Home
ಸುದ್ದಿಜಾಲ

ಶಿಯೋಮಿ ಸಂಸ್ಥೆಯಿಂದ ಮಿ ಬ್ಲೂಟೂತ್ ಹೆಡ್‌ಸೆಟ್ ಪ್ರೊ ಲಾಂಚ್‌!

ಚೀನಾ ಮೂಲದ ಜನಪ್ರಿಯ ಕಂಪೆನಿ ಶಿಯೋಮಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ಮಾತ್ರವಲ್ಲ ಇಯರ್‌ಫೋನ್‌ ಮಾರುಕಟ್ಟೆಯಲ್ಲೂ ಸಹ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಮ್ಯೂಸಿಕ್‌ ಅನುಭವನ್ನ ಎಂಜಾಯ್‌ ಮಾಡುತ್ತಾ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಬಳಕೆದಾರರಿಗೆ ಇನ್ನಷ್ಟು ಉತ್ತಮ ನೀಡುವ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಶಿಯೋಮಿ ಈಗಾಗಲೇ ಪರಿಚಯಿಸಿದೆ. ಹಲವು ವೈವಿಧ್ಯಮಯ ಪ್ರಾಡಕ್ಟ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಮಡಿರುವ ಶಿಯೋಮಿ ಇದೀಗ ತನ್ನ ಮತ್ತೊಂದು ಹೊಸ ಬ್ಲೂಟೂತ್‌ ಹೆಡ್‌ಸೆಟ್‌ ಪ್ರೊ ಅನ್ನು ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಬ್ಲೂಟೂತ್ ಹೆಡ್‌ಸೆಟ್ ಪ್ರೊ ಅನ್ನು ಬಿಡುಗಡೆ ಮಾಡಿದೆ. ಇದು "LYEJ06LS" ಮಾಡ್ಯೂಲ್‌ ನಂಬರ್‌ ಅನ್ನು ಹೊಂದಿದ್ದು, ಸಮತೋಲಿತ ಹ್ಯಾಂಗಿಂಗ್ ಇಯರ್ ವಿನ್ಯಾಸವನ್ನ ಒಳಗೊಂಡಿದೆ. ಇದಲ್ಲದೆ ಈ ಬ್ಲೂಟೂತ್‌ ಹೆಡ್‌ಸೆಟ್ ಬಳಕೆದಾರರಿಗೆ ಸಿಂಗಲ್‌ ಚಾರ್ಜಿಂಗ್‌ನಲ್ಲಿ 8 ಗಂಟೆಗಳ ಟಾಕ್ ಟೈಮ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಈ ಬ್ಲೂಟೂತ್ ಹೆಡ್‌ಸೆಟ್‌ ಹೆಚ್ಚುವರಿ ಬ್ಯಾಟರಿ ಅವಧಿಯನ್ನು ಸಹ ಹೊಂದಿದ್ದು, 40 ಗಂಟೆಗಳವರೆಗೆ ಬಾಳಿಕೆ ಬರಲಿದೆ ಎನ್ನಲಾಗಿದೆ. ಇನ್ನು ಈ ಹೆಡ್‌ಸೆಟ್‌ ವಿನ್ಯಾಸ ಹೇಗಿದೆ, ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಬ್ಲೂಟೂತ್ ಹೆಡ್‌ಸೆಟ್

ಶಿಯೋಮಿಯ ಹೊಸ ಮಿ ಬ್ಲೂಟೂತ್ ಹೆಡ್‌ಸೆಟ್ ಪ್ರೊ 12mm ಡೈನಾಮಿಕ್ ಆಡಿಯೋ ಸ್ಪೀಕರ್ ಹೊಂದಿದ್ದು, ಅಲ್ಲದೆ ಈ ಡಿವೈಸ್‌ ಕ್ವಾಲ್ಕಾಮ್ ಕ್ಯೂಸಿಸಿ 3020 ವಾಯರ್‌ಲೆಸ್‌ ಆಡಿಯೊ SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಜೊತೆಗೆ ಈ ಹೆಡ್‌ಸೆಟ್‌ನ ಇಯರ್‌ಬಡ್‌ಗಳನ್ನು 180 ಡಿಗ್ರಿಗಳಷ್ಟು ತಿರುಗಿಸಬಹುದೆಂದು ಕಂಪನಿ ಹೇಳಿದೆ. ಅಲ್ಲದೆ ಎಡ ಮತ್ತು ಬಲ ಕಿವಿಗಳ ನಡುವೆ ಇಯರ್‌ ಬಡ್ಸ್‌ಗಳನ್ನು ಬದಲಾಯಿಸಬಹುದಾಗಿದೆ.

ಶಿಯೋಮಿ

ಸದ್ಯ ಶಿಯೋಮಿ ಬ್ಲೂಟೂತ್ ಹೆಡ್‌ಸೆಟ್ ಪ್ರೊ ಆರಾಮದಾಯಕವಾದ ಫಿಟ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದಾಗಿ ಕೆಲಸ ಮಾಡುವಾಗ ಅಥವಾ ಇತರ ಕಾರ್ಯಗಳನ್ನು ಮಾಡುವಾಗ ನಿಮ್ಮ ಕಿವಿಯಿಂದ ಜಾರಿ ಬೀಳುವುದಿಲ್ಲ. ಇನ್ನು ಈ ಮಿ ಬ್ಲೂಟೂತ್‌ ಹೆಡ್‌ಸೆಟ್‌ ಪ್ರೊ 100mAh ಬ್ಯಾಟರಿಯನ್ನು ಹೊಂದಿದೆ ಮತ್ತು ಚಾರ್ಜಿಂಗ್ ಕೇಸ್ ವೇಗವಾಗಿ ಚಾರ್ಜಿಂಗ್ ಮಾಡಲು ಯುಎಸ್ಬಿ-ಸಿ ಪೋರ್ಟ್ ಹೊಂದಿದೆ. ಅಲ್ಲದೆ ಹೆಡ್‌ಸೆಟ್ ಶಬ್ದವನ್ನು ಕಡಿಮೆ ಮಾಡಲು ಡ್ಯುಯಲ್ ಮೈಕ್ರೊಫೋನ್ ವಿನ್ಯಾಸ ಮತ್ತು ಬ್ಲೂಟೂತ್ 5.0 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಶಿಯೋಮಿ

ಇನ್ನು ಶಿಯೋಮಿಯ ಮಿ ಬ್ಲೂಟೂತ್‌ ಹೆಡ್‌ಸೆಟ್‌ ಪ್ರೊ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಶಿಯೋಮಿ ಮಿ ಬ್ಲೂಟೂತ್ ಹೆಡ್‌ಸೆಟ್ ಪ್ರೊ ಬೆಲೆ CNY199 (2,130 ರೂ)ಗೆ ನಿಗದಿಪಡಿಸಲಾಗಿದೆ. ಅಲ್ಲದೆ ಈ ಪ್ರಾಡಕ್ಟ್‌ ಮಿ ಹೋಮ್ ಮತ್ತು ಶಿಯೋಮಿ ಯೂಪಿನ್ ಸೈಟ್ ಮೂಲಕ ಪಡೆಯಬಹುದು.

Best Mobiles in India

English summary
The Xiaomi Mi Bluetooth Headset Pro price is set at 199, which is around Rs 2,130 in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+