ಶಿಯೋಮಿಯಿಂದ ಭಾರೀ ಮೋಸ!..ಇಂಗ್ಲೆಂಡ್‌ನಲ್ಲಿ ಉಗಿಸಿಕೊಂಡು ಕ್ಷಮೆ ಕೇಳಿದ ಕಂಪೆನಿ!!

|

ಮೊಬೈಲ್ ಕಂಪೆನಿಗಳು ತಮ್ಮ ಮೊಬೈಲ್‌ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು 1 ರೂ. ಮೊಬೈಲ್ ಫ್ಲಾಶ್‌ಸೇಲ್ ಅನ್ನು ಆಯೋಜಿಸುತ್ತವೆ. ಅದೃಷ್ಟವಂತ ಗ್ರಾಹಕರು ಇಂತಹ ನಿರ್ದಿಷ್ಟ ಸಮಯದಲ್ಲಿ ಕೇವಲ 1 ರೂ.ಗೆ ಮೊಬೈಲ್ ಖರೀದಿಸಬಹುದು ಎಂದು ಹೇಳುತ್ತವೆ. ಆ ಫ್ಲಾಶ್‌ಸೇಲ್ ಆರಂಭವಾಗಿ ಸೆಕೆಂಡ್‌ಗಳಲ್ಲಿ ಮೊಬೈಲ್ ಸೋಲ್ಡ್ ಔಟ್ ಎಂದು ಕಾಣಿಸಿಬಿಡುತ್ತದೆ.

ಫ್ಲಾಶ್‌ಸೇಲ್‌ಗಲ್ಲಿ 1 ರೂ. ಗೆ ಮೊಬೈಲ್ ಖರೀದಿಸಲು ಯತ್ನಿಸಿರುವ ನಾವು ನೀವು ಸೇರಿದಂತೆ ಕೋಟ್ಯಾಂತರ ಜನರಿಗೆ ಈ ರೀತಿ ಆಗಿರುತ್ತದೆ. 1 ರೂ.ಗೆ ಮೊಬೈಲ್ ಖರೀದಿಸಲು ನಮಗೆ ಅದೃಷ್ಟವಿರಲಿಲ್ಲ ಎಂದು ನಾವು ಸುಮ್ಮನಾಗುತ್ತೇವೆ. ಆದರೆ, ಭಾರತದಂತಹ ದೇಶದಲ್ಲಿ ನಾವು ಹೀಗೆ ಸುಮ್ಮನಾಗಬಹುದು. ಆದರೆ, ಇಂಗ್ಲೆಂಡ್‌ನವರು ಮಾತ್ರ ಇದನ್ನು ಒಪ್ಪುವುದಿಲ್ಲ.

ಶಿಯೋಮಿಯಿಂದ ಭಾರೀ ಮೋಸ!..ಇಂಗ್ಲೆಂಡ್‌ನಲ್ಲಿ ಉಗಿಸಿಕೊಂಡು ಕ್ಷಮೆ ಕೇಳಿದ ಕಂಪೆನಿ!!

ಹೌದು, ಇತ್ತೀಚಿಗಷ್ಟೇ ಇಂಗ್ಲೆಂಡ್‌ಗೆ ಕಾಲಿಟ್ಟ ಶಿಯೋಮಿ 1 ರೂ. ಫ್ಲಾಶ್‌ಸೇಲ್ ಆಯೋಜಿಸಿ ಇಂಗ್ಲೆಂಡ್ ಜನರ ಗಮನಸೆಳೆದಿತ್ತು. ಇದಾದ ನಂತರ 1ರೂ. ಫ್ಲಾಶ್‌ಸೇಲ್ ಸಹ ಮುಗಿಯಿತು.ಆದರೆ, ಈಗ ಇಂಗ್ಲೆಂಡ್ ಜನರು ಶಿಯೋಮಿಯನ್ನು ಬೆಂಡೆತ್ತುತ್ತಿದ್ದಾರೆ. ಶಿಯೋಮಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಗೆದ್ದಿದ್ದಾರೆ. ಇದಕ್ಕಿಂತಲೂ ಮತ್ತೊಂದು ಗುರುತರ ಆರೋಪ ಒಂದು ಶಿಯೋಮಿ ಮೇಲೆ ಬಂದಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ ಎಂಬುದನ್ನು ಮುಂದೆ ಓದಿ.

ಇಂಗ್ಲೆಂಡ್‌ನಲ್ಲಿ ಶಿಯೋಮಿ ಫ್ಲಾಶ್‌ಸೇಲ್!

ಇಂಗ್ಲೆಂಡ್‌ನಲ್ಲಿ ಶಿಯೋಮಿ ಫ್ಲಾಶ್‌ಸೇಲ್!

ಇತ್ತೀಚಿಗಷ್ಟೇ ಶಿಯೋಮಿ ಕಂಪೆನಿ ಇಂಗ್ಲೆಂಡ್‌ಗೆ ಕಾಲಿಟ್ಟಿತು. ಈ ಕಾರಣಕ್ಕೆ ಅಲ್ಲಿ ಶಿಯೋಮಿ 1 ಪೌಂಡ್ (94 ರೂ.)ಮೊಬೈಲ್ ಫ್ಲಾಶ್‌ಸೇಲ್ ಅನ್ನು ಆಯೋಜಿಸಿತ್ತು. ಮಿ 8 ಲೈಟ್ ಮತ್ತು ಮಿ ಎ2 ಸ್ಮಾರ್ಟ್‌ಫೋನ್‌ಗಳನ್ನು 1 ಪೌಂಡ್ (94 ರೂ.)ಗೆ ಫ್ಲಾಶ್‌ಸೇಲ್‌ನಲ್ಲಿ ಮಾರಾಟ ಮಾಡುವುದಾಗಿ ಹೇಳಿಕೊಂಡಿತು. ಈಗ ಫ್ಲಾಶ್‌ಸೇಲ್ ಮುಗಿದಿದ್ದು, ಇಂಗ್ಲೆಂಡ್ ಜನರಿಂದ ಉಗಿಸಿಕೊಳ್ಳುತ್ತಿದೆ.

ಶಿಯೋಮಿಯನ್ನು ಬೆಂಡೆತ್ತಿದ ಇಂಗ್ಲೆಂಡ್‌ ಜನ!

ಶಿಯೋಮಿಯನ್ನು ಬೆಂಡೆತ್ತಿದ ಇಂಗ್ಲೆಂಡ್‌ ಜನ!

ಮಿ 8 ಲೈಟ್ ಮತ್ತು ಮಿ ಎ2 ಸ್ಮಾರ್ಟ್‌ಫೋನ್‌ಗಳನ್ನು 1 ಪೌಂಡ್ (94 ರೂ.)ಗೆ ಫ್ಲಾಶ್‌ಸೇಲ್‌ನಲ್ಲಿ ಮಾರಾಟ ಮಾಡುವುದಾಗಿ ಹೇಳಿಕೊಂಡ ಶಿಯೋಮಿ ಫ್ಲಾಶ್‌ಸೇಲ್‌ನಲ್ಲಿ ಮೊಬೈಲ್ ಖರೀದಿಸಲು ಇಂಗ್ಲೆಂಡ್ ಜನರು ಮುಂದಾದರು. ಆದರೆ, ಫ್ಲಾಶ್‌ಸೇಲ್‌ನಲ್ಲಿ ಮೊಬೈಲ್ ಖರೀದಿಸಲು ಸಾಧ್ಯವಾಗದ ಇಂಗ್ಲೆಂಡ್ ಜನರು ಶಿಯೋಮಿ ಕಂಪೆನಿಯಯನ್ನು ಟೀಕಿಸುತ್ತಿದ್ದಾರೆ.

ಶಿಯೋಮಿಯಿಂದ ಮೋಸ?

ಶಿಯೋಮಿಯಿಂದ ಮೋಸ?

ಶಿಯೋಮಿಯ 1 ಪೌಂಡ್ (94 ರೂ.) ಫ್ಲಾಶ್‌ಸೇಲ್ ಕ್ಷಣಮಾತ್ರದಲ್ಲಿ ಸೋಲ್ಡ್‌ಔಟ್ ಆಯಿತು. ಇದರಿಂದ ಕೆರಳಿದ ಇಂಗ್ಲೆಂಡ್ ಜನ ಫ್ಲಾಶ್‌ಸೇಲ್ ಪರೀಶೀಲನೆ ನಡೆಸಿದಾಗ ಶಿಯೋಮಿ ಒಟ್ಟು ನಾಲ್ಕು ಫ್ಲಾಶ್‌ಸೇಲ್‌ಗಳಲ್ಲಿ ಕೇವಲ 10 ಮೊಬೈಲ್‌ಗನ್ನು ಮಾರಾಟಕ್ಕೆ ಇಟ್ಟಿದ್ದು ಕಂಡುಬಂತು. ಇದನ್ನು ಶಿಯೋಮಿ ನಿಯಮಗಳು ಮತ್ತು ಷರತ್ತು ಪುಟದಲ್ಲಿ ಚಿಕ್ಕದಾಗಿ ಮಾತ್ರ ನಮೂದಿಸಿತ್ತು.

ಶಿಯೋಮಿ ಕ್ಷಮೆ ಕೇಳಲು ಪಟ್ಟು!

ಶಿಯೋಮಿ ಕ್ಷಮೆ ಕೇಳಲು ಪಟ್ಟು!

ನಾಲ್ಕು ಫ್ಲಾಶ್‌ಸೇಲ್‌ಗಳಲ್ಲಿ ಕೇವಲ 10 ಮೊಬೈಲ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದ ಶಿಯೋಮಿ ಕ್ಷಮೆ ಕೇಳಬೇಕೆಂದು ಅಲ್ಲಿನ ಜನ ಪಟ್ಟು ಹಿಡಿದರು. ಜನರಿಗೆ ದೊಡ್ಡದಾಗಿ ಜಾಹಿರಾತು ನೀಡುವ ಇದು ಮೋಸವಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದರು. ಇದಾದ ನಂತರ ಶಿಯೋಮಿ ಕಂಪೆನಿಯ ವಿರುದ್ಧ ಜಾಲತಾಣಗಳಲ್ಲಿ ಟೀಕಿಸಲು ಶುರುಮಾಡಿದರು. ಇದಕ್ಕೆ ಶಿಯೋಮಿ ಹೆದರಿತು.!

ಇಂಗ್ಲೆಂಡ್ ಕ್ಷಮೆ ಕೇಳಿದ ಶಿಯೋಮಿ!

ಇಂಗ್ಲೆಂಡ್ ಕ್ಷಮೆ ಕೇಳಿದ ಶಿಯೋಮಿ!

ಶಿಯೋಮಿ ಕಂಪೆನಿಯ ವಿರುದ್ಧ ಜಾಲತಾಣಗಳಲ್ಲಿ ಟೀಕಿಸಲು ಶುರುಮಾಡಿದ ನಂತರ ಶಿಯೋಮಿ ಕಂಪೆನಿ ಇಂಗ್ಲೆಂಡ್ ಜನರ ಕ್ಷಮೆ ಕೇಳಿದೆ. ಫ್ಲಾಶ್‌ಸೇಲ್‌ನಲ್ಲಿ ಸರಿಯಾದ ಮಾರ್ಗದಲ್ಲಿ ಜಾಹಿರಾತು ನೀಡದೇ ಇರುವುದನ್ನು ಒಪ್ಪಿಕೊಂಡಿದೆ. ಆದರೆ, ತಾನು ನೀಡಿದ ಆಫರ್‌ನಂತೆ 10 ಜನರು ಫ್ಲಾಶ್‌ಸೇಲ್‌ನಲ್ಲಿ ಮೊಬೈಲ್‌ಗಳನ್ನು ಖರೀದಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ. ಇದರ ಮೇಲೆ ಮತ್ತೊಂದು ಗುರುತರ ಆರೋಪ ಕೂಡ ಬಂದಿದೆ.!

ಫ್ಲಾಶ್‌ಸೇಲ್ ಅನ್ನುವುದೇ ಸುಳ್ಳು?

ಫ್ಲಾಶ್‌ಸೇಲ್ ಅನ್ನುವುದೇ ಸುಳ್ಳು?

10 ಜನರಿಗೆ 1 ಪೌಂಡ್ (94 ರೂ.) ಫ್ಲಾಶ್‌ಸೇಲ್ ಮೊಬೈಲ್ ಸಿಕ್ಕಿದೆ ಎನ್ನುವುದು ಸಹ ನಿಜವಲ್ಲ. ಫ್ಲಾಶ್‌ಸೇಲ್ ಟೈಮರ್ ಮುಕ್ತಾಯಗೊಂಡಾಗ "ಸೋಲ್ಡ್ ಔಟ್" ಬಟನ್ನೊಂದಿಗೆ "ಶೀಘ್ರದಲ್ಲೇ ಬರಲಿದೆ" ಬಟನ್ ಅನ್ನು ಬದಲಾಯಿಸಲು ನಿಮ್ಮ ವೆಬ್ಸೈಟ್ ಅನ್ನು ಕೋಡ್ ಮಾಡಲಾಗಿತ್ತು. ಹಾಗಾಗಿ, ಈ ಖರೀದಿ ಆಯ್ಕೆ ಎಂದಿಗೂ ಇರಲಿಲ್ಲ ಎಂದು ಕಮೆಂಟ್‌ನಲ್ಲಿ ಒಬ್ಬರು ಬರೆದಿದ್ದಾರೆ.

ಫ್ಲಾಶ್‌ಸೇಲ್ ಕೂಡ ಮೋಸವೇ?

ಫ್ಲಾಶ್‌ಸೇಲ್ ಕೂಡ ಮೋಸವೇ?

ಮೊಬೈಲ್ ಕಂಪೆನಿಗಳು ತಮ್ಮ ಮೊಬೈಲ್‌ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಏನೆಲ್ಲಾ ಐಡಿಯಾ ಮಾಡುತ್ತವೆ ಎಂಬುದಕ್ಕೆ 1ರೂ. ಮೊಬೈಲ್ ಫ್ಲಾಶ್‌ಸೇಲ್ ಉದಾಹರಣೆಯಾಗಬಹುದು. 1ರೂ.ಗೆ ಮೊಬೈಲ್ ಖರೀದಿಸಿ ಎಂದು ಜಾಹಿರಾತು ನೀಡುವ ಮೂಲಕ ತನ್ನ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ಅವುಗಳ ಈ ತಂತ್ರ ಒಂದು ರೀತಿಯಲ್ಲಿ ಮೋಸವೇ ಹೌದು.

Best Mobiles in India

English summary
Xiaomi, UK, mobile, smartphone, ಇಂಗ್ಲೆಂಡ್‌, ಶಿಯೋಮಿ, ಮೊಬೈಲ್, ಫ್ಲಾಶ್‌ಸೇಲ್, news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X