Home
ಸುದ್ದಿಜಾಲ

72ನೇ ಸ್ವಾತಂತ್ರ್ಯೋತ್ಸವಕ್ಕೆ ಗ್ರಾಹಕರಿಗೆ ಶಿಯೋಮಿ ಗಿಫ್ಟ್‌..!

By Gizbot Bureau

ಶಿಯೋಮಿ ಸಂಸ್ಥೆ ಅಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 4 ದಿನಗಳ ವಿಶೇಷ ಮಾರಾಟವನ್ನು ಆಯೋಜಿಸಿದ್ದು ಇಂದಿನಿಂದ ಅದು ಆರಂಭವಾಗಿದೆ. ಈಗಾಗಲೇ ಸೇಲ್ Mi.com ನಲ್ಲಿ ಲೈವ್ ಆಗಿದ್ದು, ಅಗಸ್ಟ್ 12 ರ ವರೆಗೆ ಚಾಲ್ತಿಯಲ್ಲಿ ಇರಲಿದೆ. ಈ ಸೇಲ್ ನಲ್ಲಿನ ಪ್ರಮುಖ ಡೀಲ್ ಗಳೆಂದರೆ Mi Mix 2, Mi Max 2, Mi Band 2 ಮತ್ತು ಇನ್ನು ಹಲವು ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತಿದೆ.

Mi Mix 2 ಮೇಲೆ 5000 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತಿದೆ. 24999 ರುಪಾಯಿಯ ಈ ಫೋನ್ 5000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಅಂದರೆ ಕೇವಲ 19,999 ರುಪಾಯಿಗೆ ಗ್ರಾಹಕರು ಖರೀದಿಸಬಹುದಾದ ಅವಕಾಶವಿದೆ. Mi Max 2 ಗೆ 1000 ರುಪಾಯಿ ಮತ್ತು Mi Band 2 ಗೆ 200 ರುಪಾಯಿಯ ರಿಯಾಯಿತಿ ಇದೆ.

72ನೇ ಸ್ವಾತಂತ್ರ್ಯೋತ್ಸವಕ್ಕೆ ಗ್ರಾಹಕರಿಗೆ ಶಿಯೋಮಿ ಗಿಫ್ಟ್‌..!

ಶಿಯೋಮಿ Mi Mix 2 2017 ರಲ್ಲಿ ಬಿಡುಗಡೆಗೊಂಡಿದೆ. ಈ ಫೋನ್ 5.99- ಇಂಚಿನ ಡಿಸ್ಪ್ಲೇ ಜೊತೆಗೆ 1080*2160 ಪಿಕ್ಸಲ್ ರೆಸಲ್ಯೂಷನ್ ಹೊಂದಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ನ್ನು ಒಳಗೊಂಡಿದ್ದು 6ಜಿಬಿ ಮೆಮೊರಿಯೊಂದಿಗೆ ಬರುತ್ತದೆ. 128 ಜಿಬಿಯ ನಾನ್-ಎಕ್ಸ್ ಪಾಂಡೇಬಲ್ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದರಲ್ಲಿದೆ. 3400mAh ನಾನ್- ರಿಮೂವೇಬಲ್ ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ. ಶಿಯೋಮಿ Mi MIX 2 12-ಮೆಗಾಪಿಕ್ಸಲ್ ನ ಪ್ರೈಮರಿ ಹಿಂಭಾಗ ಕ್ಯಾಮರಾ ಮತ್ತು 5 ಮೆಗಾಪಿಕ್ಸಲ್ ನ ಮುಂಭಾಗದ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ.

Mi Max 2 ಗೂ ಕೂಡ ಅಧ್ಬುತ ಆಫರ್ ಇದೆ. ಇದು ಕೂಡ 2017 ರಲ್ಲಿ ಬಿಡುಗಡೆಗೊಂಡಿರುವ ಫೋನ್ ಆಗಿದೆ. ಶಿಯೋಮಿ ಎಂಐ ಮ್ಯಾಕ್ಸ್ ವೈಶಿಷ್ಟ್ಯತೆಯೆಂದರೆ ಇದು 6.44- ಇಂಚಿನ ಡಿಸ್ಪ್ಲೆ ಹೊಂದಿದ್ದು 1080* 1920 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಭಾರತದಲ್ಲಿ ಇದರ ಮಾರಾಟದ ಬೆಲೆ 13,999 ರುಪಾಯಿಗಳು.

2GHz ಆಕ್ಟಾ-ಕೋರ್ ಪ್ರೊಸೆಸರ್ ನ್ನು ಇದು ಹೊಂದಿದೆ ಮತ್ತು 4ಜಿಬಿ ಮೆಮೊರಿಯನ್ನು ಒಳಗೊಂಡಿದೆ. 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 ಜಿಬಿ ವರೆಗೂ ಹಿಗ್ಗಿಸಿಕೊಳ್ಳಲು ಅವಕಾಶವಿದೆ. ಶಿಯೋಮಿ ಎಂಐ ಮ್ಯಾಕ್ಸ್ 2 ನಲ್ಲಿ 12ಎಂಪಿ ಪ್ರೈಮರಿ ಕ್ಯಾಮರಾ ಹಿಂಭಾಗದಲ್ಲಿದ್ದು 5ಎಂಪಿ ಸೆಲ್ಫೀ ಕ್ಯಾಮರಾವಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಮತ್ತು ಎಂಐ LED TV ಕೂಡ ಕಡಿಮೆ ಬೆಲೆಯಲ್ಲಿ ಶಿಯೋಮಿ ಇಂಡಿಪೆಂಡೆನ್ಸ್ ಡೇ ಸೇಲ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಓಪಲ್ ಸೇಲ್ ಎಂದರೆ ಡಿವೈಸ್ ಗಳು ಸ್ಟಾಕ್ ನಲ್ಲಿದ್ದು ನೀವು ಈಗಲೇ ಖರೀದಿಸಬಹುದು ಎಂದರ್ಥ. ಶಿಯೋಮಿ ಡಿವೈಸ್ ಗಳು ಫ್ಲ್ಯಾಶ್ ಸೇಲ್ ನಲ್ಲಿ ಮಾರಾಟವಾಗುತ್ತದೆ ಮತ್ತು ಬಹಳ ಬೇಗನೆ ಔಟ್ ಆಫ್ ಸ್ಟಾಕ್ ಆಗಿ ಬಿಡುತ್ತದೆ. ಆದರೆ ಈ ಸ್ವಾತಂತ್ರ್ಯೋತ್ಸವ ಸೇಲ್ ನಲ್ಲಿ ಖರೀದಿಸುವುದರಿಂದಾಗಿ ನೀವು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಿದೆ.

ಶಿಯೋಮಿ ಎಂಐ ಎ2 ವನ್ನು ಅಗಸ್ಟ್ 8 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಸದ್ಯ ಪ್ರೀ ಆರ್ಡರ್ ಮಾಡಲು ಅಮೇಜಾನ್ ಇಂಡಿಯಾ ಮತ್ತು ಎಂಐ.ಕಾಮ್ ನಲ್ಲಿ ಇವತ್ತಿನಿಂದ ಸಾಧ್ಯವಾಗುತ್ತಿದೆ. ಇದರ ಸೇಲ್ ಅಗಸ್ಟ್ 16 ರ ನಂತರ ಎರಡೂ ವೆಬ್ ಸೈಟ್ ಗಳಲ್ಲಿ ನಡೆಯಲಿದೆ. ಈ ಸ್ಮಾರ್ಟ್ ಫೋನ್ ನ 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವರ್ಷನ್ ನ ಬೆಲೆ 16,999 ರುಪಾಯಿಗಳಾಗಿದೆ. ಎಲ್ಲಾ ಶಿಯೋಮಿ ಪ್ರಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Best Mobiles in India

English summary
Xiaomi Independence Day sale is live: Everything to know. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+