ಭಾರತದ ಮೊಬೈಲ್ ಲೋಕಕ್ಕೆ ನಡುಕ!!..ಶಿಯೋಮಿಯ ಹೊಸ 'ದೇಶ್ ಕಾ ಸ್ಮಾರ್ಟ್‌ಫೋನ್' ಲಾಂಚ್!!
ಶಿಯೋಮಿಯ ಬಹುನಿರೀಕ್ಷಿತ 'ದೇಶ್ ಕಾ ಸ್ಮಾರ್ಟ್‌ಫೋನ್' ಯಾವುದು ಎಂದು ಕೊನೆಗೂ ಬಹಿರಂಗವಾಗಿದೆ.!
ಶಿಯೋಮಿಯ ಬಹುನಿರೀಕ್ಷಿತ 'ದೇಶ್ ಕಾ ಸ್ಮಾರ್ಟ್‌ಫೋನ್' ಯಾವುದು ಎಂದು ಕೊನೆಗೂ ಬಹಿರಂಗವಾಗಿದೆ.! ಚೀನಾದಲ್ಲಿ ಲಾಂಚ್ ಆಗಿದ್ದ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅನ್ನೇ ಶಿಯೋಮಿ ದೇಶ್ ಕಾ ಸ್ಮಾರ್ಟ್‌ಫೋನ್ ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಪ್ರಚಾರ ನಡೆಸಿ ಇಂದು ಅತ್ಯಂತ ಕಡಿಮೆ ಬೆಲೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.!!
ನಿರೀಕ್ಷೆಯಂತೆಯೇ ರೆಡ್‌ಮಿ 5A ಫೋನ್ ಶಿಯೋಮಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಭಾರತದಲ್ಲಿ ಕೇವಲ 4,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ.! ಹಾಗಾದರೆ, ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಮತ್ತು ಮಾರಾಟ ಯಾವಾಗ ಶುರು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ?!!
'ದೇಶ್ ಕಾ ಸ್ಮಾರ್ಟ್‌ಫೋನ್' ಹೆಸರಿನಲ್ಲಿ ಲಾಂಚ್ ಆಗಿರುವ ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ 720*1280 ಪಿಕ್ಸೆಲ್ ರೆಸ್ಯುಲೇಷನ್ ಹೊಂದಿರುವ 5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ.!! ಆದರೆ, ರೆಡ್‌ಮಿ 5A ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ಆಗಿರುವುದರಿಂದ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿಲ್ಲ.!!

ಪ್ರೊಸೆಸರ್ ಮತ್ತು ಓಎಸ್!!
ಶಿಯೋಮಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ಈ ಮೊಬೈಲ್‌ನಲ್ಲಿ ಸಾಧಾರಣ ಎನ್ನಬಹುದಾದ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1 ಮೂಲಕ ಕಾರ್ಯನಿರ್ವಹಣೆ ನೀಡಲಿದೆ.!!


RAM ಮತ್ತು ಮೆಮೊರಿ!!
2GB RAM ಮತ್ತು 16GB ಮೆಮೊರಿ ಹಾಗೂ 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಎರಡು ಆವೃತ್ತಿಯಲ್ಲಿ ಶಿಯೋಮಿ 5A ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 256GB ವರೆಗೂ ಹೆಚ್ಚಿಸಬಹುದಾದ ಅವಕಾಶ ಸ್ಮಾರ್ಟ್‌ಫೋನ್‌ನಲ್ಲಿದೆ.

ಬ್ಯಾಟರಿ ಮತ್ತು ಇತರ ಫೀಚರ್ಸ್?
ಶಿಯೋಮಿ ಕಂಪೆನಿ ಹೇಳಿಕೊಂಡಂತೆ ರೆಡ್‌ಮಿ 5A ಫೋನ್ 3000mAh ಬ್ಯಾಟರಿಯನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿರದ ಈ ಫೋನ್ ಡ್ಯುಯಲ್ ಸಿಮ್, ಬ್ಲೂ ಟೂತ್, 4G ವೋಲ್ಟ್ ಸಪೋರ್ಟ್ ಹಾಗೂ ಯುಎಸ್‌ಬಿ ಒಟಿಜಿ ಯಂತಹ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ.!!

ಮಾರಾಟ ಯಾವಾಗ ಶುರು?
ಅತ್ಯಂತ ಕಡಿಮೆ ಬೆಲೆಗೆ ರಿಲೀಸ್ ಆಗಿ ಭಾರತದ ಮೊಬೈಲ್ ಲೋಕಕ್ಕೆ ನಡುಕ ಹುಟ್ಟಿಸಿರುವ ಶಿಯೋಮಿ ರೆಡ್‌ಮಿ 5A ಫೋನ್ ಡಿಸೆಂಬರ್ 7 ರಿಂದ ಮಾರಾಟಕ್ಕಿರಲಿದೆ. 2GB RAM ಮತ್ತು 16GB ಮೆಮೊರಿ ಫೋನ್ ಬೆಲೆ 4,999 ರೂ. ಆದರೆ, 3GB RAM ಮತ್ತು 32GB ಬೆಲೆ 6,999 ರೂಪಾಯಿಗಳಾಗಿವೆ.!!


Click it and Unblock the Notifications








