ಚೀನಾಗಿಂತ ಭಾರತದಲ್ಲಿ 'ರೆಡ್ಮಿ ಕೆ 20' ಬೆಲೆ ಏಕೆ ಹೆಚ್ಚಾಯ್ತು?. ಶಿಯೋಮಿಯ 3 ಕಾರಣಗಳು!
ಭಾರತದಲ್ಲಿ ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ20ಪ್ರೊ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾದ ನಂತರ ಶಿಯೋಮಿ ಮೊಬೈಲ್ ಪ್ರಿಯರು ಶಿಯೋಮಿ ಕಂಪೆನಿ ಮೇಲೆ ಕೋಪಗೊಂಡಿದ್ದಾರೆ.! ಚೀನಾಗಿಂತಲೂ ಭಾರತದಲ್ಲಿ ರೆಡ್ಮಿ ಕೆ 20 ಸ್ಮಾರ್ಟ್‌ಪೋನ್‌ಗಳ ಬೆಲೆ ಏಕೆ ಹೆಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಿಯೋಮಿ ಮೊಬೈಲ್ ಪ್ರಿಯರು, ಇದು ಶಿಯೋಮಿ ಅಭಿಮಾನಿಗಳಿಗೆ ಮಾಡಿದ ಮೋಸ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಅಭಿಮಾನಿಗಳ ಮನವೊಲಿಸಲು ಸಫಲವಾಗಿದ್ದಾರೆ.

ಹೌದು, ಚೀನಾದಲ್ಲಿ, ರೆಡ್ಮಿ ಕೆ 20 ಸಿಎನ್‌ವೈ 1,999 (20,000 ರೂ. ಅಂದಾಜು) ನಿಂದ ಪ್ರಾರಂಭವಾಗುತ್ತದೆ. ರೆಡ್‌ಮಿ ಕೆ 20 ಪ್ರೊ ಸಿಎನ್‌ವೈ 2,499 (ಅಂದಾಜು ರೂ. 25,000) ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಆದರೆ, ಭಾರತದಲ್ಲಿ ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನ ಬೆಲೆಯು 6 ಜಿಬಿ RAM + 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 27,999 ರೂ. ಇದ್ದರೆ, ಇದರ 8 ಜಿಬಿ RAM + 256 ಜಿಬಿ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ ಬೆಲೆ ರೂ. 30,999 ರೂ.ಗಳಾಗಿದೆ. ಇದರಿಂದ ಅಭಿಮಾನಿಗಗಳು ಶಿಯೋಮಿ ಮೇಲೆ ಸಿಟ್ಟಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಿಯೋಮಿ ಕಂಪೆನಿ ನಮಗೆ ಮೋಸ ಮಾಡಿದೆ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಈ ಸ್ಮಾರ್ಟ್‌ಫೋನ್ ಮೂಲಕ ಶಿಯೋಮಿ ನಮ್ಮನ್ನು ಮೂರ್ಖ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ರೆಡ್‌ಮಿ ಕೆ 20 ಸರಣಿಯ ಬೆಲೆ ಏಕೆ ಹೆಚ್ಚಾಗಿದೆ ಎಂಬುದನ್ನು ತಿಳಿಸಿದ್ದಾರೆ. ಮನುಕುಮಾರ್ ಜೈನ್ ಅವರು ಹೇಳಿದಂತೆ ಚೀನಾಗಿಂತಲೂ ಭಾರತದಲ್ಲಿ 'ರೆಡ್ಮಿ ಕೆ 20' ಬೆಲೆ ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕೇವಲ ಮೂರು ಪ್ರತಿಶತದಷ್ಟು ವ್ಯತ್ಯಾಸ!
ಚೀನಾ ಮತ್ತು ಭಾರತದಲ್ಲಿ ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ20ಪ್ರೊ ಸ್ಮಾರ್ಟ್‌ಪೋನ್‌ಗಳ ಬೆಲೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ, ಮನುಕುಮಾರ್ ಜೈನ್ ಅವರು ಎರಡೂ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೊಬೈಲ್ ಬೆಲೆಗಳು ಕೇವಲ ಮೂರು ಪ್ರತಿಶತದಷ್ಟು ವ್ಯತ್ಯಾಸ ಹೊಂದಿವೆ ಎಂದು ತಿಳಿಸಿದ್ದಾರೆ. ಭಾರತದ ಬೆಲೆಗಳಲ್ಲಿ ಈ ಮೂರು ಪ್ರತಿಶತದ ವ್ಯತ್ಯಾಸ ಹೆಚ್ಚಾಗಿರುವುದಕ್ಕೆ ಕಾರಣ ನೀಡಿರುವ ಅವರು, ಬೆಲೆ ಹೆಚ್ಚಾಗಲು ಕಾರಣವನ್ನು ಉಂಟುಮಾಡಿದ ಮೂರು ವಿಷಯಗಳನ್ನು ಹೇಳಿ ಗಮನಸೆಳೆದಿದ್ದಾರೆ.

ಬೆಲೆ ಏಕೆ ಹೆಚ್ಚಾಯ್ತು? ಕಾರಣ 1
ಮೊದಲನೆಯದಾಗಿ, ಚೀನಾದಲ್ಲಿ ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನ ಉನ್ನತ ರೂಪಾಂತರವೆಂದರೆ 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸಂಗ್ರಹದೊಂದಿಗೆ ಬರುತ್ತದೆ. ಆದರೆ, ಭಾರತದಲ್ಲಿ 6ಜಿಬಿ RAM + 128 ಜಿಬಿ ಸ್ಟೋರೇಜ್ ಮಾದರಿಯಿಂದ ಆರಂಭಿಸಲಾಗಿದೆ. ಇದರಿಂದ ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು ಸ್ವಲ್ಪ ಹೆಚ್ಚಾಗಿದೆ. ಇದೊಂದೇ ಕಾರಣವಲ್ಲದೇ, ಮತ್ತೆರಡು ಮುಖ್ಯ ಅಂಶಗಳು ಕೂಡ ಸ್ಮಾರ್ಟ್‌ಫೋನ್ ಬೆಲೆ ಹೆಚ್ಚಾಗುವಂತೆ ಮಾಡಿವೆ ಎಂದು ಮುನುಕುಮಾರ್ ಅವರು ತಿಳಿಸಿದ್ದಾರೆ.

ಬೆಲೆ ಏಕೆ ಹೆಚ್ಚಾಯ್ತು? ಕಾರಣ 2
ಎರಡನೆಯದಾಗಿ, ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊ "ಭಾರತದಲ್ಲಿ ತಯಾರಾದ ಅತ್ಯಂತ ಸಂಕೀರ್ಣವಾದ ಸ್ಮಾರ್ಟ್ಫೋನ್‌ಗಳಾಗಿವೆ. ಹಾಗಾಗಿ, ಶಿಯೋಮಿ ತನ್ನ ಉತ್ಪಾದನಾ ಘಟಕದಲ್ಲಿ ತಂತ್ರಜ್ಞಾನವನ್ನು ನವೀಕರಿಸಬೇಕಾಯಿತು ಎಂದು ಮನುಕುಮಾರ್ ಅವರು ಹೇಳಿದ್ದಾರೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿ ಸಂಕೀರ್ಣವಾದ ಪ್ರಮುಖ ಸಾಧನಗಳನ್ನು ತಯಾರಿಸುವುದಿಲ್ಲ, ಇದು ದೇಶದಲ್ಲಿ ಫೋನ್‌ಗಳ ಬೆಲೆಯನ್ನು ಶೇಕಡಾ 20 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಬೆಲೆ ಏಕೆ ಹೆಚ್ಚಾಯ್ತು? ಕಾರಣ 3
ಮೂರನೆಯದಾಗಿ, ರೆಡ್ಮಿ ಕೆ 20 ಸ್ಮಾರ್ಟ್‌ಫೋನಿನ ಮೌಲ್ಯದ ಶೇ.65 ಪ್ರತಿಶತದಷ್ಟು ಬಿಡಿಭಾಗಗಳು ಸ್ಥಳೀಯ ಮೂಲವಾಗಿದೆ ಎಂದು ಜೈನ್ ಹೇಳಿದ್ದಾರೆ. ಇನ್ನುಳಿದ 35 ಪ್ರತಿಶತವು ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಆಮದು ಮಾಡಿಕೊಳ್ಳಬೇಕಾಗಿತ್ತು ಮತ್ತು ಸಂಕೀರ್ಣ ಭಾಗಗಳಿಗೆ ತೆರಿಗೆ ವಿಧಿಸಬೇಕಾಗಿತ್ತು. ಇನ್ನು ಗಾಜಿನ ದೇಹವನ್ನು ಪ್ಲಾಸ್ಟಿಕ್‌ನಿಂದ ಬದಲಿಸುವ ಮೂಲಕ ಬೆಲೆ ವ್ಯತ್ಯಾಸವನ್ನು ಪೂರೈಸಬಹುದಿತ್ತು. ಆದರೆ, ಅದು ಬೇಡವೆಂದು ಶಿಯೋಮಿ ನಿರ್ಧರಿಸಿತು ಎಂದು ತಿಳಿಸಿದ್ದಾರೆ.

ಇನ್ನೂ ಆರು ತಿಂಗಳು ಕಾಯಬೇಕಿತ್ತು
ರೆಡ್‌ಮಿ ಕೆ 20 ಸರಣಿಯ ಬೆಲೆ ಏಕೆ ಹೆಚ್ಚು ಎಂಬುದರ ಕುರಿತು ಮಾತನಾಡುತ್ತಾ, ಜೈನ್ ಸ್ಮಾರ್ಟ್‌ಫೋನ್‌ಗಳ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಹಿಂದಿನ ತಲೆಮಾರಿನ ಚಿಪ್‌ಸೆಟ್ ಸಾಧನಗಳಿಗಿಂತ ಈ ಎರಡೂ ಸಾಧನಗಳು ಹೆಚ್ಚು ವೇಗವಾಗಿವೆ. ರೆಡ್‌ಮಿ ಕೆ 20 ಪ್ರೊ 45 ಪ್ರತಿಶತ ವೇಗವಾಗಿದೆ, ಮತ್ತು ರೆಡ್ಮಿ ಕೆ 20 ಶೇಕಡಾ 40 ರಷ್ಟು ವೇಗವಾಗಿದೆ. ಇನ್ನು ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಿದರೆ ಫೋನ್ ಬಿಡುಗಡೆ ಮಾಡಲು ಇನ್ನೂ ಆರು ತಿಂಗಳು ಕಾಯಬೇಕಿತ್ತು ಎಂದು ಅವರುಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications








