Home
ಸುದ್ದಿಜಾಲ

ಶೀಘ್ರದಲ್ಲೇ ಶಿಯೋಮಿಯ ವಾಯರ್‌ಲೆಸ್‌ ಚಾರ್ಜಿಂಗ್‌ ಪವರ್‌ ಬ್ಯಾಂಕ್‌ ಲಾಂಚ್‌!

ಟೆಕ್‌ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್‌ಫೊನ್‌ಗಳಿವೆ. ವೈವಿಧ್ಯ ಬಗೆಯ mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ನ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಆದರೂ ಪ್ರವಾಸ, ದೂರದ ಪ್ರಯಾಣ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳ ಚಾರ್ಜಿಂಗ್‌ಗೆ ಪವರ್‌ ಬ್ಯಾಂಕ್‌ಗಳು ಉತ್ತಮ. ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವು ಕಂಪೆನೆಗಳು ಸ್ಮಾರ್ಟ್‌ಫೋನ್‌ಗಳ ಪವರ್‌ ದಾಹ ತೀರಿಸುವ ಹಲವು ಬಗೆಯ ಪವರ್‌ಬ್ಯಾಂಕ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಶಿಯೋಮಿ ಕಂಪೆನಿ ಕೂಡ ಒಂದಾಗಿದ್ದು, ಇದೀಗ ಮತ್ತೊಂದು ಹೊಸ ಮಾದರಿಯ ಪವರ್‌ ಬ್ಯಾಂಕ್‌ ಪರಿಚಯಿಸಲು ಮುಂದಾಗಿದೆ.

ಹೌದು

ಹೌದು, ಚೀನಾ ಮೂಲದ ಜನ್ರಪಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಈಗಾಗ್ಲೆ ಹಲವು ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ವಾಯರ್‌ಲೆಸ್‌ ಚಾರ್ಜಿಂಗ್‌ ಪವರ್‌ ಬ್ಯಾಂಕ್‌ ಅನ್ನು ಲಾಂಚ್‌ ಮಾಡಲು ಪ್ಲ್ಯಾನ್‌ ರೂಪಿಸಿದೆ. ಈ ಸಂಬಂಧ ಟ್ವಿಟ್ಟರ್‌ಲ್ಲಿ 'ಕಟ್‌ ಕಾರ್ಡ್‌' ಎಂಬ ಟ್ಯಾಗ್‌ಲೈನ್‌ ಇರುವ ವಿಡಿಯೋ ಶೇರ್‌ ಮಾಡಿದೆ. ಅಲ್ಲದೆ ಈ ಪವರ್‌ ಬ್ಯಾಂಕ್‌ ಇದೇ ಮಾರ್ಚ್‌ 16 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗಿದೆ.

ಶಿಯೋಮಿ

ಸದ್ಯ ಶಿಯೋಮಿ ಕಂಪೆನಿ ಬಿಡುಗಡೆ ಮಾಡಲಿರುವ ಪವರ್‌ ಬ್ಯಾಂಕ್‌ ವಾಯರ್‌ ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನ ಹೊಂದಿದೆ. ಈಗಾಗ್ಲೆ ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಮಿ 10 ಆವೃತ್ತಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದು, ಇದು ವಾಯರ್‌ಲೆಸ್‌ ಚಾರ್ಜಿಂಗ್‌ ಅನ್ನು ಬವೆಂಬಲಿಸಲಿದೆ ಎನ್ನಲಾಗಿದೆ. ಇದಕ್ಕೆ ಅನುಕೂಲಕರವಾಗಿ ಈ ಪವರ್ ಬ್ಯಾಂಕ್‌ ಅನ್ನು ಶಿಯೋಮಿ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಲಾಗ್ತಿದೆ.

ನಿರೀಕ್ಷಿತ

ಇನ್ನು ಬಹು ನಿರೀಕ್ಷಿತ ಈ ಹೊಸ ವಾಯರ್‌ಲೆಸ್‌ ಚಾರ್ಜಿಂಗ್ ಪವರ್ ಬ್ಯಾಂಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ. ಆದರೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಪವರ್‌ ಬ್ಯಾಂಕ್‌ ಡ್ಯುಯಲ್-ಇನ್‌ಪುಟ್ ಮತ್ತು ಡ್ಯುಯಲ್- ಔಟ್‌ಪುಟ್‌ ಫೀಚರ್ಸ್‌ಗಳನ್ನ ಹೊಂದಿರುವ ಸಾಧ್ಯತೆ ಇದೆ. ಜೊತೆಗೆ ಇದು ಇದರ ವಾಐರ್‌ ಟುವೇ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ಗೆ ಬೇಕಾದ ಪವರ್‌ ವೇಗವಾಗಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಟೆಕ್‌

ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ ಅನ್ನೊ ಸುದ್ದಿಯಿದೆ. ಇದರ ನಡುವೆ ಈ ಪವರ್‌ ಬ್ಯಾಂಕ್‌ ಬಿಡುಗಡೆಯಾಗುತ್ತಿರೋದು ಶಿಯೋಮಿ ಕಂಪೆನಿ ಶೀಘ್ರದಲ್ಲಿಯೇ ವಾಯರ್‌ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆಯಾ ಅನ್ನೊ ವಂದತಿಗೆ ಕಾರಣವಾಗಿದೆ. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ ಟ್ವಿಟ್ಟರ್‌ನಲ್ಲಿನ ಕಟ್‌ ಕಾರ್ಡ್‌ ಟ್ಯಾಗ್‌ಲೈನ್‌ ಇಂತಹ ಪ್ರಶ್ನೆ ಮೂಡಲು ಕಾರಣವಾಗಿದೆ.

ಶಿಯೋಮಿ

ಇನ್ನು ಶಿಯೋಮಿ ಈಗಾಗ್ಲೆ ಹಲವು ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ಪರಿಚಯಿಸಿದೆ. ಇವುಗಳಲ್ಲಿ 10,000mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ ಡ್ಯುಯಲ್-ಇನ್‌ಪುಟ್ ಮತ್ತು ಡ್ಯುಯಲ್- ಔಟ್‌ಪುಟ್‌ ಸಾಮರ್ಥ್ಯ ಹೊಂದಿದ್ದು. 10W ವೇಗದ ಸಾಮರ್ಥ್ಯದ ಟುವೇ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದೇ ರೀತಿ 18W ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯ ಹೊಂದಿರುವ 20,000mah ಪವರ್ ಬ್ಯಾಂಕ್ ಅನ್ನು ಸಹ ಕಂಪೆನಿ ಪರಿಚಯಿಸಿದೆ. ಇನ್ನು 10,000 mAh ಸಾಮರ್ಥ್ಯದ ಪವರ್ ಬ್ಯಾಂಕ್ 799 ರೂ, ಬೆಲೆ ಹೊಂದಿದ್ದರೆ, 20,000 mAh ಪವರ್ ಬ್ಯಾಂಕ್ 1,499 ರೂಗಳಿಗೆ ಲಭ್ಯವಿದೆ.

Best Mobiles in India

English summary
Xiaomi shared a video using the tag "CutTheCord" hyping up fans to wait for a product that will leave them with "one less wire to worry about".to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+