Home
ಸುದ್ದಿಜಾಲ

ಶಿಯೋಮಿಯಿಂದ 'ಸ್ಮಾರ್ಟ್‌ ಹೋಮ್‌ ಡೇಸ್‌ ಸೇಲ್' ಘೋಷಣೆ! ಆಫರ್‌ ಏನು?

ಟೆಕ್‌ ವಲಯದಲ್ಲಿ ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಶಿಯೋಮಿ ಕಂಪೆನಿ ಜನಪ್ರಿಯತೆ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಭಾರತದಲ್ಲಿ ತನ್ನ ಪ್ರಾಡಕ್ಟ್‌ ಲೈನ್‌ ಆಪ್‌ಗಾಗಿ "ಸ್ಮಾರ್ಟ್ ಹೋಮ್ ಡೇಸ್" ಹೆಸರಿನ ವಾರ್ಷಿಕ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ನಲ್ಲಿ ಎಲ್ಇಡಿ ಬಲ್ಬ್‌ಗಳು, ರೂಟರ್‌ಗಳು, ಪ್ಯೂರಿಫೈಯರ್‌ಗಳು ಮತ್ತು ಹಲವು ಗ್ಯಾಜೆಟ್ಸ್‌ಗಳ ಮೇಲೆ ಹಲವಾರು ರಿಯಾಯಿತಿಗಳು ಮತ್ತು ಆಫರ್‌ಗಳನ್ನು ನೀಡಲು ಮುಂದಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ಸ್ಮಾರ್ಟ್‌ ಹೋಮ್‌ ಡೇಸ್‌ ಸೇಲ್‌ ಅನ್ನು ಘೋಷಣೆ ಮಾಡಿದೆ. ಈ ಸೇಲ್‌ ಮಾರ್ಚ್ 7 ರಿಂದ ಪ್ರಾರಂಭವಾಗಲಿದ್ದು ಮಾರ್ಚ್ 10, 2022 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ ಸಮಯದಲ್ಲಿ ನೀಡುವ ಆಫರ್‌ಗಳು ಮಿ.ಕಾಮ್‌, ಮಿ ಹೋಮ್‌, ಫ್ಲಿಪ್‌ಕಾರ್ಟ್ ಸೇರಿದಂತೆ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ. ಹಾಗಾದ್ರೆ ಈ ಸೇಲ್‌ನಲ್ಲಿ ನೀವು ಪಡೆದುಕೊಳ್ಳಬಹುದಾದ ರಿಯಾಯಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಸ್ಮಾರ್ಟ್ ಹೋಮ್ ಡೇಸ್ ಸೇಲ್‌

ಮಿ ಸ್ಮಾರ್ಟ್ ಹೋಮ್ ಡೇಸ್ ಸೇಲ್‌

ಶಿಯೋಮಿ ಸಂಸ್ಥೆಯ ಮಿ ರೋಬೋಟ್‌ ವಾಕ್ಯೂಮ್‌-ಮಾಪ್ P, ಸ್ಮಾರ್ಟ್ ಹೋಮ್ ಕ್ಲೀನಿಂಗ್ ಸಲ್ಯೂಶನ್‌ ನಿಮಗೆ ರಿಯಾಯಿತಿ ದರದಲ್ಲಿ ಕೇವಲ 19,999ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 24,999ರೂ.ಆಗಿದೆ. ಇದಲ್ಲದೆ ಈ ಈವೆಂಟ್‌ನಲ್ಲಿ ಶಿಯೋಮಿಯ Mi ಏರ್ ಪ್ಯೂರಿಫೈಯರ್ 3 ಯನ್ನು 9,999ರೂ.ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೆ Mi ಸ್ಮಾರ್ಟ್ ವಾಟರ್ ಪ್ಯೂರಿಫೈಯರ್ (RO+UV) ಮೇಲೆ 2,000ರೂ.ಗಳ ರಿಯಾಯಿತಿ ದೊರೆಯಲಿದ್ದು ಕೇವಲ 10,999ರೂ.ಗಳಿಗೆ ಲಭ್ಯವಾಗಲಿದೆ.

ಶಿಯೋಮಿ

ಇದಲ್ಲದೆ ಗ್ರಾಹಕರು ಶಿಯೋಮಿ ಹೋಮ್ ಸೆಕ್ಯುರಿಟಿ ಕ್ಯಾಮೆರಾಗಳ ಮೇಲೆ ಅನೇಕ ರಿಯಾಯಿತಿಗಳನ್ನು ಪಡೆಯಬಹುದು. Mi 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ 2K Pro ರಿಯಾಯಿತಿ ದರದಲ್ಲಿ ನಿಮಗೆ ಕೇವಲ 3,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ Mi ಹೋಮ್ ಸೆಕ್ಯುರಿಟಿ ಕ್ಯಾಮೆರಾ 360 1080p ಡಿಸ್ಕೌಂಟ್‌ನಲ್ಲಿ 2,799ರೂ.ಗಳಿಗೆ ಲಭ್ಯವಿರುತ್ತದೆ. ಇನ್ನು ಶಿಯೋಮಿ ಸಂಸ್ಥೆಯ ಹಲವಾರು LED ಬಲ್ಬ್‌ಗಳು ಅನೇಕ ರಿಯಾಯಿತಿಯನ್ನು ಪಡೆದಿವೆ. ಇದರಲ್ಲಿ Mi LED ಸ್ಮಾರ್ಟ್ ಬಲ್ಬ್ 999ರೂ.ಗಳಿಗೆ ದೊರೆಯಲಿದೆ. ಕೇವಲ ಬಿಳಿ ಬಣ್ಣದ ಬಲ್ಬ 399ರೂ.ಗಳಿಗೆ ಸಿಗಲಿದೆ.

ಸ್ಮಾರ್ಟ್

ಇನ್ನು ಶಿಯೋಮಿಯ Mi LED ಸ್ಮಾರ್ಟ್ ಕಲರ್ ಬಲ್ಬ್ (B22) 100ರೂ.ಗಳ ರಿಯಾಯಿತಿಯನ್ನು ಪಡೆದಿದ್ದು 699ರೂ.ಗಳಿಗೆ ಲಭ್ಯವಾಗಲಿದೆ. ಈ ಕಂಪನಿಯ ಎರಡು ಸ್ಮಾರ್ಟ್ ಲ್ಯಾಂಪ್‌ಗಳನ್ನು ಮಿ ಸ್ಮಾರ್ಟ್‌ LED ಡೆಸ್ಕ್ ಲ್ಯಾಂಪ್ 1S ಮತ್ತು Mi ಸ್ಮಾರ್ಟ್ ಬೆಡ್‌ಸೈಡ್ ಲ್ಯಾಂಪ್ 2 ಎಂದು ಹೆಸರಿಸಲಾಗಿದೆ. ಎರಡು ಲ್ಯಾಂಪ್‌ಗಳ ಮೂಲ ಬೆಲೆ 2,899 ರೂ.ಆಗಿದೆ. ಆದರೆ ಸೇಲ್‌ ಸಮಯದಲ್ಲಿ 400ರೂ.ಗಳ ಡಿಸ್ಕೌಂಟ್‌ ಪಡೆದಿದ್ದು 2,499 ರೂಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಆಫರ್‌ಗಳು

ಆಫರ್‌ಗಳು

ಇನ್ನು ಮಿ.ಕಾಮ್‌ನಲ್ಲಿ ಪ್ರತ್ಯೇಕವಾಗಿ ಹೆಚ್ಚುವರಿ ವಿನಿಮಯ ಬಂಪ್-ಅಪ್ ಕೊಡುಗೆಗಳೊಂದಿಗೆ ಬಳಕೆದಾರರು ತ್ವರಿತ ರಿಯಾಯಿತಿ ಕೂಪನ್‌ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಶಿಯೋಮಿ ಇಂಡಿಯಾ ವೈಪ್‌ಔಟ್‌ಸೇಲ್ ಅನ್ನು ಸಂಜೆ 4:00 ಗಂಟೆಗೆ ನಡೆಸುತ್ತಿದೆ, ಇಲ್ಲಿ ಗ್ರಾಹಕರು ಪ್ರತಿದಿನ 2 ಡಿವೈಸ್‌ಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು

Best Mobiles in India

English summary
Xiaomi announces Mi Smart Home Days sale for its product lineup in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+