Home
ಸುದ್ದಿಜಾಲ

ಅಕ್ಟೋಬರ್ 16ರಿಂದ ಶುರುವಾಗಲಿದೆ ಶಿಯೋಮಿ ‘ದೀಪಾವಳಿ ವಿತ್ ಮಿ’ ಸೇಲ್‌!

ದೇಶದಲ್ಲಿ ಹಬ್ಬದ ದಿನಗಳು ಶುರುವಾಗ್ತಿದ್ದ ಹಾಗೇ ಇ-ಕಾಮರ್ಸ್‌ ತಾಣಗಳು ಸಾಕಷ್ಟು ಆಫರ್‌ಗಳನ್ನ ನಿಡೋಕೆ ಶುರುಮಾಡಿವೆ. ಇ-ಕಾಮರ್ಸ್‌ ತಾಣಗಳು ಫೇಸ್ಟಿವಲ್‌ ಸೀಸನ್‌ ಸಮಯದಲ್ಲಿ ಫೇಸ್ಟಿವಲ್‌ ಸೇಲ್‌ ಆಪರ್‌ಗಳನ್ನ ನಿಡುತ್ತವೆ. ಈಗಾಗಲೇ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ತಮ್ಮದೇ ಆದ ಫೇಸ್ಟಿವಲ್‌ ಸೇಲ್‌ ಅನ್ನು ಆರಂಬಿಸಿವೆ. ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಶಿಯೋಮಿ ತನ್ನದೇ ಆದ ದೀಪಾವಳಿ ವಿಥ್‌‌ ಮಿ ಸೇಲ್‌ ಅನ್ನು ಘೋಷಣೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ತನ್ನ ದೀಪಾವಳಿ ವಿಥ್‌ ಮಿ ಸೇಲ್‌ ಅನ್ನು ಘೋಷಿಸಿದ್ದು, ಹಬ್ಬದ ಬ್ಯಾಂಡ್‌ವ್ಯಾಗನ್‌ಗೆ ಜಂಪ್‌ ಮಾಡಿದೆ. ಶಿಯೋಮಿ ಅಕ್ಟೋಬರ್ 16 ರಿಂದ ಮಿ.ಕಾಂನಲ್ಲಿ ತನ್ನದೇ ಆದ ದೀಪಾವಳಿ ಸೇಲ್‌ ಅನ್ನು ಆಯೋಜಿಸುತ್ತಿದೆ. ಇದು ಗೋಲ್ಡ್, ಪ್ಲಾಟಿನಂ ಮತ್ತು ಡೈಮಂಡ್ ವಿಐಪಿ ಸದಸ್ಯರಿಗೆ ಆರಂಭಿಕ ಪ್ರವೇಶವನ್ನು ನೀಡುತ್ತದೆ. ಅಕ್ಟೋಬರ್ 15 ರಿಂದ ಈ ಚಂದಾದಾರರಿಗೆ ಪ್ರವೇಶ ಪ್ರಾರಂಭವಾಗಲಿದೆ. ಈ ಮೂಲಕ ಶಿಯೋಮಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನ ನಿಡೋಕೆ ಮುಂದಾಗಿದೆ. ಇನ್ನುಳಿದಂತೆ ಶಿಯೋಮಿ ವಿಥ್‌ ಮಿ ಫೆಸ್ಟಿವಲ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

‘ದೀಪಾವಳಿ ವಿಥ್‌ ಮಿ' ಸೇಲ್‌

ಹಬ್ಬದ ಸೀಸನ್‌ ಪ್ರಯುಕ್ತ ಇ-ಕಾಮರ್ಸ್‌ ತಾಣಗಳು ಪೈಪೋಟಿಗೆ ಬಿದ್ದವರಂತೆ ಗ್ರಾಹಕರಿಗೆ ಭರ್ಜರಿ ಆಪರ್‌ಗಳನ್ನ ನೀಡುತ್ತಿವೆ. ತಮ್ಮದೇ ಆದ ಸೇಲ್‌ ಅನ್ನು ಆಯೋಜಿಸಿವೆ. ಇದೇ ಕಾರಣಕ್ಕೆ ಶಿಯೋಮಿ ಸಂಸ್ಥೆ ಕೂಡ ಮಿ.ಕಾಂನಲ್ಲಿ ‘ದೀಪಾವಳಿ ವಿಥ್‌ ಮಿ' ಸೇಲ್‌ಗೆ ಮುಂದಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರಿಗೆ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ನೀಡಲು ಆಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದೊಂದಿಗೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಇತರ ಸೇಲ್‌ ನಂತೆಯೇ, ಕಂಪನಿಯು ಮಾರಾಟ ಮಾಡುವ ಫೋನ್‌ಗಳು ಮತ್ತು ಪರಿಕರಗಳ ಬೆಲೆ ಕಡಿತವನ್ನೂ ಸಹ ಮಾಡಲಿದೆ ಎನ್ನಲಾಗಿದೆ.

'ದೀಪಾವಳಿ ವಿಥ್‌ ಮಿ' ಸೇಲ್

ಇನ್ನು ಶಿಯೋಮಿ 'ದೀಪಾವಳಿ ವಿಥ್‌ ಮಿ' ಸೇಲ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳು ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸುವ ಖರೀದಿದಾರರಿಗೆ 1,000 ತ್ವರಿತ ರಿಯಾಯಿತಿಯನ್ನು ನೀಡಲಿದೆ. ‘ದೀಪಾವಳಿ ವಿಥ್ ಮಿ' ಸೇಲ್‌ ಆರು ದಿನಗಳವರೆಗೆ ನಡೆಯಲಿದ್ದು, ಅಕ್ಟೋಬರ್ 21ರಂದು ಕೊನೆಗೊಳ್ಳಲಿದೆ. ಇನ್ನು ಗೋಲ್ಡ್, ಪ್ಲಾಟಿನಂ ಮತ್ತು ಡೈಮಂಡ್ ವಿಐಪಿ ಸದಸ್ಯರಿಗೆ ಆರಂಭಿಕ ಪ್ರವೇಶ ಸಿಗಲಿದೆ ಎಂದು ಮಿ ಇಂಡಿಯಾ ಮತ್ತು ಶಿಯೋಮಿ ಇಂಡಿಯಾ ಮುಖ್ಯಸ್ಥ ಮನು ಕುಮಾರ್ ಜೈನ್ ಹೇಳಿದ್ದಾರೆ.

ಶಿಯೋಮಿ ವಿಥ್‌ ಮಿ ಸೇಲ್‌

ಇದಲ್ಲದೆ ಶಿಯೋಮಿ ವಿಥ್‌ ಮಿ ಸೇಲ್‌ನಲ್ಲಿ ಕಂಪನಿಯು ರೆಡ್‌ಮಿ ಇಯರ್‌ಬಡ್ಸ್ 2c ಮತ್ತು ರೆಡ್‌ಮಿ ಸೋನಿಕ್ ಬಾಸ್ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಸಹ ರಿಯಾಯತಿ ದರದಲ್ಲಿ ನೀಡಲಿದೆ. ಅಲ್ಲದೆ ಶಿಯೋಮಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಕೂಡ ಬೆಲೆ ಕಡಿತಗೊಳ್ಳುವ ಸಾಧ್ಯತೆ ಇದೆ.ಜೊತೆಗೆ ನೋ ಕಾಸ್ಟ್‌ EMI ಮತ್ತು ಹೊಸ ಫೋನ್‌ಗಳಲ್ಲಿ ಕ್ಯಾಶ್‌ಬ್ಯಾಕ್‌ಗಳೊಂದಿಗೆ ನಿರೀಕ್ಷಿಸಬಹುದಾಗಿದೆ.

Best Mobiles in India

English summary
Xiaomi has announced its Diwali With Mi sale, jumping on to the festival bandwagon. With Amazon and Flipkart hosting their own festive sales, Xiaomi is hosting its very own Diwali sale from October 16 on Mi.com.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+