ಇಂದಿನಿಂದ ಶಿಯೋಮಿ 'ಬ್ಲ್ಯಾಕ್ ಫ್ರೈಡೇ ಸೇಲ್' ಆರಂಭ!..ಖರೀದಿ ಮಿಸ್ ಮಾಡಲೇಬೇಡಿ!

|

ಪ್ರಸ್ತುತ ಭಾರತದ ನಂ ಒನ್ ಮೊಬೈಲ್ ಮಾರಾಟಗಾರ ಕಂಪೆನಿ ಶಿಯೋಮಿ ಇಂದಿನಿಂದ ತನ್ನ ವಾರ್ಷಿಕ 'ಬ್ಲ್ಯಾಕ್ ಫ್ರೈಡೇ ಸೇಲ್' ಅನ್ನು ಆರಂಭಿಸಿದೆ. ಫ್ಲಿಪ್‌ಕಾರ್ಟ್, ಅಮೆಜಾನ್, ಮಿ ಆನ್‌ಲೈನ್ ಸ್ಟೋರ್ ಮತ್ತು ಮಿ ಹೋಮ್ ಸೇರಿದಂತೆ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸೇಲ್ ಆರಂಭವಾಗಿದ್ದು, ಕಂಪನಿಯ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಮತ್ತು ಇತ್ತೀಚಿನ ಸಾಧನಗಳಾದ ಸ್ಮಾರ್ಟ್ ಬಲ್ಬ್‌ಗಳು, ಫಿಟ್ನೆಸ್ ಬ್ಯಾಂಡ್ಗಳು, ಬ್ಲೂಟೂತ್ ಸ್ಪೀಕರ್ಗಗಳು ಸೇರಿದಂತೆ ಎಲ್ಲಾ ಸಾಧನಗಳ ಮೇಲೆ ಭರ್ಜರಿ ಆಫರ್ ನೀಡಲಾಗಿದೆ.

ಶಿಯೋಮಿ

ಇಂದು ಆರಂಭವಾಗಿರುವ ಶಿಯೋಮಿ ಬ್ಲ್ಯಾಕ್ ಫ್ರೈಡೇ ಮಾರಾಟವು (ನವೆಂಬರ್ 29 ರಿಂದ ಪ್ರಾರಂಭವಾಗಿದೆ) ಮುಂದಿನ ಡಿಸೆಂಬರ್ 2 ರವರೆಗೆ ಮುಂದುವರಿಯಲಿದ್ದು, ಸೇಲ್‌ನಲ್ಲಿ ಶಿಯೋಮಿಯ ಯಾವುದೇ ವಸ್ತುಗಳ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಶೇ 10 ರಷ್ಟು ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. ಹಾಗೆಯೇ ಕಂಪೆನಿಯ ಆಫ್‌ಲೈನ್ ಮಳಿಗೆಗಳಲ್ಲಿ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಕೆದಾರರು 1,500 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

ರೆಡ್‌ಮಿ ಕೆ 20 ಪ್ರೊ

ಈ ಸೇಲ್‌ನಲ್ಲಿ ರೆಡ್‌ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್‌ಗೆ ರೂ .2,000 ರಿಯಾಯಿತಿ ಸಿಗಲಿದೆ. ಇದಲ್ಲದೆ, ನೀವು ನಿಮ್ಮ ಹಳೆಯ ಫೋನ್ ಅನ್ನು ರೆಡ್‌ಮಿ ಕೆ 20 ಪ್ರೊಗಾಗಿ ವಿನಿಮಯ ಮಾಡಿಕೊಳ್ಳಬಹುದು ಮತ್ತು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮೌಲ್ಯಕ್ಕೆ ಹೆಚ್ಚುವರಿಯಾಗಿ 2,000 ರೂ.ಗಳ ವಿನಿಮಯ ಬೋನಸ್ ಪಡೆಯಬಹುದು. ಈ ಸೇಲ್‌ನಲ್ಲಿ ಫೋನ್ ಕ್ರಮವಾಗಿ 6 ​​ಜಿಬಿ / 128 ಜಿಬಿ ಮತ್ತು 8 ಜಿಬಿ / 256 ಜಿಬಿ ರೂಪಾಂತರಗಳಿಗೆ 25,999 ರೂ ಮತ್ತು 28,999 ರೂ.ಗಳ ಪರಿಣಾಮಕಾರಿ ಬೆಲೆ ಲಭ್ಯವಿರುತ್ತದೆ ಎಂದು ಶಿಯೋಮಿ ತಿಳಿಸಿದೆ.

ರೆಡ್‌ಮಿ ನೋಟ್ 8

ನೀವು ರೆಡ್‌ಮಿ ನೋಟ್ 8-ಸರಣಿಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದರೆ ನಿಮಗೊಂದು ಸಿಹಿಸುದ್ದಿ ಇದೆ. ಶಿಯೋಮಿ ಇತ್ತೀಚೆಗೆ ಬಿಡುಗಡೆ ಮಾಡಿರು ರೆಡ್‌ಮಿ ನೋಟ್ 8-ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹೊಸ ಬಣ್ಣ ರೂಪಾಂತರಗಳನ್ನು ಪರಿಚಯಿಸಿದೆ. ರೆಡ್ಮಿ ನೋಟ್ 8 ಪ್ರೊ ಮತ್ತು ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್‌ಗಳನ್ನು ನೀವು ಎಲೆಕ್ಟ್ರಿಕ್ ಬ್ಲೂ ಮತ್ತು ಕಾಸ್ಮಿಕ್ ಪರ್ಪಲ್ ಎಂಬ ಹೊಸ ಬಣ್ಣ ರೂಪಾಂತರಗಳು ಮೊದಲ ಬಾರಿಗೆ ನವೆಂಬರ್ 29 ರಂದು ಮಿ ಆನ್‌ಲೈನ್ ಪೋರ್ಟಲ್, ಅಮೆಜಾನ್ ಮತ್ತು ಮಿ ಹೋಮ್‌ನಲ್ಲಿ ಮಾರಾಟವಾಗಲಿವೆ.

ಕಳೆದ ವರ್ಷದಿಂದ ಕಂಪನಿಯ ಪ್ರಮುಖ ಸ್ಥಾನವಾದ ಪೊಕೊ ಎಫ್ 1 6 ಜಿಬಿ RAM + 64 ಜಿಬಿ ಸಂಗ್ರಹ ಮತ್ತು 6 ಜಿಬಿ RAM + 128 ಜಿಬಿ ಸಂಗ್ರಹಣಾ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರೀಯಯಿತಿ ನೀಡಲಾಗಿದ್ದು, 14,999 ರೂ.ಗಳ ರಿಯಾಯಿತಿ ದರದಲ್ಲಿ ಪೊಕೊ ಎಫ್ 1 ಸ್ಮಾರ್ಟ್‌ಫೋನ್ ಲಭ್ಯವಿರುತ್ತದೆ. ಹಾಗೆಯೇ, 8 ಜಿಬಿ RAM ಮತ್ತು 256 ಜಿಬಿ ಶೇಖರಣಾ ರೂಪಾಂತರಕ್ಕೆ 18,999 ರೂ.ನಿಗದಿಪಡಿಸಲಾಗಿದೆ. ಹಾಗಾಗಿ ಶಿಯೋಮಿಯ ಎಲ್ಲಾ ಡಿವೈಸ್‌ಗಳನ್ನುಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ಇದು ಉತ್ತಮ ಸಮಯ ಎನ್ನಬಹುದು.

Most Read Articles
Best Mobiles in India

English summary
Xiaomi announces Black Friday sale from today : Deals, discount, bank offers, and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X