯನ್ನು ಅನುಭವಿಸಿದ್ದಾರೆ. ಈ ಸಮಸ್ಯೆಯನ್ನು ಕೂಲಂಕುಶವಾಗಿ ಪರೀಕ್ಷಿಸಿದ ನಂತರ ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ವಾಟ್ಸಾಪ್ ನ ಬೀಟಾ ಆವೃತ್ತಿಯೊಂದು ಮಿ ಆಪ್ ಸ್ಟೋರ್ ಗೆ ದೂಡಲ್ಪಟ್ಟು ಹಲವು ಬಳಕೆದಾರರು ಇದನ್ನು ಅಪ್ಡೇಟ್ ಮಾಡಿದ್ದೇ ಈ ಗೊಂದಲಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ನಾವೀಗ ವಾಟ್ಸಾಪ್ ಸಂಸ್ಥೆಯಿಂದ ಸ್ವೀಕೃತವಾಗಿರುವ ವಾಟ್ಸಾಪ್ ನ ಹೊಸ ಆವೃತ್ತಿಯೊಂದನ್ನು ಮಿ ಸ್ಟೋರ್ ನಲ್ಲಿ ಅಪ್ಡೇಟ್ ಮಾಡಿದ್ದೇವೆ.

  ಈ ತೊಂದರೆಯನ್ನೆದುರಿಸಿದ ನಮ್ಮ ಬಳಕೆದಾರರಿಗೆ ತಮ್ಮ ಮೊಬೈಲ್ನಲ್ಲಿ ಈ ಹೊಸ ಆವೃತ್ತಿಯನ್ನು ಬಳಸಿ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡುವಂತೆ ನಾವು ವಿನಂತಿಸುತ್ತೇವೆ. ನಮ್ಮ ಮಿ ಅಭಿಮಾನಿಗಳು ಎದುರಿಸಿದ ತೊಂದರೆಗೆ ನಾವು ಈ ಮೂಲಕ ಕ್ಷಮೆಯಾಚಿಸುತ್ತೇವೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಅಚಾತುರ್ಯಗಳು ನಡೆಯದಂತೆ ಜಾಗರೂಕತೆ ವಹಿಸುತ್ತೇವೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  Read more about:
  English summary
  Xiaomi has acknowledged the WhatsApp Obsolete error stating that it had accidentally pushed a beta version of the app to its Mi App store and that has been downloaded by some users. The company states that it has come up with an update and users have to update the app to this version to resolve the error.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more