Home
ಸುದ್ದಿಜಾಲ

ಮೇ 22 ರಂದು Xiaomi Civi 5 Pro ಬಿಡುಗಡೆ: ಕೇವಲ 1.6mm ಅಲ್ಟ್ರಾ-ಬೆಜೆಲ್!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ಕಂಪೆನಿಯ ಬಹುನಿರೀಕ್ಷಿತ 'Xiaomi Civi 5 Pro' ಸ್ಮಾರ್ಟ್‌ಫೋನ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. Xiaomi ಕಂಪನಿಯ 15 ನೇ ವಾರ್ಷಿಕೋತ್ಸವದ ಅಂಗವಾಗಿ, ಇದೇ ಮೇ 22 ರಂದು ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4:30) ನಡೆಯಲಿರುವ ವಿಶೇಷ ಬಿಡುಗಡೆ ಸಮಾರಂಭದಲ್ಲಿ Xiaomi Civi 5 Pro ಸ್ಮಾರ್ಟ್‌ಫೋನ್ ಬಿಡುಗಡೆಗೊಳ್ಳುವ ಸಾಧ್ಯತೆ ಇದ್ದು, ಈ ಕಾರ್ಯಕ್ರಮದಲ್ಲಿ Xiaomi ತನ್ನ ಹೊಸ "ಕ್ಸುವಾಂಜಿ O1" ಅಥವಾ XRING O1 ಮೊಬೈಲ್ ಚಿಪ್‌ಸೆಟ್, Xiaomi 15s Pro ಸ್ಮಾರ್ಟ್‌ಫೋನ್, Xiaomi Pad 7 ಅಲ್ಟ್ರಾ ಟ್ಯಾಬ್ಲೆಟ್ ಮತ್ತು ಮೊದಲ SUV Xiaomi YU7 ಅಂತಹ ಸಾಧನಗಳು ಸಹ ಅನಾವರಣಗೊಳಿಸಲಿದೆ. ಇವುಗಳಲ್ಲಿ Xiaomi Civi 5 Pro ಸ್ಮಾರ್ಟ್‌ಫೋನ್ ಎಲ್ಲರ ಗಮನಸೆಳೆದಿದೆ.

ಹೌದು, ಬಿಡುಗಡೆಗೂ ಮುನ್ನವೇ Xiaomi ತನ್ನ ಮುಂಬರುವ Xiaomi Civi 5 Pro ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ Xiaomi ಪೂರ್ವ-ಕಾಯ್ದಿರಿಸುವಿಕೆಯು ಪ್ರಾರಂಭವಾಗಿದೆ. Weibo ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ Xiaomi Civi 5 Pro ಫೋನ್ ಆಕರ್ಷಕವಾದ ನೆಬ್ಯುಲಾ ಪರ್ಪಲ್ ಮತ್ತು ಸಕುರಾ ಪಿಂಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳು ಸಹ ಇರಲಿವೆ. ವಿನ್ಯಾಸದ ದೃಷ್ಟಿಯಿಂದಲೂ ಈ ಫೋನ್ ಗಮನ ಸೆಳೆಯುವಂತಿದೆ. ಏಕೆಂದರೆ, ಕೇವಲ 1.6mm ಅಲ್ಟ್ರಾ-ಬೆಜೆಲ್ ಅನ್ನು ಈ ಫೋನ್ ಹೊಂದಿದೆ. ಇದರ ಲೋಹದ ಮಧ್ಯದ ಫ್ರೇಮ್ ಕೇವಲ 7.45mm ದಪ್ಪವಿದ್ದು, ಫೋನ್‌ಗೆ ಸೊಗಸಾದ ನೋಟವನ್ನು ನೀಡುತ್ತಿದೆ.

ಮೇ 22 ರಂದು Xiaomi Civi 5 Pro ಬಿಡುಗಡೆ: ಕೇವಲ 1.6mm ಅಲ್ಟ್ರಾ-ಬೆಜೆಲ್!

Xiaomi Civi 5 Pro ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,

Xiaomi Civi 5 Pro ಸ್ಮಾರ್ಟ್‌ಫೋನ್ ಅತ್ಯಾಕರ್ಷಕ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.55-ಇಂಚಿನ 1.5K OLED ಪರದೆಯನ್ನು ಒಳಗೊಂಡಿದೆ. ಉತ್ತಮ ವೀಕ್ಷಣೆಯ ಅನುಭವವನ್ನು ಖಚಿತಪಡಿ ಈ ಡಿಸ್‌ಪ್ಲೆಯು 3,200 nits ವರೆಗಿನ ಗರಿಷ್ಠ ಹೊಳಪನ್ನು ನೀಡುತ್ತದೆ, ಜೊತೆಗೆ HDR10+, HDR ವಿವಿಡ್, ಡಾಲ್ಬಿ ವಿಷನ್, TÜV ರೈನ್‌ಲ್ಯಾಂಡ್‌ನಿಂದ ಟ್ರಿಪಲ್ ಐ ಪ್ರಮಾಣೀಕರಣವನ್ನು ಪಡೆದಿದೆ. ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, Xiaomi Civi 5 Pro ಶಕ್ತಿಯುತ ಸ್ನಾಪ್‌ಡ್ರಾಗನ್ 8s Gen 4 SoC ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಇದು ವೇಗದ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ. ಇದರೊಂದಿಗೆ, ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ನೀಡುವ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಒಳಗೊಂಡಿದೆ.

ಕ್ಯಾಮೆರಾ ವಿಭಾಗದಲ್ಲಿಯೂ Xiaomi Civi 5 Pro ಸ್ಮಾರ್ಟ್‌ಫೋನ್ ಗಮನಾರ್ಹವಾದ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಇದು ಲೈಕಾ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಫ್ಲೋಟಿಂಗ್ ಟೆಲಿಫೋಟೋ ಲೆನ್ಸ್ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ ಆಟೋಫೋಕಸ್ ಮತ್ತು f/2.0 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಒಟ್ಟಾರೆಯಾಗಿ, Xiaomi Civi 5 Pro ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಮೇ 22 ರಂದು ನಡೆಯಲಿರುವ ಬಿಡುಗಡೆ ಸಮಾರಂಭದಲ್ಲಿ ಇದರ ಸಂಪೂರ್ಣ ವಿವರಗಳು ಮತ್ತು ಬೆಲೆಯ ಕುರಿತು ಮಾಹಿತಿ ಲಭ್ಯವಾಗಲಿದೆ.

Best Mobiles in India

English summary
Xiaomi Civi 5 Pro is expected to be released in China in May, with a likely unveiling on May 22 during Xiaomi's 15th anniversary launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+