ಕಡಿಮೆ ಬೆಲೆಯ ಶಿಯೋಮಿ ರೂಟರ್ BE5000 ಮಾರುಕಟ್ಟೆಗೆ ಎಂಟ್ರಿ...! ಬೆಲೆ, ಲಭ್ಯತೆ ತಿಳಿಯಿರಿ
ಶಿಯೋಮಿ (Xiaomi) ಸಂಸ್ಥೆಯು ಹೊಸ ಹೊಸ ಆವಿಷ್ಕಾರಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ್ದು, ತನ್ನದೇ ಆದ ಗ್ರಾಹಕರ ಬಲವನ್ನು ಈ ಸಂಸ್ಥೆ ಹೊಂದಿದೆ. ಇದೀಗ ಅತೀ ಕಡಿಮೆ ದರದಲ್ಲಿ ರೂಟರ್ ಒಂದನ್ನು ನೀಡಲು ಮುಂದಾಗಿದ್ದು ಮಾರುಕಟ್ಟೆಗೆ ಪರಿಚಯಿಸಿದೆ. ಯಾವುದು ಆ ರೂಟರ್ ಅದರ ಬೆಲೆ ಹಾಗೂ ಎಲ್ಲಿ ದೊರೆಯುತ್ತದೆ ಎಂದು ತಿಳಿಯಲು ಈ ಲೇಖನ ಓದಿ.
ಶಿಯೋಮಿ BE5000 2.5G ವೈಫೈ 7 ಹೈ-ಸ್ಪೀಡ್ ಹೆಸರಿನ ರೂಟರ್ ಅನ್ನು ಇಂಟರ್ನೆಟ್ ಕ್ಷೇತ್ರದಲ್ಲಿ ಕೈಗೆಟುಕುವ ದರದಲ್ಲಿ ಈ ಸಂಸ್ಥೆ ಜಾರಿಗೊಳಿಸಿದೆ. ಮಾರುಕಟ್ಟೆಯಲ್ಲಿ ಸಿಗುವ ಬಜೆಟ್ ಸ್ನೇಹಿ WiFi 7 ರೂಟರ್‌ಗಳಲ್ಲಿ ಇದು ಕೂಡ ಒಂದಾಗಿದೆ.

ಇತ್ತೀಚಿನ ದಿನಗಳಲ್ಲಿ ನೂತನ ಮನೆಗಳಿಗೆ ಹಾಗೂ ಟೆಕ್ಕಿಗಳು ಕೂಡ ರೂಟರ್ ಅಳವಡಿಸಿಕೊಳ್ಳುತ್ತಿರುವುದರಿಂದ ಅವರ ಅಗತ್ಯತೆಗಳನ್ನು ಪೂರೈಸಲೆಂದು ಈ ಬಜೆಟ್ ಸ್ನೇಹಿ ರೂಟರ್ ಅನ್ನು ಶಿಯೋಮಿ ಸಂಸ್ಥೆ ಜಾರಿಗೆ ತಂದಿದೆ. ಈ ರೂಟರ್ ಅನ್ನು $49 ರಿಯಾಯಿತಿ ದರದಲ್ಲಿ ಗೀಕ್‌ವಿಲ್ಸ್ (GeekWills) ವೆಬ್‌ಸೈಟ್ ಮೂಲಕ ಆನ್‌ಲೈನ್ ನಲ್ಲಿ ಖರೀದಿಸಬಹುದಾಗಿದೆ.
ಸುಧಾರಿತ ವೈಫೈ-7 ತಂತ್ರಜ್ಞಾನ: ಶಿಯೋಮಿ ರೂಟರ್ BE5000 ಇದು ಇತ್ತೀಚಿನ WiFi 7 ತಂತ್ರಜ್ಞಾನವಾಗಿದ್ದು ಇದನ್ನು IEEE 802.11be ಎಂದೂ ಕರೆಯುತ್ತಾರೆ. ಇದು WiFi 6ನ ಮುಂದುವರೆದ ವರ್ಷನ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಎಲ್ಲಾ ಡಿವೈಸ್‌ಗಳು ಅತೀ ವೇಗವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿರಲಿದೆ.
4K ಮತ್ತು 8K ಸ್ಟ್ರೀಮಿಂಗ್, ಗೇಮಿಂಗ್ ಹಾಗೂ ದೊಡ್ಡ ಫೈಲ್‌ಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ತಡೆರಹಿತ 5.011Mbps ವೇಗದಲ್ಲಿ ಡೌನ್‌ಲೋಡ್ ಮಾಡಲು ನೆರವಾಗುತ್ತದೆ. ಇಂದಿನ ಡಿಜಿಟಲ್ ಪ್ರಪಂಚದ ಬ್ಯಾಂಡ್‌ವಿಡ್ತ್ ಅವಶ್ಯಕತೆಗಳನ್ನು ಪೂರೈಸಲು ಈ ರೂಟರ್ ಅನ್ನು ನಿರ್ಮಿಸಲಾಗಿದೆ.
ಸ್ಥಿರತೆಗಾಗಿ MLO ಡ್ಯುಯಲ್ ಚಾನೆಲ್: ಈ ರೂಟರ್ ವಿಶೇಷ ಗುಣವೆಂದರೆ ಅದರ ಮಲ್ಟಿ-ಲಿಂಕ್ ಆಪರೇಷನ್ (MLO) ಡ್ಯುಯಲ್ ಚಾನೆಲ್ ಇಂಟಿಗ್ರೇಷನ್ ಹೊಂದಿದೆ, ಈ ತಂತ್ರಜ್ಞಾನ ಒಂದೇ ಡಿವೈಸ್ ಏಕಕಾಲದಲ್ಲಿ 2.4GHz ಮತ್ತು 5GHz ಬ್ಯಾಂಡ್‌ಗಳಿಗೆ ಸಂಪರ್ಕಿಸಲು ಅನುಮತಿಸುತ್ತದೆ. ಎರಡು ಲಿಂಕ್‌ಗಳ ಮೂಲಕ ಸಮಾನ ಡೇಟಾವನ್ನು ರವಾನಿಸುವ ಮೂಲಕ ನೆಟ್‌ವರ್ಕ್ ಸಮಸ್ಯೆ ಬಾರದದಂತೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ. ಇದು ಆ ವ್ಯಾಪ್ತಿಯ ಡಿಸ್ಟರ್ಬೆನ್ಸ್ ತಡೆದು ಹೆಚ್ಚು ಪರಿಣಾಮಕಾರಿ ನೆಟ್‌ವರ್ಕ್ ಸಿಗಲು ಸಹಕಾರಿಯಾಗಿದೆ.
ಹೈ-ಸ್ಪೀಡ್ ನೆಟ್‌ವರ್ಕ್ ಪೋರ್ಟ್‌ಗಳು: ಇದು ಒಂದು 2.5 Gbps WAN/LAN ಪೋರ್ಟ್ ಮತ್ತು ಮೂರು 1 Gbps WAN/LAN ಪೋರ್ಟ್‌ಗಳನ್ನು ಹೊಂದಿದೆ. ಈ ಪೋರ್ಟ್‌ಗಳು ಹೆಚ್ಚಿನ ವೇಗದ ಡೇಟಾ ಹರಿವನ್ನು ಸುಗಮಗೊಳಿಸುತ್ತವೆ ಇದರಿಂದ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್‌ಗಳು ಸಾಧ್ಯವಾದಷ್ಟು ವೇಗವಾದ ಇಂಟರ್ನೆಟ್ ಪ್ರಯೋಜನ ಪಡೆಯುತ್ತವೆ. ಆನ್‌ಲೈನ್ ಗೇಮಿಂಗ್, ವಿಡಿಯೋ ಕಾನ್ಫರೆನ್ಸ್ ಮತ್ತು ಸ್ಟ್ರೀಮಿಂಗ್ ಚಟುವಟಿಕೆಗಳಿಗೆ ಈ ಸೆಟಪ್ ಸೂಕ್ತವಾಗಿದೆ.
ಬೀಮ್‌ಫೋರ್ಮಿಂಗ್ ಜೊತೆಗೆ ಗರಿಷ್ಠ ವ್ಯಾಪ್ತಿ: ವಿಶಾಲವಾದ ವ್ಯಾಪ್ತಿ ಕವರ್ ಮಾಡುವ ಉದ್ದೇಶದಿಂದಾಗಿ ಈ ರೂಟರ್‌ನಲ್ಲಿ ಐದು ಬಾಹ್ಯ ಆಂಟೆನಾಗಳು ಮತ್ತು ಬೀಮ್‌ಫೋರ್ಮಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ರೂಟರ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಬೃಹತ್ ಮನೆಗಳು, ಬಹು ಕೊಠಡಿ ಹೊಂದಿರುವ ಅಪಾರ್ಟ್‌ಮೆಂಟ್ ಇದ್ದರೂ ಈ ರೂಟರ್ ವ್ಯಾಪ್ತಿಯನ್ನು ಕವರ್ ಮಾಡುವುದರ ಜೊತೆಗೆ ಸಮರ್ಪಕ ನೆಟ್‌ವರ್ಕ್ ವೇಗವನ್ನು ನೀಡಲಿದೆ.
ಹೆಚ್ಚು ಕಾರ್ಯಕ್ಷಮತೆಯ ಡ್ಯುಯಲ್ ವೈರ್‌ಲೆಸ್ ಚಿಪ್: ರೂಟರ್ ಹೃದಯಭಾಗದಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ 6nm ಡ್ಯುಯಲ್ ವೈರ್‌ಲೆಸ್ ಚಿಪ್ ಹೊಂದಿದ್ದು, ಈ ಚಿಪ್ ವೇಗ ಮತ್ತು ಸ್ಥಿರವಾದ ಕಾರ್ಯಕ್ಷಮತೆ ತಿಳಿಸುತ್ತದೆ. ಏಕಕಾಲದಲ್ಲಿ 128 ಡಿವೈಸ್‌ಗಳು ಕನೆಕ್ಟ್ ಆಗಲು ಸಹಕರಿಸುತ್ತದೆ.
ಮೆಶ್ ನೆಟ್‌ವರ್ಕಿಂಗ್ ಬೆಂಬಲ: ದೊಡ್ಡ ಮನೆಗಳು ಅಥವಾ ಹೆಚ್ಚು ಸಂಕೀರ್ಣವಾದ ನೆಟ್‌ವರ್ಕ್ ಅವಶ್ಯಕತೆಗಳನ್ನು ಹೊಂದಿರುವವರಿಗೆ ಈ ರೂಟರ್ ಮೆಶ್ ನೆಟ್‌ವರ್ಕಿಂಗ್ ಅನ್ನು ಸೂಚಿಸುತ್ತದೆ. ನೀವು ಮೆಶ್ ನೆಟ್‌ವರ್ಕ್‌ನಲ್ಲಿ 10 ಶಿಯೋಮಿ ರೂಟರ್‌ಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ಮನೆಗೆ ಸ್ಪೀಡ್ ನೆಟ್‌ವರ್ಕ್ ಪಡೆಯಬಹುದು.
ತಡೆರಹಿತ IoT ಸಂಪರ್ಕ: ಸ್ಮಾರ್ಟ್ ಮನೆಗಳನ್ನು ಗಮನದಲ್ಲಿಟ್ಟುಕೊಂಡು ಈ ರೂಟರ್ ವಿನ್ಯಾಸಗೊಳಿಸಲಾಗಿದ್ದು, ಮನೆಯ ಡಿವೈಸ್‌ಗಳಿಗೆ ಹೆಚ್ಚು ಭದ್ರತೆ ಒದಗಿಸುತ್ತದೆ. ರೂಟರ್ ಮಿಜಿಯಾ ಅಪ್ಲಿಕೇಶನ್ ಮೂಲಕ ಸೈಬರ್ ಅಪಾಯಗಳ ಕುರಿತು ನೈಜ ಸಮಯದ ಮಾಹಿತಿಯನ್ನು ನೀಡುತ್ತದೆ ಹಾಗೂ ಸೈಬರ್ ದಾಳಿ ತಡೆಯಲು ಮತ್ತು ನಿಮ್ಮ ಗೌಪ್ಯತೆ ರಕ್ಷಿಸಲು ಸಹಾಯ ಮಾಡುತ್ತದೆ.
ಶಿಯೋಮಿ ರೂಟರ್ BE5000 ಸುಧಾರಿತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಸಿಗಲಿದ್ದು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ ಬಯಸುವವರು ಖರೀದಿಸಬಹುದಾಗಿದೆ.


Click it and Unblock the Notifications








