ಭಾರತದಲ್ಲಿ ಶ್ಯೋಮಿ ಮಾರಾಟಕ್ಕೆ ಹೈಕೋರ್ಟ್ ತಡೆ

By Shwetha
|

ಭಾರತದಲ್ಲಿ ಶ್ಯೋಮಿ ಫೋನ್‌ ಮಾರಾಟ ಮತ್ತು ಆಮದಿಗೆ ದೆಹಲಿ ಹೈ ಕೋರ್ಟ್ ತಡೆಯಾಜ್ಞೆಯನ್ನು ವಿಧಿಸಿದೆ. ಶ್ಯೋಮಿಯ ವಿರುದ್ಧ ಎರಿಕ್‌ಸನ್ ಇಂಡಿಯಾ ಫೈಲ್ ಮಾಡಿರುವ ಕೇಸ್ ಅನ್ನು ಆಲಿಸಿರುವ ನ್ಯಾಯಾಲಯ ಭಾರತದಲ್ಲಿ ಚೀನಾದ ಫೋನ್‌ ಮಾರಾಟಕ್ಕೆ ಮತ್ತು ಆಮದಿಗೆ ತಡೆಯಾಜ್ಞೆಯನ್ನು ವಿಧಿಸಿದೆ.

ಇದನ್ನೂ ಓದಿ: ಎಚ್‌ಟಿಸಿ ಫೋನ್ ಲಾಕ್ ಆಗಿದೆಯೇ? ಈ ವಿಧಾನ ಅನುಸರಿಸಿ

ಪ್ರಮಾಣಿತ ಅಗತ್ಯ ಪೇಟೆಂಟ್ ಹಕ್ಕುಗಳನ್ನು ಶ್ಯೋಮಿ ಉಲ್ಲಂಫಿಸಿರುವುದರಿಂದ ನ್ಯಾಯಾಲಯ ಶ್ಯೋಮಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವುದಕ್ಕೆ ನಿಷೇಧವನ್ನು ಸೂಚಿಸಿದೆ. ಈ ಪೇಟೆಂಟ್ ಹಕ್ಕುಗಳನ್ನು ಉಲ್ಲಂಫಿಸಿರುವ ಇತರ ಫೋನ್‌ಗಳಿಗೂ ಇದು ಅನ್ವಯಿಸುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಶ್ಯೋಮಿ ಫೋನ್ ಮಾರಾಟ ಭಾರತದಲ್ಲಿ ಬಂದ್?

ಫೋನ್ ಕೆಲವೊಂದು ಪೇಟೆಂಟ್ ಹಕ್ಕುಗಳನ್ನು ಉಲ್ಲಂಫಿಸಿರುವುದರಿಂದ ನ್ಯಾಯಾಲಯ ಶ್ಯೋಮಿ ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಇಂತಹುದೇ ಪೇಟೆಂಟ್ ಸಮಸ್ಯೆಯನ್ನು ಭಾರತದಲ್ಲಿ ಇತರ ಫೋನ್ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್, ಜಿಯೋನಿ ಮತ್ತು ಇಂಟೆಕ್ಸ್ ಕೂಡ ಎದುರಿಸುತ್ತಿದೆ. ಆದರೆ ನ್ಯಾಯಾಲಯ ಈ ಫೋನ್‌ಗಳ ನಿಷೇಧಕ್ಕೆ ಯಾವುದೇ ಸೂಚನೆಯನ್ನು ಇದುವರೆಗೆ ನೀಡಿಲ್ಲ.

ಶ್ಯೋಮಿ ಇಂಡಿಯಾದ ಮುಖ್ಯಸ್ಥ ಮನು ಜೈನ್ ಹೇಳುವಂತೆ ನ್ಯಾಯಾಲಯ ಅಥವಾ ಎರಿಕ್‌ಸನ್‌ನಿಂದ ಕಂಪೆನಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಪಡೆದುಕೊಂಡಿಲ್ಲ. ಭಾರತವು ಶ್ಯೋಮಿಯ ಅಭಿವೃದ್ಧಿಗೆ ಉತ್ತಮವಾಗಿದ್ದು ಸಂಸ್ಥೆಯ ಕಾನೂನು ತಂಡವು ಈ ನಿಟ್ಟಿನಲ್ಲಿ ಪರಿಶೀಲನೆಗಳನ್ನು ನಡೆಸುತ್ತಿದೆ. ಶ್ಯೋಮಿಯ ವಿರುದ್ಧದ ಆರೋಪವನ್ನು ಸೂಕ್ತವಾಗಿ ತನಿಖೆ ನಡೆಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
This article tells about Delhi high court has put paid to Xiaomi's surging sales juggernaut in India. At least for now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X