ಭಾರತದಲ್ಲಿ ಶಿಯೋಮಿ ಮಾರಾಟ ಮಾಡಿರುವ ಒಟ್ಟು ಸ್ಮಾರ್ಟ್‌ಫೋನ್‌ಗಳು ಎಷ್ಟು ಗೊತ್ತಾ?

|

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೂಲಕ ದೇಶದ ನಂ.1 ಮೊಬೈಲ್ ಮಾರಾಟಗಾರನಾಗಿರುವ ಶಿಯೋಮಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಶಿಯೋಮಿ ಕಂಪೆನಿ ತನ್ನ ಕಾರ್ಯಾಚರಣೆ ಆರಂಭಿಸಿದ ಕೇವಲ ಐದು ವರ್ಷಗಳಲ್ಲೇ ದೇಶದಲ್ಲಿ 100 ಮಿಲಿಯನ್ ಸ್ಮಾರ್ಟ್‌ಪೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದ್ದು, ರೆಡ್ಮಿ ಎ ಮತ್ತು ರೆಡ್ಮಿ ನೋಟ್ ಸರಣಿಗಳು ದೇಶದ ಎರಡು ಜನಪ್ರಿಯ ಸ್ಮಾರ್ಟ್‌ಫೋನ್ ಸರಣಿಗಳಾಗಿವೆ ಎಂಬುದನ್ನು ಸಹ ಕಂಪನಿಯು ಬಹಿರಂಗಪಡಿಸಿದೆ.

ದೇಶದ ನಂ.1 ಮೊಬೈಲ್ ಮಾರಾಟಗಾರ

ಹೌದು, 2019ನೇ ವರ್ಷದ ಎರಡನೇ ತ್ರೈ ಮಾಸಿಕದಲ್ಲೂ ಕೂಡ ದೇಶದ ನಂ.1 ಮೊಬೈಲ್ ಮಾರಾಟಗಾರ ಕಂಪೆನಿ ಎಂದು ಕರೆಸಿಕೊಂಡ ನಂತರ ಭಾರತದ ಶಿಯೋಮಿ ಕಂಪೆನಿ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ನಮ್ಮ ಮುಂದೆ ಮಾರುಕಟ್ಟೆಗೆ ಇಗಾಗಲೇ ಪ್ರವೇಶಿಸಿದ ಬ್ರ್ಯಾಂಡ್‌ಗಳು ಇದ್ದವು. ಆದರೆ, ನಾವು ಸಾಧಿಸಿದ ಬೆರಗುಗೊಳಿಸುವ ಸಾಧನೆಗೆ ಎಲ್ಲಿಯೂ ಹತ್ತಿರವಿಲ್ಲ" ಎಂದು ಶಿಯೋಮಿಯ ಉಪಾಧ್ಯಕ್ಷ ಮನು ಕುಮಾರ್ ಜೈನ್ ಅವರು ಕಂಪೆನಿ ಸಾಧನೆಯನ್ನು ಕೊಂಡಾಡಿದ್ದಾರೆ.

100 ಮಿಲಿಯನ್ ಸ್ಮಾರ್ಟ್‌ಪೋನ್‌

2019ನೇ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಶೇ 28.31 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಶಿಯೋಮಿ ಸತತ ಎಂಟು ತ್ರೈಮಾಸಿಕಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಬ್ರಾಂಡ್‌ನಲ್ಲಿ ಮುಂಚೂಣಿಯಲ್ಲಿದೆ ಮತ್ತು ಕೇವಲ ಐದು ವರ್ಷಗಳಲ್ಲೇ ದೇಶದಲ್ಲಿ 100 ಮಿಲಿಯನ್ ಸ್ಮಾರ್ಟ್‌ಪೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ರೆಡ್‌ಮಿ 6 ಎ ಮತ್ತು ರೆಡ್‌ಮಿ ನೋಟ್ 7 ಪ್ರೊ ಉದ್ಯಮದಲ್ಲಿ ಹೆಚ್ಚು ಮಾರಾಟವಾದ ಎರಡು ಸ್ಮಾರ್ಟ್‌ಫೋನ್‌ಗಳಾಗಿವೆ ಎಂದು ಕಂಪನಿ ತಿಳಿಸಿದೆ.

ಸ್ಮಾರ್ಟ್ ಹೋಮ್ ಸಾಧನಗಳನ್ನು ಬಿಡುಗಡೆ ಮಾಡಲಿದೆ

ಈ ಮಧ್ಯೆ ಶಿಯೋಮಿ ಸೆಪ್ಟೆಂಬರ್ 17 ರಂದು ಭಾರತದಲ್ಲಿ ತನ್ನ ಸ್ಮಾರ್ಟ್ ಸಾಧನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಕಂಪನಿಯು ಪತ್ರಿಕಾ ಆಹ್ವಾನಗಳನ್ನು ಕಳುಹಿಸಿದ್ದು, ಕಂಪನಿಯು ಅನೇಕ ಸ್ಮಾರ್ಟ್ ಹೋಮ್ ಸಾಧನಗಳನ್ನು ಬಿಡುಗಡೆ ಮಾಡಲಿದೆ ಎಂದು ಮನು ಕುಮಾರ್ ಜೈನ್ ಅವರು ಅವರು ಖಚಿತಪಡಿಸಿದ್ದಾರೆ. ಸೆಪ್ಟೆಂಬರ್ 17 ರಂದು ಶಿಯೋಮಿಯ ನೂತನ ಮಿ ಸ್ಮಾರ್ಟ್ ಎಲ್ಇಡಿ ಟಿವಿಗಳು ಮತ್ತು ಕೆಲವು ಐಒಟಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಅತ್ಯುತ್ತಮ ಸ್ಮಾರ್ಟ್‌ಪೋನ್

ಕಳೆದ ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಮನೆಮಾತಾಗಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ತಂದ ಬದಲಾವಣೆಯು ಟೆಲಿಕಾಂನಲ್ಲಿ ಜಿಯೋ ತಂದ ಬದಲಾವಣೆಯಷ್ಟೇ ವೇಗವಾಗಿತ್ತು. 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಪೋನ್ ಒಂದನ್ನು ಗ್ರಾಹಕರಿಗೆ ನೀಡಬಹುದು ಎಂದು ಶಿಯೋಮಿ ಕಂಪೆನಿ ತೋರಿಸಿಕೊಟ್ಟಿತ್ತು. ಇದರಿಂದ ಓರ್ವ ಸಾಮಾನ್ಯನು ಕೂಡ ಇತ್ತೀಚಿನ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಸಾಧ್ಯವಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

Best Mobiles in India

English summary
Xiaomi also claimed that it has been leading smartphone brand in India for eight consecutive quarters, with a 28.31 percent market share for Q2 2019. The company noted that the Redmi 6A and the Redmi Note 7 Pro were the two best-selling smartphones in the industry for Q2 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X