Xiaomi anniversary sale: ಸ್ಮಾರ್ಟ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್!
ಭಾರತದಲ್ಲಿ ಶಿಯೋಮಿ ಕಂಪೆನಿ ತನ್ನ ಒಂಬತ್ತನೇ ವಾಷಿ೯ಕೋತ್ಸವವನ್ನು ಆಚರಿಸುತ್ತಿದೆ. ಇದರ ಪ್ರಯುಕ್ತ ಭಾರತದಲ್ಲಿ 'ಶಿಯೋಮಿ ಟರ್ನ್ಸ್ 9' ಸೇಲ್ ಅನ್ನು ನಡೆಸುತ್ತಿದೆ. ಇನ್ನು ಈ ಸೇಲ್ ಇಂದಿನಿಂದ ಆರಂಭವಾಗಿದ್ದು, ಜುಲೈ 10 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಶಿಯೋಮಿ ಕಂಪೆನಿ ತನ್ನ ಆಯ್ದ ಡಿವೈಸ್‌ಗಳ ಮೇಲೆ 75% ವರೆಗೆ ರಿಯಾಯಿತಿ ನೀಡುತ್ತಿದೆ.
ಹೌದು,'ಶಿಯೋಮಿ ಟರ್ನ್ಸ್ 9' ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದೆ. ಇದಲ್ಲದೆ ಶಿಯೋಮಿ ಸ್ಮಾರ್ಟ್‌ಹೋಮ್ ಡಿವೈಸ್‌ಗಳ ಮೇಲೆ ಕೂಡ ಆಕರ್ಷಕ ರಿಯಾಯಿತಿ ಲಭ್ಯವಾಗುತ್ತಿದೆ. ಹಾಗಾದ್ರೆ ಶಿಯೋಮಿ ಆ್ಯನಿವರ್ಸರಿ ಸೇಲ್‌ನಲ್ಲಿ ನೀವು ಯಾವೆಲ್ಲಾ ಡಿವೈಸ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

'ಶಿಯೋಮಿ ಟರ್ನ್ಸ್ 9' ಸೇಲ್‌ನಲ್ಲಿ ವಿಶೇಷ ರಿಯಾಯಿತಿ ಮಾತ್ರವಲ್ಲ, ಲಕ್ಕಿ 9 ಶಾಪರ್ಸ್ ಕಾಂಟೆಸ್ಟ್ ಕೂಡ ನಡೆಯಲಿದೆ. ಅಂದರೆ ಈ ಕಾಂಟೆಸ್ಟ್‌ನಲ್ಲಿ ಒಂಬತ್ತು ಗ್ರಾಹಕರು ತಮ್ಮ ಆರ್ಡರ್ ಮೌಲ್ಯದ 100% ಅನ್ನು ಹಣವನ್ನು ಮರಳಿ ಪಡೆಯಬಹುದಾಗಿದೆ. ಇದು 12PM ವರೆಗೆ 'ಡೈಲಿ 9 ಸ್ಟೋರ್' ಲೈವ್ ಆಗಿರಲಿದೆ. ಇದರಲ್ಲಿ ಗ್ರಾಹಕರು ಆಯ್ದ ಡಿವೈಸ್‌ಗಳ ಮೇಲೆ ಆಫರ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದಲ್ಲದೆ ಮಿ ಎಕ್ಸ್ಟೆಂಡೆಡ್ ವಾರಂಟಿ, ಮಿ ಸ್ಕ್ರೀನ್ ಪ್ರೊಟೆಕ್ಟ್ ಮತ್ತು ಮಿ ಕಂಪ್ಲೀಟ್ ಪ್ರೊಟೆಕ್ಟ್ ಮೇಲೆ ಫ್ಲಾಟ್ 25% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಶಿಯೋಮಿ 13 ಪ್ರೊ
ಇನ್ನು ಇದೇ ಅವಧಿಯಲ್ಲಿ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 20,000ರೂ. ರಿಯಾಯಿತಿ ಪಡೆದುಕೊಂಡಿದೆ. ಆದರಿಂದ 89,999ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು 69,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ 6.73 ಇಂಚಿನ WQHD+ ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.
ಶಿಯೋಮಿ 12 ಪ್ರೊ
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಇದೆ ಸೇಲ್‌ನಲ್ಲಿ 39,999ರೂ. ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ 79,999ರೂ.ಬೆಲೆಯ ಸ್ಮಾರ್ಟ್‌ಫೋನ್ ಅನ್ನು 40,000ರೂ. ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ 6.73-ಇಂಚಿನ WQHD+ Samsung E5 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ.
ರೆಡ್ಮಿ ನೋಟ್ 12 ಪ್ರೊ 5G
ರೆಡ್ಮಿ ನೋಟ್ 12 ಪ್ರೊ 5G ಸ್ಮಾರ್ಟ್‌ಫೋನ್ ಶಿಯೋಮಿ ಸೇಲ್‌ನನಲ್ಲಿ 7,500ರೂ. ಡಿಸ್ಕೌಂಟ್ ಪಡೆದಿದೆ. ಇದರಿಂದ 27,999ರೂ. ಬೆಲೆಗೆ ಬದಲಾಗಿ 20,499ರೂ.ಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1080SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.

ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 32
ರೆಡ್ಮಿ ಸ್ಮಾರ್ಟ್ ಫೈರ್ ಟಿವಿ 32 ಶಿಯೋಮಿ ಸೇಲ್‌ನಲ್ಲಿ 9,749ರೂ. ಬೆಲೆಯಲ್ಲಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 96.9% ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡುತ್ತದೆ. ಇನ್ನು ಟಿವಿ 1.5GHz ಕ್ವಾಡ್-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಫೈರ್ ಓಎಸ್ 7 ಅನ್ನು ರನ್ ಮಾಡುತ್ತದೆ.
ಶಿಯೋಮಿ ಸ್ಮಾರ್ಟ್‌ಟಿವಿ 5A 32
ಶಿಯೋಮಿ ಸ್ಮಾರ್ಟ್‌ಟಿವಿ 5A 32 ಶಿಯೋಮಿ ಸೇಲ್‌ನಲ್ಲಿ 13,750 ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು 11,249ರೂ.ಬೆಲೆಗೆ ಖರೀದಿಸಬಹುದಾಗಿದೆ.


Click it and Unblock the Notifications








