Subscribe to Gizbot

ಸಿಕ್ರೆಟ್ ಹೆಸರಿನಲ್ಲಿ ಶಿಯೋಮಿ ನಿರ್ಮಿಸಿರುವ ಸ್ಮಾರ್ಟ್‌ಫೋನ್: ಮಾರುಕಟ್ಟೆಯಲ್ಲಿ ಹೊಸ ಅಲೆ..?

Posted By: -

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಹೊಸ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿದೆ. ಇದರೊಂದಿಗೆ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಸ್ಮಾರ್ಟ್ ಫೋನ್ ಗಳು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಹೊಸದೊಂದು ಬಜೆಟ್ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲು ಮುಂದಾಗಿದೆ.

ಸಿಕ್ರೆಟ್ ಹೆಸರಿನಲ್ಲಿ ಶಿಯೋಮಿ ನಿರ್ಮಿಸಿರುವ ಸ್ಮಾರ್ಟ್‌ಫೋನ್:

ಮೂಲಗಳ ಪ್ರಕಾರ ಹೊಸ ಸ್ಮಾರ್ಟ್ ಫೋನ್ ಗೆ ಶಿಯೋಮಿ ಬರ್ಲಿನ್ ಎಂಬ ಕೋಡ್ ನೇಮ್ ನೊಂದಿಗೆ ಕಾಣಿಸಿಕೊಂಡಿರುವ ಬಜೆಟ್ ಸ್ಮಾರ್ಟ್ ಫೋನ್ ಫೈನಲ್ ನೆಮ್ ಇನ್ನು ಫೈನಲ್ ಆಗಿಲ್ಲ ಎನ್ನಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 632 ಪ್ರೋಸೆಸರ್ ಅನ್ನು ಅಳವಡಿಸಲಿದೆ. ಇದು ವೇಗವಾಗಿ ಕಾರ್ಯನಿರ್ವಹಿಸಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಆಕ್ವಾ ಕೋರ್ ಪ್ರೋಸೆಸರ್ ಮತ್ತು 3GB RAM ಅನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದ್ದು, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ ಬಜೆಟ್ ಸ್ಮಾರ್ಟ್ ಫೋನ್ ನಲ್ಲಿ MIUI 9 ಅನ್ನು ಸಹ ನೋಡಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ ದೊಡ್ಡ ಬ್ಯಾಟರಿ ಮತ್ತು ಕ್ಯಾಮೆರಾವನ್ನು ಅಳಡಿಸಲಾಗಿದೆ.
ಸಿಕ್ರೆಟ್ ಹೆಸರಿನಲ್ಲಿ ಶಿಯೋಮಿ ನಿರ್ಮಿಸಿರುವ ಸ್ಮಾರ್ಟ್‌ಫೋನ್:

ಈಗಾಗಲೇ ಮಾರುಕಟ್ಟೆಗೆ ರೆಡ್ ಮಿ 5 ಸ್ಮಾರ್ಟ್ ಫೋನ್ ಸಹ ಮಾರ್ಚ್ 14 ರಂದು ಲಾಂಚ್ ಆಗಲಿದ್ದು, ಈಗಾಗಲೇ ಚೀನಾದಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಬಜೆಟ್ ಸ್ಮಾರ್ಟ್ ಪೋನ್ ಪ್ರಿಯರನ್ನು ಸೆಳೆಯಲಿದೆ.

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಅಲೆಯೂ ಸಾಕಷ್ಟು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಒಟ್ಟು ಆರು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಶಿಯೋಮಿ ಪರಿಚಯ ಮಾಡಲಿದೆ. ಈ ಹಿನ್ನಲೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಕುರಿತ ಹೆಚ್ಚಿನ ಮಾಹಿತಿಯೂ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

English summary
Xiaomi Berlin; entry-level smartphone with Snapdragon 632 SoC spotted. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot