ಶಿಯೋಮಿ ಫೋನ್‌ ಬೆಲೆ ಕಡಿಮೆ ಏಕೆ ಗೊತ್ತಾ..? ಅಧಿಕೃತವಾಗಿ ಶಿಯೋಮಿ ಬಿಚ್ಚಿಟ್ಟ ಸತ್ಯ.!

|

ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಚೀನಾ ಮೂಲಕದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಶಿಯೋಮಿ ಎಂದಿಗೂ ಮಾರುಕಟ್ಟೆಗೆ ರೂ.50000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವುದಿಲ್ಲ ಎಂದಿದೆ. ಬಳಕೆದಾರರ ಬಜೆಟ್‌ಗೆ ಮ್ಯಾಚ್ ಆಗುವ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ಮಾರಾಟ ಮಾಡುವುದಾಗಿ ತಿಳಿಸಿದೆ. ಪೊಕೊ F1 ಮಾದರಿಯ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದರೂ ಸಹ ಅದರ ಬೆಲೆಯಲ್ಲಿ ಹೆಚ್ಚು ಮಾಡುವುದಿಲ್ಲ ಎಂದಿದೆ.

ಶಿಯೋಮಿ ಫೋನ್‌ ಬೆಲೆ ಕಡಿಮೆ ಏಕೆ ಗೊತ್ತಾ..? ಅಧಿಕೃತವಾಗಿ ಶಿಯೋಮಿ ಬಿಚ್ಚಿಟ್ಟ ಸತ್ಯ

ಈ ಕುರಿತು ಇಂಡಿಯಾ ಟುಡೇ ಯೊಂದಿಗೆ ಮಾತನಾಡಿರುವ ಭಾರತದ ಶಿಯೋಮಿ ವ್ಯವಸ್ಥಾಪಕ ಮನು ಜೈನ್, ಶಿಯೋಮಿ ಮಾರುಕಟ್ಟೆಯಲ್ಲಿ ರೂ.50000ದ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಶಿಯೋಮಿ ಹೆಚ್ಚಿನ ಲಾಭಕ್ಕಾಗಿ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಬಳಕೆದಾರರಿಗೆ ಬೆಂಬಲವನ್ನು ಪಡೆಯುವ ಸಲುವಾಗಿ ಸೇವೆಯನ್ನು ನೀಡುತ್ತಿದೆ ಎಂದಿದ್ದಾರೆ. ಬೇರೆ ಸ್ಮಾರ್ಟ್‌ಫೋನ್‌ ಕಂಪನಿಗಳು ಹೆಚ್ಚಿನ ಲಾಭದ ಮಾರ್ಜಿನ್ ಇಟ್ಟುಕೊಂಡು ಸ್ಮಾರ್ಟ್‌ಫೋನ್ ಅನ್ನು ರೂ.50000ಕ್ಕಿಂತ ಹೆಚ್ಚಿನ ಮಾರಾಟ ಮಾಡುತ್ತಾರೆ ಎನ್ನಲಾಗಿದೆ.

ಹೆಚ್ಚಿನ ಲಾಭಕ್ಕೆ ಒಪ್ಪದ ಕಂಪನಿ:

ಹೆಚ್ಚಿನ ಲಾಭಕ್ಕೆ ಒಪ್ಪದ ಕಂಪನಿ:

ರೂ.50000ಕ್ಕೆ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಕಂಪನಿಯ ಬೋರ್ಡ್ ಒಪ್ಪುವುದಿಲ್ಲ ಎಂದು ಮನು ಜೈನ್ ತಿಳಿಸಿದ್ದು, ಕಂಪನಿಯ ಬೋರ್ಡ್ ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆದುಕೊಳ್ಳಲು ಹೆಚ್ಚಿನ ಬೆಲೆಗೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲು ಕಂಪನಿಯು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಬೇರೆ ಕಂಪನಿಯಂತೆ ಅಲ್ಲ:

ಬೇರೆ ಕಂಪನಿಯಂತೆ ಅಲ್ಲ:

ಶಿಯೋಮಿ ಸದ್ಯ ಮಾರುಕಟ್ಟೆಯಲ್ಲಿ ಇರುವ ಇತರೆ ಕಂಪನಿಗಳಂತೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿರುವ ಮನು ಜೈನ್, ಕೇವಲ ಲಾಭಕ್ಕಾಗಿ ಮಾರುಕಟ್ಟೆಯಲ್ಲಿ ನಾವು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ತಂತ್ರಜ್ಞಾನವು ಲಭ್ಯವಾಗುವ ಉದ್ದೇಶದಿಂದ ಎಂದಿದ್ದಾರೆ.

ಕೇವಲ 5% ಲಾಭ:

ಕೇವಲ 5% ಲಾಭ:

ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಕೇವಲ 5% ಲಾಭದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದಿರುವ ಮನುಜೈನ್‌, ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಹೊಂದುವುದಿಲ್ಲ. ನಮ್ಮ ಬೋರ್ಡ್ ಇದಕ್ಕಿಂತ ಹೆಚ್ಚಿನ ಲಾಭಕ್ಕೆ ಕಾರ್ಯನಿರ್ವಹಿಸುವುದನ್ನು ವಿರೋಧಿಸುತ್ತದೆ ಎಂದಿದ್ದಾರೆ.

ಇದೇ ಮಾದರಿ:

ಇದೇ ಮಾದರಿ:

ಇದೇ ಮಾದರಿಯಲ್ಲಿ ಪೊಕೊ ಪೋನ್ ಅನ್ನು ಲಾಂಚ್ ಮಾಡಲಾಗಿದೆ. ಇದೇ ಮಾದರಿಯ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್ಫೋನ್‌ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ, ಆದರೆ ರೂ.30000ದ ಒಳಗೆ 8 GB RAM - 256 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್‌ಫೋನ್‌ ಅನ್ನು ಶಿಯೋಮಿ ಬಿಟ್ಟರೇ ಇನ್ಯಾರಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಲಾಭ ಕೇವಲ 5% ಎಂದಿದ್ದಾರೆ.

ಹೆಚ್ಚಿನ ಲಾಭ ಗ್ರಾಹಕರಿಗೆ:

ಹೆಚ್ಚಿನ ಲಾಭ ಗ್ರಾಹಕರಿಗೆ:

ಶಿಯೋಮಿಗೆ ತಾನು ಪಡೆದುಕೊಂಡ ಹೆಚ್ಚಿನ ಪ್ರಮಾಣದ ಲಾಭವನ್ನು ಗ್ರಾಹಕರಿಗೆ ಹಿಂತಿರುಗಿಸುವ ಕಾರ್ಯವನ್ನು ಮಾಡುತ್ತಿದೆ. ಈ ಹಿಂದೆಯೂ ಮಾಡಿದೆ. ನಿರ್ಮಾಣದ ಕಾರ್ಯಕ್ಕೆ ವೆಚ್ಚವಾಗುವುದನ್ನು ಮಾತ್ರವೇ ಲಾಭವಾಗಿ ಪರ್ವತಿಸಲಾಗುತ್ತಿದೆ. ಇದರಿಂದಾಗಿಯೇ ಶಿಯೋಮಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿದೆ.

ಮಾರುಕಟ್ಟೆಯಲ್ಲಿ:

ಮಾರುಕಟ್ಟೆಯಲ್ಲಿ:

ಸದ್ಯ ಮಾರುಕಟ್ಟೆಯಲ್ಲಿ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್, 6 GB RAM ಮತ್ತು 64 GB ಇಂಟರ್ನಲ್ ಜೊತೆಗೆ ಡ್ಯುಯಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಕಡಮೆ ಎಂದರೆ ರೂ.36000ಕ್ಕೆ ಮಾರಾಟವಾಗುತ್ತಿದೆ. ಆದರೆ ಶಿಯೋಮಿ ಇದನ್ನು ರೂ.19990ಕ್ಕೆ ನೀಡಿದೆ. ಇದಕ್ಕೆ ಕಾರಣ ಎಂದರೆ ಶಿಯೋಮಿ ಲಾಭದ ಪ್ರಮಾಣ ಕಡಿಮೆ ಇರುವುದು.

Best Mobiles in India

English summary
Xiaomi cannot sell a Rs 50,000 phone because its board will not allow outrageous profit. to know more visit kannada.gizbot.bot

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X