Home
ಸುದ್ದಿಜಾಲ

ಭಾರತೀಯರಿಗೆ ಶಾಕಿಂಗ್ ಸುದ್ದಿ ನೀಡಿದ 'ಶಿಯೋಮಿ'!..ಈಗ ಆಟ ಶುರು!!

ಭಾರತದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿರುವ ಚೀನಾ ಮೂಲದ 'ಶಿಯೋಮಿ' ಮೊಬೈಲ್ ಕಂಪೆನಿ ತನ್ನ ಆಟಗಳನ್ನು ಶುರು ಮಾಡಿದೆ. ಇಲ್ಲಿಯವರೆಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ತನ್ನ ಗ್ಯಾಜೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಶಿಯೋಮಿ ಕಂಪೆನಿ, ತನ್ನ ಬಹುತೇಕ ಪ್ರಾಡೆಕ್ಟ್‌ಗಳ ಬೆಲೆಯನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. ಹಾಗಾಗಿ, ಭಾರತೀಯರು ಇನ್ಮುಂದೆ ಶಿಯೋಮಿ ಕಂಪೆನಿಗೆ ಹೆಚ್ಚು ಹಣವನ್ನು ತೆರಬೇಕಿದೆ.

ಹೌದು, ದೇಶದಲ್ಲಿ ರೂಪಾಯಿಯ ಅಪಮೌಲ್ಯದಿಂದಾಗಿ ತನ್ನ ಬಹುತೇಕ ಪ್ರಾಡೆಕ್ಟ್‌ಗಳ ಬೆಲೆಯನ್ನು ಹೆಚ್ಚಿಸಿರುವುದಾಗಿ ಶಿಯೋಮಿ ಕಂಪೆನಿ ತಿಳಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಶೇ.15 ರಷ್ಟು ಕುಸಿತ ಕಂಡಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿತ್ತು. ಕೆಲವು ವಸ್ತುಗಳ ಕನಿಷ್ಠ ಮೂಲಬೆಲೆಯನ್ನು ಹೆಚ್ಚಿಸಲೇಬೇಕಾಗಿತ್ತು. ಹಾಗಾಗಿ, ಕೆಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಭಾರತೀಯರಿಗೆ ಶಾಕಿಂಗ್ ಸುದ್ದಿ ನೀಡಿದ 'ಶಿಯೋಮಿ'!..ಈಗ ಆಟ ಶುರು!!

ಶಿಯೋಮಿ ಕಂಪೆನಿಯ ಶಿಯೋಮಿ 6, ರೆಡ್‌ಮಿ 6A, 32 ಇಂಚಿನ ಮಿ ಎಲ್ಇಡಿ ಟಿವಿ 4 ಸಿ ಪ್ರೊ ಸ್ಮಾರ್ಟ್‌ಟಿವಿ ಸೆರಿದಂತೆ ಹಲವು ಶಿಯೋಮಿ ಪ್ರಾಡೆಕ್ಟ್‌ಗಳ ಬೆಲೆ ಈಗ ಹೆಚ್ಚಳವಾಗಿದೆ. ಹಾಗಾದರೆ, ಭಾರತದಲ್ಲಿ ಇದೀಗ ಬೆಲೆ ಹೆಚ್ಚಳ ಕಂಡಿರುವ ಶಿಯೋಮಿ ಕಂಪೆನಿಯ ಪ್ರಾಡೆಕ್ಟ್‌ಗಳು ಯಾವುವು? ಯಾವ ಯಾವ ಗ್ಯಾಜೆಟ್‌ಗಳ ಮೇಲೆ ಎಷ್ಟು ಬೆಲೆ ಹೆಚ್ಚಳವಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಎಂಐ ಟಿವಿ 4ಎ ಪ್ರೊ (49 ಇಂಚು)

ಎಂಐ ಟಿವಿ 4ಎ ಪ್ರೊ (49 ಇಂಚು)

ಶಿಯೋಮಿ ಕಂಪೆನಿಯು 'ಶಿಯೋಮಿ ಎಂಐ ಟಿವಿ 4ಎ ಪ್ರೊ' ಸ್ಮಾರ್ಟ್‌ಟಿವಿ ಬೆಲೆ 2,000 ರೂ. ಹೆಚ್ಚಳವಾಗಿದೆ. ಈ ಮೊದಲ ಭಾರತದಲ್ಲಿ 29,999 ರೂ.ಗಳಿಗೆ ಲಭ್ಯವಿದ್ದ ಎಂಐ ಟಿವಿ 4ಎ ಪ್ರೊ (49 ಇಂಚು) ಬೆಲೆ ಈಗ 31,999 ರೂಪಾಯಿಗಳಾಗಿವೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

ಎಂಐ ಟಿವಿ 4ಸಿ ಪ್ರೊ (32ಇಂಚು)

ಎಂಐ ಟಿವಿ 4ಸಿ ಪ್ರೊ (32ಇಂಚು)

ಭಾರತದಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ ಎಂಐ ಟಿವಿ 4ಸಿ ಪ್ರೊ 32 ಇಂಚಿನ ಮಾದರಿ ಟಿವಿ ಬೆಲೆ ಈಗ 1,000 ರೂ.ಹೆಚ್ಚಳವಾಗಿದೆ. ಈ ಮೊದಲು ಭಾರತದ ಮಾರುಕಟ್ಟೆಯಲ್ಲಿ 14,999 ರೂ.ಗಳಿಗೆ ಲಭ್ಯವಿದ್ದ ಎಂಐ ಟಿವಿ 4ಸಿ ಪ್ರೊ (32ಇಂಚು) ಬೆಲೆ ಈಗ 15,999 ರೂಪಾಯಿಗಳಾಗಿವೆ.

ರೆಡ್ಮಿ 6ಎ (2/16 ಜಿಬಿ)

ರೆಡ್ಮಿ 6ಎ (2/16 ಜಿಬಿ)

2GB RAM ಮತ್ತು 16 ಜಿಬಿ ಶೇಖರಣಾ ಮಾದರಿದ ಶಿಯೋಮಿ ರೆಡ್ಮಿ 6ಎ ಸ್ಮಾರ್ಟ್‌ಫೋನ್ ಬೆಲೆ 600 ರೂ. ಹೆಚ್ಚಳವಾಗಿದೆ. ಈ ಮೊದಲು 5,999 ರೂಪಾಯಿಗಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ ಹೊಸ ಬೆಲೆ ಈಗ 6,599 ರೂಪಾಯಿಗಳಾಗಿವೆ ಎಂದು ಕಂಪೆನಿ ತಿಳಿಸಿದೆ.

ರೆಡ್ಮಿ 6ಎ (3/32 ಜಿಬಿ)

ರೆಡ್ಮಿ 6ಎ (3/32 ಜಿಬಿ)

3GB RAM ಮತ್ತು 3 ಜಿಬಿ ಶೇಖರಣಾ ಮಾದರಿದ ಶಿಯೋಮಿ ರೆಡ್ಮಿ 6ಎ ಸ್ಮಾರ್ಟ್‌ಫೋನ್ ಬೆಲೆ 500 ರೂ. ಹೆಚ್ಚಳವಾಗಿದೆ. ಈ ಮೊದಲು 6,999 ರೂಪಾಯಿಗಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ ಹೊಸ ಬೆಲೆ ಈಗ 7,499 ರೂಪಾಯಿಗಳಾಗಿವೆ ಎಂದು ಕಂಪೆನಿ ತಿಳಿಸಿದೆ.

10000mAh ಪವರ್‌ಬ್ಯಾಂಕ್ 2i

10000mAh ಪವರ್‌ಬ್ಯಾಂಕ್ 2i

10000mAh ಶಕ್ತಿ ಸಾಮರ್ಥ್ಯದ ಶಿಯೋಮಿ ಮಿ ಪವರ್‌ಬ್ಯಾಂಕ್ 2i (ಕಪ್ಪು ಬಣ್ಣ) ಬೆಲೆ 100 ರೂ. ಏರಿಕೆಯಾಗಿದೆ. ಈ ಮೊದಲು ಕೇವಲ 799 ರೂಪಾಯಿಗಳಿಗೆ ಲಭ್ಯವಿದ್ದ ಶಿಯೋಮಿ ಮಿ 10000mAh ಪವರ್‌ಬ್ಯಾಂಕ್ 2i ಬೆಲೆ ಈಗ 899 ರೂಪಾಯಿಗಳಾಗಿವೆ ಎಂದು ಶಿಯೋಮಿ ತಿಳಿಸಿದೆ.

Best Mobiles in India

English summary
Manu Kumar Jain, director of Xiaomi India, took it to Twitter to announce the reason, and it is the same as the one given by Madhav Sheth,. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+